News Kannada
Wednesday, September 28 2022

ಕರ್ನಾಟಕ

ಭೂಮಂಜೂರಾತಿಯಲ್ಲಿ ಅಕ್ರಮ: ತನಿಖೆ ನಡೆಸಲು ಆಗ್ರಹ - 1 min read

Photo Credit :

ಭೂಮಂಜೂರಾತಿಯಲ್ಲಿ ಅಕ್ರಮ: ತನಿಖೆ ನಡೆಸಲು ಆಗ್ರಹ

ಸೋಮವಾರಪೇಟೆ: ರಾಜಕಾರಣಿಯೊಬ್ಬರಿಗೆ ಕಾನೂನು ಬಾಹಿರವಾಗಿ ಭೂಮಂಜೂರಾತಿ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರದ ಎಂಟು ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸಂಶಯವಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎಲ್.ನಾರಾಯಣ ಹೇಳಿದರು.

ಸೀಗೆ ಹೊಸೂರು ಗ್ರಾಮದ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲಿ ಕಾನೂನುಬಾಹಿರವಾಗಿ ಎಸ್.ಎನ್.ರಾಜಾರಾವ್ ಹಾಗೂ ಕೆಲವರಿಗೆ ಪಹಣಿ ಪತ್ರ(ಆರ್ ಟಿಸಿ) ಮಾಡಿಕೊಟ್ಟು ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ದೂರಿದರು.

ಅಂದಿನ ಕೊಡಗು ಜಿಲ್ಲಾಧಿಕಾರಿಗಳು, ಉಪವಿಭಾಗಧಿಕಾರಿಗಳು, ಸೋಮವಾರಪೇಟೆ ತಹಸೀಲ್ದಾರ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ ಮಡಿಕೇರಿ, ಜಿಲ್ಲಾಧಿಕಾರಿಯವರ ತಾಂತ್ರಿಕ ಸಹಾಯಕರು ಹಾಗು ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರು ಮಡಿಕೇರಿ, ಸೋಮವಾರಪೇಟೆ ಭೂದಾಖಲೆಗಳ ಸಹಾಯಕ ನಿರ್ದೇಶಕರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಇವರುಗಳ ವಿರುದ್ಧ ತನಿಖೆ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ಹೇಳಿದರು.

ಸೀಗೆಹೊಸೂರು ಗ್ರಾಮದ ಸರ್ವೇ ನಂ.13/1 ರಲ್ಲಿ 100ಎಕರೆ ಜಾಗವನ್ನು ಅಂದಿನ ಮೈಸೂರು ಸರ್ಕಾರ ತೋಟಗಾರಿಕೆಗೆ ಮಂಜೂರು ಮಾಡಿತ್ತು. ಈ ಜಾಗದಲ್ಲೇ ಹೆಗ್ಗಳ್ಳಿ ಗ್ರಾಮದಲ್ಲಿ 0.95 ಎಕರೆ ಹಾಗು ಸೀಗೆಹೊಸೂರು ಗ್ರಾಮದ ಸರ್ವೇ ನಂ.13/1ಪಿ ಯಲ್ಲಿ 4 ಎಕರೆ ಜಾಗವನ್ನು ರಾಜಾರಾವ್ ಅವರಿಗೆ ಹಾಗೂ ತೊರೆನೂರು ಗ್ರಾಮದ ಚಂದ್ರಪ್ಪ ಎಂಬವರಿಗೆ ಸೀಗೆಹೊಸೂರು ಗ್ರಾಮದಲ್ಲಿ 3 ಎಕರೆ ಜಾಗಕ್ಕೆ ಆರ್ ಟಿಸಿ ನೀಡಿ ಕಂದಾಯ ಇಲಾಖೆ ಕಾನೂನು ಉಲ್ಲಂಘನೆ ಮಾಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣದ ಸಮಗ್ರ ತನಿಖೆ ನಡೆಯಲಿದೆ ಎಂದು ಹೇಳಿದರು.

ಎಸ್.ಎನ್.ರಾಜಾರಾವ್ ಅವರು ಗಿರಿಜನ ಮುಖಂಡ, ಬುಡಕಟ್ಟು ಜನಾಂಗದ ರಾಜ್ಯ ಸಂಚಾಲಕ ಎಂದು ಹೇಳಿಕೊಂಡು, ಗಿರಿಜನರ ಸೌಲಭ್ಯಗಳನ್ನು ಕಳೆದ 30 ವರ್ಷಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಅವರು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಗೋಷ್ಠಿಯಲ್ಲಿದ್ದ ಭೂದಾಖಲೆಗಳ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಕೆ.ಜೆ.ದುಂಡಪ್ಪ ಆರೋಪಿಸಿದರು. ಖಾದಿ ಬೋರ್ಡ್ ಪ್ರವಾಸೋದ್ಯಮ ಇಲಾಖೆಯಿಂದ ಪಡೆದ ವಾಹನಗಳು, ಎಸ್.ಸಿ.ಎಸ್.ಟಿ ಕಾರ್ಪೋರೇಷನ್ ಮತ್ತು ವಿವಿಧ ಬ್ಯಾಂಕ್ ಗಳಲ್ಲಿ ರಾಜಾರಾವ್ ಹಾಗು ಅವರ ಕುಟುಂಬದವರು ಪಡೆದಿರುವ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆಯವರು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಿವೃತ್ತ ಇಂಜಿನಿಯರ್ ಕೆ.ಪಿ.ಶ್ರೀಕಂಠಯ್ಯ, ಹಿರಿಯ ನಾಗರಿಕ ರಾಜಾಚಾರ್ ಇದ್ದರು.

See also  ಎಂಡೋ ಸಂತ್ರಸ್ತರಿಂದ ಅನಿರ್ದಿಷ್ಟಾವಧಿ ಮುಷ್ಕರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು