News Kannada
Saturday, October 08 2022

ಕರ್ನಾಟಕ

ಮಂಡ್ಯದಲ್ಲಿ ಬುದ್ಧಿಮಾಂದ್ಯೆಯನ್ನು ವಿವಸ್ತ್ರಗೊಳಿಸಿದ ಕಾಮುಕರು - 1 min read

Photo Credit :

ಮಂಡ್ಯದಲ್ಲಿ ಬುದ್ಧಿಮಾಂದ್ಯೆಯನ್ನು ವಿವಸ್ತ್ರಗೊಳಿಸಿದ ಕಾಮುಕರು

ಮಂಡ್ಯ: ನಾಗಮಂಗಲ ತಾಲೂಕಿನ ಗಡಿಗ್ರಾಮ ಗಂಗಾಧರನಾಥನಗರದಲ್ಲಿ ಬಟ್ಟೆ ಒಗೆಯಲು ನೀರಿನ ಕಟ್ಟೆಗೆ ತೆರಳಿದ್ದ ಬುದ್ಧಿಮಾಂದ್ಯ ಅಪ್ರಾಪ್ತೆಯನ್ನು ಪುಸಲಾಯಿಸಿ ಬೈಕ್ನಲ್ಲಿ ಕರೆದೊಯ್ದ ಇಬ್ಬರು ಕಾಮುಕರು, ಆಕೆಯನ್ನು ವಿವಸ್ತ್ರಗೊಳಿಸಿದ್ದು, ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಾಗಮಂಗಲ ಹಾಗೂ ತುರುವೇಕೆರೆ ತಾಲೂಕಿನ ಗಡಿ ಭಾಗದಲ್ಲಿರುವ ಡಣಾಯಕನಪುರ ಗ್ರಾಮದ ಮಂಜು (32) ಹಾಗೂ ಕುಮಾರ (28) ಕಾಮುಕ ಬಂಧಿತರು. ಇವರು ಗುರುವಾರ ಮಧ್ಯಾಹ್ನ 3.30ರ ಸಮಯದಲ್ಲಿ ತಾಲೂಕಿನ ಗಂಗಾಧರನಾಥನಗರದ 16 ವರ್ಷದ ಬುದ್ಧಿಮಾಂದ್ಯ ಅಪ್ರಾಪ್ತೆಯು ಬಟ್ಟೆ ಒಗೆಯಲು ಗ್ರಾಮದ ಹೊರವಲಯದ ನೀರಿನ ಕಟ್ಟೆ ಕಡೆಗೆ ತೆರಳಿದ ವೇಳೆ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಪುಸಲಾಯಿಸಿ ತಮ್ಮ ಬೈಕ್ಗೆ ಹತ್ತಿಸಿಕೊಂಡು ಸಮೀಪದ ಅರಣ್ಯ ಪ್ರದೇಶದ ಕಡೆಗೆ ಕರೆದೊಯ್ದಿದ್ದಾರೆ.

ಬಾಲಕಿಯನ್ನು ಕರೆದೊಯ್ದದನ್ನು ನೋಡಿದ ಸ್ಥಳೀಯರು ಹಿಂಬಾಲಿಸಿಕೊಂಡು ಹೋಗಿ ನೋಡುವಷ್ಟರಲ್ಲಿ ಬಾಲಕಿಯನ್ನು ವಿವಸ್ತ್ರಗೊಳಿಸಿದ್ದ ಕಾಮುಕರು ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ.

ಬಾಲಕಿಯ ಸ್ಥಿತಿಯನ್ನು ನೋಡಿದ ಗ್ರಾಮಸ್ಥರು ಅತ್ಯಾಚಾರ ಎಸಗಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದು, ಬೆಳ್ಳೂರು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಕಾಯರ್ಾಚಾರಣೆ ನಡೆಸಿದ ಪೊಲೀಸರು ಡಣಾಯಕನಪುರ ಗ್ರಾಮದ ಮಂಜು ಹಾಗೂ ಕುಮಾರ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕವಷ್ಟೆ ಅತ್ಯಾಚಾರ ನಡೆದಿದೆಯಾ ಎಂಬುದರ ಬಗ್ಗೆ ತಿಳಿಯಬೇಕಿದೆ.

See also  ವಿರೋಧ ಪಕ್ಷಗಳಿಗೆ ಟೀಕಿಸಲು ಪದಗಳೇ ಇಲ್ಲ: ಖಾದರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು