News Kannada
Sunday, September 25 2022

ಕರ್ನಾಟಕ

ಸತತ ಮಳೆ ಭತ್ತದ ಬೆಳೆ ನಾಶ - 1 min read

Photo Credit :

ಸತತ ಮಳೆ ಭತ್ತದ ಬೆಳೆ ನಾಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದ್ದು ಮಳೆಯಿಂದ ನೀರು ಒಂದೇ ಸಮನೆ ಏರಿದ್ದರಿಂದ ಸಾಕಷ್ಟು ರೈತರ ಭತ್ತದ ಬೆಳೆ ಸಂಪೂರ್ಣ ಹಾಳಾಗಿದ್ದು ಲಕ್ಷಾಂತರ ರೂ. ನಷ್ಟವನ್ನು ರೈತರು ಅನುಭವಿಸುವಂತಾಗಿದೆ.

ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಭಟ್ಕಳ, ಶಿರಸಿ-ಸಿದ್ದಾಪುರ ಸೇರಿದಂತೆ ಇನ್ನಿತರ ತಾಲೂಕಿನಲ್ಲಿ ಸಾಕಷ್ಟು ಮಳೆಯಾಗಿದ್ದು ಭತ್ತದ ಪೈರು ನಾಶವಾದ ಬಗ್ಗೆ ವರದಿಯಾಗಿದೆ. ಮಳೆಯಿಂದಾಗಿ ಕಾರವಾರದ ಅಮದಳ್ಳಿಯ ಬಾಳೆರಾಶಿ ಎನ್ನುವಲ್ಲಿ ಹಳ್ಳದ ನೀರು ಏಕಾ ಏಕಿ ಏರಿಯಾಗಿದ್ದರಿಂದ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಗೊಳಗಾಗಿದೆ.
ಇಲ್ಲಿನ ರೈತ ಥಾಕು ದೇವಾ ಗೌಡ ಎಂಬುವವರಿಗೆ ಸೇರಿದ ಭತ್ತದ ಹೊಲಕ್ಕೆ ಮುಖ್ಯ ಕಾಲುವೆಯ ಒಡ್ಡು ಒಡೆದು ನೀರು ನುಗ್ಗಿದ ಪರಿಣಾಮ ಒಂದು ಎಕರೆಯಷ್ಟು ಜಮೀನಿನಲ್ಲಿ ಬೆಳೆದ ಬತ್ತದ ಬೆಳೆ ಸಂಪೂರ್ಣ ಕೊಚ್ಚಿ ಹೋಗಿದೆ. ಇನ್ನೇನು ೧೫ ದಿನಗಳಲ್ಲಿ ಕೊಯ್ಲಿಗೆ ಬರಲಿದ್ದ ಭತ್ತದ ಫಸಲು ಈ ರೀತಿ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದೆ.

ರಾತ್ರಿ ಸುರಿದ ಭಾರೀ ಮಳೆಯಿಂದ ಎಲ್ಲೆಡೆ ನೀರು ಭರ್ತಿಯಾಗಿ ಹಲವರ ಮನೆಯ ಮೆಟ್ಟಿಲುಗಳ ವರೆಗೂ ನೀರು ತುಂಬಿದ್ದು ಕೊಡ, ಬಕೇಟ್, ನೀರು ಕಾಯಿಸುವ ಹಂಡೆ ಮುಂತಾದ ವಸ್ತುಗಳು ನೀರಿನಲ್ಲಿ ತೇಲಿ ಹೋಗಿದ್ದವು. ರವಿವಾರ ಬೆಳಿಗ್ಗೆ ಹುಡುಕಿದಾಗ ಕೆಲವು ವಸ್ತುಗಳು ಮಾತ್ರ ದೊರಕಿದ್ದು ಇನ್ನೂ ಕೆಲವು ನೀರಿನಲ್ಲಿ ಕೊಚ್ಚಿಹೋಗಿ ನಷ್ಟವಾಗಿದೆ. ಜಿಲ್ಲೆಯ ಇನ್ನಿತರ ತಾಲೂಕಿನಲ್ಲೂ ಭತ್ತದ ಬೆಳೆ ಈಗ ಕೊಯ್ಲಿಗೆ ತಲುಪಿದ್ದವು ಎಡಬಿಡದೆ ಸುರಿದ ಮಳೆ ರೈತರ ಬೆಳೆ ನಾಶ ಮಾಡಿದೆ.

ಶಾಶ್ವತ ಪರಿಹಾರಕ್ಕೆ ಆಗ್ರಹ: ಬಾಳೆರಾಶಿಯಲ್ಲಿ ಬೆಟ್ಟದಿಂದ ಹರಿದು ಬರುವ ಮಳೆಯ ನೀರು ಮುಖ್ಯ ಹಳ್ಳದ ಮೂಲಕ ಸಾಗಿ ಸಮುದ್ರವನ್ನು ಸೇರುತ್ತದೆ. ಆದರೆ ಈ ಮಧ್ಯೆಯೇ ಜನವಸತಿ ಪ್ರದೇಶ ಹಾಗೂ ಕೃಷಿ ಜಮೀನು ಪ್ರದೇಶವು ಇದೆ. ಭಾರೀ ಮಳೆಯ ಸಂದರ್ಭದಲ್ಲಿ ಈ ಹಳ್ಳದ ನೀರು ತುಂಬಿ ಹರಿದು ಕೃಷಿ ಜಮೀನಿಗೆ ಹಾಗೂ ಜನವಸತಿ ಪ್ರದೇಶಕ್ಕೆ ಪ್ರತಿ ವರ್ಷ ನುಗ್ಗುವುದರಿಂದ ಜನಸಾಮಾನ್ಯರು ನಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವುದು ಈ ಭಾಗದ ಜನರ ಆಗ್ರಹವಾಗಿದೆ.

ಶೀಘ್ರವೇ ಹಳ್ಳಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಿ ನೀರು ಒಳ ನುಗ್ಗಿ ಬೆಳೆ ಆಸ್ತಿ ಪಾಸ್ತಿ ಹಾನಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎನ್ನುವುದು ಜನ ಒತ್ತಾಯಿಸಿದ್ದಾರೆ.

See also  ರಾಹುಲ್ ರೋಡ್ ಶೋಗೆ ಯಳಂದೂರಿನಲ್ಲಿ  ಸ್ಥಳ ಪರಿಶೀಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು