News Kannada
Friday, October 07 2022

ಕರ್ನಾಟಕ

ನೀವೇ ಕೊಂದವರು ಎಂದ ಗೋವಾ ಯುವತಿ ಕ್ಷಮೆಯಾಚನೆ - 1 min read

Photo Credit :

ನೀವೇ ಕೊಂದವರು ಎಂದ ಗೋವಾ ಯುವತಿ ಕ್ಷಮೆಯಾಚನೆ

ಕಾರವಾರ: ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾದ ನಾಗರಮಡಿ ಜಲಪಾತದಲ್ಲಿ ಸೆ.17ರಂದು ಸಂಭವಿಸಿದ ದುರಂತದಲ್ಲಿ ಗೋವಾದ 6 ಜನರು ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ವಿವಾದಾತ್ಮಕವಾದ ಕಮೆಂಟ್ ಮಾಡಿದ್ದ ಗೋವಾದ ಯುವತಿ ಅಂಜಲಿನಾ ಫರ್ನಾಂಡಿಸ್ ಗೋವಾ ಪೊಲೀಸ್ ಠಾಣೆಯಲ್ಲಿ ಕ್ಷಮೆಯಾಚಿಸಿದ್ದಾರೆ.

ಇಲ್ಲಿನ ವಿಲ್ಸನ್ ಫರ್ನಾಂಡಿಸ್ ಎನ್ನುವವರು ಫೇಸ್ ಬುಕ್‌ನಲ್ಲಿ ಹಾಕಿದ್ದ ನಾಗರಮಡಿ ದುರಂತದ ಪೋಸ್ಟ್ ವೊಂದಕ್ಕೆ ಕಮೆಂಟ್ ಹಾಕಿದ್ದ ಗೋವಾದ ಕಾಣಕೋಣ ನಿವಾಸಿ ಅಂಜಲಿನಾ ಫರ್ನಾಂಡಿಸ್ ಕಾರವಾರದ ಜನರೇ ಡ್ಯಾಮ್ ನೀರನ್ನು ಬಿಟ್ಟು, ಉದ್ದೇಶಪೂರ್ವಕವಾಗಿ ಗೋವಾದವರನ್ನು ಕೊಂದಿದ್ದಾರೆ ಎಂದು ಫೋಸ್ಟ್ ಮಾಡಿದ್ದರು.

ನಾಗರಮಡಿ ಪ್ರವಾಸಿತಾಣದಲ್ಲಿ ಗಣೇಶ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಗೋವಾ ಪ್ರವಾಸಿಗರಿಂದ ಆ ತಾಣ ಗಲೀಜು ಆಗುತ್ತಿರುವುದನ್ನು ತಪ್ಪಿಸಲು ಅವರನ್ನು ಕೊಲ್ಲಲಾಗಿದೆ ಎನ್ನುವ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಕಾರವಾರ ಹಾಗೂ ಗೋವಾದ ನಡುವೆ ಶಾಂತಿಭಂಗ ತರುವಂಥ ಕಮೆಂಟ್ ಮಾಡಿದ್ದಾರೆ ಎಂದು ಅವರ ವಿರುದ್ಧ ಜನಶಕ್ತಿ ವೇದಿಕೆಯ ಮಾಧವ ನಾಯಕ ಹಾಗೂ ಚೆಂಡಿಯಾದ ವಿನಾಯಕ ನಾಯ್ಕ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಗೋವಾದ ಪೊಲೀಸ್ ಠಾಣೆಗೆ ಆಗಮಿಸಿದ ಯುವತಿಯು ತಾನು ಮಾಡಿದ ಕಮೆಂಟ್‌ಗೆ ಕ್ಷಮೆ ಯಾಚಿಸಿದ್ದಾರೆ.

ಕಳೆದ ಸೆಪ್ಟೆಂಬರ್ 17ರಂದು ನಾಗರಮಡಿ ಜಲಪಾತಕ್ಕೆ ಗೋವಾದಿಂದ ಸುಮಾರು 50 ಪ್ರವಾಸಿಗರು ಬಂದಿದ್ದರು. ಅವರಲ್ಲಿ ಕೆಲವರು ನೀರಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಜಲಪಾತದಲ್ಲಿ ಪ್ರವಾಹದ ರೂಪದಲ್ಲಿ ಬಂದ ನೀರು ಒಮ್ಮಿಂದೊಮ್ಮೆಗೆ ಏರಿಕೆ ಕಂಡು ನಾಲ್ವರು ಮಹಿಳೆಯರು ಸೇರಿದಂತೆ 6 ಜನ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಮೃತಪಟ್ಟಿದ್ದರು. ಈ ಘಟನೆ ಎಲ್ಲೆಡೆ ಭಾರೀ ಸುದ್ದಿ ಮಾಡಿತ್ತು.

See also  ಹಸೆಮಣೆಯೇರಬೇಕಿದ್ದ ಯುವಕ ಪೊಲೀಸರ ಅತಿಥಿಯಾದ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು