News Kannada
Tuesday, October 04 2022

ಕರ್ನಾಟಕ

ಪ್ರಿಯಕರನ ಜತೆ ಸೇರಿ ತನ್ನ ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ತಾಯಿ - 1 min read

Photo Credit :

ಪ್ರಿಯಕರನ ಜತೆ ಸೇರಿ ತನ್ನ ಮಗಳಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ ತಾಯಿ

ಕೊಪ್ಪಳ: ಹೆತ್ತ ತಾಯಿ ತನ್ನ ಪ್ರಿಯಕರನೊಂದಿಗೆ ಸೇರಿ ಮಗಳಿಗೆ ಬಾಸುಂಡೆ ಬರುವ ಹಾಗೇ ಹೊಡೆದಿರುವ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಈ ಘಟನೆ ಗಂಗಾವತಿಯ ಹಿರೇಜಂತಕಲ್ ನಲ್ಲಿ ಹದಿನೈದು ದಿನದ ಹಿಂದೆ ನಡೆದಿದೆ.  ಷರೀಫ್ ಹಾಗೂ ಫಾತೀಮಾಗೆ ಹತ್ತು ವರ್ಷದ ಹಿಂದೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಆದರೆ ಫಾತೀಮಾ ಈಚೆಗೆ ರಾಜಾಭಕ್ಷಿ ಎಂಬಾತನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳಂತೆ. ಇದನ್ನು ತಿಳಿದ ಪತಿ ಷರೀಫ್ ಪತ್ನಿ ಫಾತೀಮಾಗೆ ತಲಾಖ್ ನೀಡಿದ್ದಾರೆ.

ವಿಚ್ಛೇದನದ ಬಳಿಕ ಮಕ್ಕಳಿಗೆ 18 ವರ್ಷ ತುಂಬುವವರೆಗೆ ತಾಯಿ ಜತೆ ಇರಲಿ ಅಂತ ಬಿಟ್ಟಿದ್ದಾರೆ. ಹಾಗಾಗಿ ಫಾತೀಮಾ ತನ್ನ ಮಕ್ಕಳೊಂದಿಗೆ ಪ್ರಿಯಕರ ರಾಜಾಭಕ್ಷಿ ಜತೆ ವಾಸವಾಗಿದ್ದಳು. ಆದರೆ ಮಕ್ಕಳು ಇರುವುದರಿಂದ ತೊಂದರೆಯಾಗುತ್ತದೆ ಎಂದು ತಿಳಿದ ರಾಜಾಭಕ್ಷಿ ಹಾಗೂ ಫಾತೀಮಾ ಸೇರಿ ಐದು ವರ್ಷದ ಪರ್ವೀನ್ ಗೆ ಬಾಸುಂಡೆ ಬರುವ ಹಾಗೇ ಹಿಗ್ಗಾಮುಗ್ಗಾ ಥಳಿಸಿ, ಅದರ ಫೋಟೋವನ್ನು ಸಾಮಾಜಿಕ ಜಾಲಾತಣದಲ್ಲಿ ರಾಜಾಭಕ್ಷಿ ಬಿಟ್ಟಿದ್ದಾನೆ.

ಇದನ್ನು ಕಂಡ ಮೊದಲನೇ ಗಂಡ ಷರೀಫ್ ಅನೈತಿಕ ಸಂಬಂಧಕ್ಕೆ ಮಕ್ಕಳಿಂದ ತೊಂದರೆಯಾಗುತ್ತೆಂದು ಈ ರೀತಿಯಾಗಿ ಮಕ್ಕಳಿಗೆ ಥಳಿಸಿದ್ದಾಳೆ ಅಂತ ಆರೋಪಿಸಿ, ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

See also  ಆಂಬ್ಯುಲೆನ್ಸ್ ಕೊರತೆಯಿಂದ ಗರ್ಭಿಣಿಯನ್ನು ಜೋಲಿಯಲ್ಲಿ ಹೊತ್ತುಕೊಂಡ ಹೋದ ಗ್ರಾಮಸ್ಥರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು