News Kannada
Thursday, September 29 2022

ಕರ್ನಾಟಕ

ದೇವಳದ ಹುಂಡಿ ಕದ್ದ ಕಳ್ಳ ಪೊಲೀಸ್ ಬಲೆಗೆ - 1 min read

Photo Credit :

ದೇವಳದ ಹುಂಡಿ ಕದ್ದ ಕಳ್ಳ ಪೊಲೀಸ್ ಬಲೆಗೆ

ಕಾಸರಗೋಡು: ಎರಡು ವಾರಗಳ ಹಿಂದೆ ಕಾಞಂಗಾಡ್ ಹೊಸದುರ್ಗದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಕ್ಷೇತ್ರದಿಂದ ಕಳವು ನಡೆಸಿದ ಪ್ರಕರಣದಲ್ಲಿ ಬಾಗಲಕೋಟೆ ನಿವಾಸಿಯೋರ್ವನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕರ್ನಾಟಕ ಬಾಗಲಕೋಟೆಯ ಬಸವರಾಜ್(48) ಎಂದು ಗುರುತಿಸಲಾಗಿದೆ. ಈತನ ಸಹಚರ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ. ಕ್ಷೇತ್ರದೊಳಗೆ ಪ್ರವೇಶಿಸಿದ ಆರೋಪಿಗಳು ಕಾಣಿಕೆ ಹುಂಡಿ ಕಳವು ಮಾಡಿದ್ದರು. ಅದರಲ್ಲಿ ಸುಮಾರು 50 ಸಾವಿರ ರೂ.ಗಿಂತ ಅಧಿಕ ಕಾಣಿಕೆ ಹಣ ಇದ್ದಿರಬಹುದು ಎಂದು ಕ್ಷೇತ್ರ ಪದಾಧಿಕಾರಿಗಳು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.

ಬಂಧಿತ ಬಸವರಾಜ್ ಬಳಿಯಿಂದ 2450ರೂ.ಗಳ ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ದ ಇನ್ನೂ ಅನೇಕ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಕೆಲಸ ಅರಸಿಕೊಂಡು ಕಾಞಂಗಾಡ್‌ಗೆ ತಲುಪಿದ್ದನೆನ್ನಲಾಗಿದೆ. ರಸ್ತೆ ಕಾಮಗಾರಿ ಕೆಲಸಕ್ಕೆ ಸೇರಿಕೊಂಡ ಈತ ಬಳಿಕ ಕಳ್ಳತನಕ್ಕೆ ಕೈ ಹಾಕಿದ್ದು, ಎರಡು ವಾರಗಳ ಹಿಂದೆ ಹೊಸದುರ್ಗ ಕ್ಷೇತ್ರದಲ್ಲಿ ಕಳವು ಮಾಡಿದ್ದನು. ಈತನನ್ನು ಹೆಚ್ಚಿನ ವಿಚಾರಣೆಗ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

See also  ಕಬ್ಬು ದರ ನಿಗದಿಗೆ ಆಗ್ರಹ: ಪ್ರತಿಭಟನೆ ಮುಂದುವರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು