News Kannada
Friday, September 30 2022

ಕರ್ನಾಟಕ

ಪರಿಸರ ರಕ್ಷಕ ಕಾಂಡ್ಲಾವನ ಅವನತಿ ಅಂಚಿನಲ್ಲಿ…! - 1 min read

Photo Credit :

ಪರಿಸರ ರಕ್ಷಕ ಕಾಂಡ್ಲಾವನ ಅವನತಿ ಅಂಚಿನಲ್ಲಿ...!

ಕಾರವಾರ: ಪ್ರಕೃತಿಯ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಹಾಗೂ ಪರಿಸರದ ಸಂರಕ್ಷಣೆಗೆಯಲ್ಲಿ ತನ್ನದೆ ಪಾತ್ರ ವಹಿಸುವ ಕಾಂಡ್ಲಾವನ(ಮ್ಯಾಂಗ್ರೋವ್) ಈಗ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಲಿಯಾಗುತ್ತಿದೆ.

ನೈಸರ್ಗಿಕ ಪ್ರಕೋಪಗಳಾದ ಬಿರುಗಾಳಿ, ಚಂಡಮಾರುತ, ಪ್ರವಾಹ, ಕಡಲ್ಕೊರೆತ, ಸುನಾಮಿಯಂಥ ಪ್ರಕೃತಿ ವಿಕೋಪಗಳಿಂದ ಸಂಭವಿಸುವ ಅನಾಹುತಗಳಿಂದ ನದಿ, ಸಮುದ್ರದ ತೀರದಲ್ಲಿ ಉಂಟಾಗಬಹುದಾದ ವಿನಾಶವನ್ನು ತಡೆಯುವ ಅಪಾರ ಶಕ್ತಿ ಈ ಕಾಂಡ್ಲಾವನಗಳಿಗಿವೆ.

ಕೆಲವು ವರ್ಷಗಳ ಹಿಂದೆ ಉಂಟಾಗಬಹುದಾಗಿದ್ದ ವಿಕೋಪಗಳು ದೊಡ್ಡ ಪ್ರಮಾಣದಲ್ಲಿ ಹಾನಿಯನ್ನು ಸಾಕಷ್ಟು ಪ್ರಮಾಣದಲ್ಲಿ ಅಭೇದ್ಯಕೋಟೆಯಂತೆ ಬೆಳೆದು ನಿಂತಿರುತ್ತಿದ್ದ ಕಾಂಡ್ಲಾ ವನಗಳು ರಕ್ಷಣೆ ಕಲ್ಪಿಸುತ್ತಿದ್ದವು. ಆದರೆ ಇಂದು ಅಳಿವಿನಂಚಿನ ಸಸ್ಯಸಂಕುಲವಾಗಿ ಗಣನೀಯ ಪ್ರಮಾಣದಲ್ಲಿ ಇವು ವಿನಾಶದ ಅಂಚಿಗೆ ತಲುಪಿ ಕಡಿಮೆಯಾಗುತ್ತಿವೆ.

ಪ್ರಕೃತಿ ವಿಕೋಪದಿಂದ ಜೀವರಾಶಿಗಳ ಮೇಲೆ ಸಾಕಷ್ಟು ಪ್ರತಿಕೂಲ ಪರಿಣಾಮ ಉಂಟು ಮಾಡುವಂಥಹದ್ದು ಹಾಗಾಗಿ ಜನಜಾಗೃತಿಯ ಜೊತೆಗೆ ಕಾಂಡ್ಲಾವನಗಳ ಉಳಿವಿಗಾಗಿ ಸರಕಾರದ ಮಟ್ಟದ ಮಹತ್ವದ ಕ್ರಮಗಳಾಗಬೇಕಾಗಿದೆ.

ರಾಜ್ಯದ ಕಾರವಾರದಿಂದ ಮಂಗಳೂರಿನವರೆಗೆ ವಿಶಾಲವಾದ ಕೊಂಕಣ ಕರಾವಳಿಯಲ್ಲಿ ಹರಡಿರುವ ವಿಶಾಲ ಕಡಲತೀರಗಳಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತಿದ್ದ ಕಾಂಡ್ಲಾ ಕಾಡುಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಡಲ ವಿಜ್ಞಾನಿಗಳ ಪ್ರಕಾರ ಇದೇ ರೀತಿ ಮುಂದುವರಿದಲ್ಲಿ ಕಡಲತೀರ ಪ್ರದೇಶ ಮತ್ತು ಅಲ್ಲಿರುವ ಜೀವ ರಾಶಿಗಳ ಮೇಲೆ ಭಾರೀ ಪ್ರಮಾಣದ ದುಷ್ಪರಿಣಾಮ ಉಂಟು ಮಾಡಬಹುದಾಗಿದೆ ಎಂದು ಶಂಕಿಸಿದ್ದಾರೆ.

ನೂರಕ್ಕೂ ಹೆಚ್ಚು ರೀತಿಯ ಕಾಂಡ್ಲಾ ಪ್ರಭೇದಗಳಿವೆ. ರಾಜ್ಯದ ಕಡಲತೀರ, ನದಿದಂಡೆಗಳು ಸೇರಿದಂತೆ ವಿವಿಧ ಭಾಗಳಲ್ಲಿ 25ಕ್ಕೆ ಹೆಚ್ಚಿನ ಕಾಂಡ್ಲಾ ಪ್ರಭೇದಗಳು ಕಾಣಸಿಗುತ್ತವೆ.  

ಪರಿಸರದ ಸಮತೋಲನದಲ್ಲಿ ಪ್ರಕೃತಿಯೆ ಸೃಷ್ಟಿಸಿದ ಇಂಥ ಅಮೂಲ್ಯ ಸಸ್ಯ ಸಂಕುಲವನ್ನು ರಕ್ಷಿಸುವ ನಿಟ್ಟಿನಲ್ಲಿ ಸರಕಾರ ವಿಶೇಷವಾದ ಗಮನಹರಿಸಬೇಕಾಗಿದೆ. ಅರಣ್ಯ ಇಲಾಖೆಯ ಮುಖಾಂತರ ಕಾಂಡ್ಲಾ ವನಗಳ ಹೆಸರಿನಲ್ಲಿ ಅದನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಅದನ್ನು ನರ್ಸರಿಯಲ್ಲಿ ಬೆಳೆಸುವ ಮೂಲಕ ಪ್ರಚಾರದ ಮೂಲಕ ಜನರಲ್ಲಿ ಜಾಗೃತಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ.

ಜನರಲ್ಲಿ ಈ ಗಿಡಗಳ ಮಹತ್ವದ ಬಗ್ಗೆ ಅರಿವಿನ ಕೊರತೆಯ ಪರಿಣಾಮಗಾಗಿ ಜಲ ಕೃಷಿಕರು ಕಾಂಡ್ಲಾ ಇರುವೆಡೆ ಕೊಳಗಳನ್ನು ನಿರ್ಮಿಸುತ್ತಿದ್ದಾರೆ. ಚಿಪ್ಪು ಮತ್ತು ಉಸುಕುಗಳನ್ನು ತೆಗೆಯಲು ಹಾಗೂ ಸಿಗಡಿ ಕೃಷಿಗಾಗಿ ಈ ಕಾಂಡ್ಲಾಗಿಡಗಳನ್ನು ಬುಡಸಮೇತವಾಗಿ ಕೀಳುತ್ತಿರುವದು ಕಾಂಡ್ಲಾ  ಅವನತಿಯತ್ತ ಸಾಗುತ್ತಿದೆ. ಕಾಂಡ್ಲಾ ವನಗಳನ್ನು ಉಳಿಸಿಕೊಳ್ಳುವ ಅಗತ್ಯತೆ ಇರುವುದರಿಂದ ಸರಕಾರ  ಕಡಲತೀರ ನಿರ್ವಹಣಾ ಅಧಿಸೂಚನೆಯಲ್ಲಿ ಕಾಂಡ್ಲಾಗಿಡಗಳನ್ನು ಕಡಿಯುವದು ಮತ್ತು ನಾಶಮಾಡುವುದು ಕರ್ನಾಟಕ ಅರಣ್ಯ ಕಾಯಿದೆ ಪ್ರಕಾರ ಅಪರಾಧ ಎಂದು ಪರಿಗಣಿಸಲಾಗುತ್ತಿದೆ.

ಪರಿಸರ, ನೆಲ-ಜಲಚರಗಳ ರಕ್ಷಕ
ಕಾಂಡ್ಲಾಗಿಡಗಳ ಬೇರುಗಳು ತೀರಪ್ರದೇಶದ ಮಣ್ಣನ್ನು ಬೀಗಿಯಾಗಿ ಹಿಡಿದುಕೊಳ್ಳುವದರಿಂದ ಸಮುದ್ರ ಹಾಗೂ ಭೂ ಕೊರೆತವಾಗುವುದನ್ನು ತಡೆಯುತ್ತದೆ. ಬಿರುಗಾಳಿ, ಪ್ರವಾಹಗಳನ್ನು ಈ ಗಿಡಗಳು ತಮ್ಮ ಎಲೆ ರೆಂಬೆಗಳಿಂದ ಮತ್ತು ಬೇರುಗಳಿಂದ ತಡೆಯು ಸಾಮರ್ಥ್ಯ ಹೊಂದಿರುವ ಈ ಸಸ್ಯಜೀವಿಗಳು ಪ್ರಾಣಿ, ಪಕ್ಷಿಗಳಿಗೆ ಹಾಗೂ ಜಲಚರಗಳಾದ ಮೀನು, ಎಡಿ, ಕಪ್ಪೆ ಇತ್ಯಾದಿಗಳು ಮರಿಮೊಟ್ಟೆಗಳ ಸಂತಾನಾಭಿವೃದ್ಧಿ, ಆಹಾರಕ್ಕಾಗಿ ಕಾಂಡ್ಲಾ ಕಾಡುಗಳು ಜೀವವೈವಿಧ್ಯಗಳ ತಾಣವಾಗಿದೆ. ದಪ್ಪ ಹಸಿರು ಎಲೆಗಳನ್ನು ಹೊಂದಿರುವುದರಿಮ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುವದರಿಂದ ಪರಿಸರದ ಉಷ್ಣತೆಯನ್ನು ಸಹ ನಿಯಂತ್ರಿಸುವ ಜೊತೆಗೆ ವಾಯು ಮಾಲಿನ್ಯದ ಪರಿಣಾಮವನ್ನು ತಡೆಯುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

See also  ಕೊಡಗಿನ ಜನರ ಸ್ವಾಭಿಮಾನದ ಗೆಲುವು : ಕೆ.ಜಿ.ಬೋಪಯ್ಯ ಹರ್ಷ

ಚತುಷ್ಪಥಕ್ಕೆ ಕಾಂಡ್ಲಾ ಬಲಿ:ಜಿಲ್ಲೆಯ ಮಟ್ಟಿಗೆ ಭಟ್ಕಳದಿಂದ ಮಾಜಾಳಿವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಕಾಮಗಾರಿಯನ್ನು ಐಆರ್‌ಬಿ ಕಂಪೆನಿ ನಡೆಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಗಲಿಕರಣದ ಜಿಲ್ಲೆಯ ಸಮುದ್ರದಂಚಿನಿಂದ ನಡೆಯುತ್ತಿದ್ದರಿಂದ ಹೆಚ್ಚಿನ ಕಾಂಡ್ಲಾ ವನಗಳು ಬಲಿಯಾಗಿದೆ. ಕಾರವಾರದ ಕಾಳಿ ನದಿಯಂಚಿನಲ್ಲಿ ತಲೆ ಎತ್ತಿಕೊಂಡಿದ್ದ ಕಾಂಡ್ಲಾವನಗಳಿಗೆ ಹೆದ್ದಾರಿ ನಿರ್ಮಾಣಕ್ಕಾಗಿ ಕೆಲವು ಕಡೆಗಳಲ್ಲಿ ತೆರವುಗೊಳಿಸಲಾಗಿದೆ.  

ಬಹುಪಯೋಗಿ ಕಾಂಡ್ಲಾವಗಳಿಂದ ಆಗುತ್ತಿದ್ದು ಇದಕ್ಕೆ ಕಡಲತೀರ, ನದಿ ದಂಡೆಗಳ ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಅರಣ್ಯ ಇಲಾಖೆ ಅಳವಿನಂಚಿನಲ್ಲಿರು ಈ ಸಸ್ಯ ಸಂಕುಲವನ್ನು ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು