News Kannada
Friday, September 30 2022

ಕರ್ನಾಟಕ

ಕೊಡಗಿನಲ್ಲಿ ಭಯ ಹುಟ್ಟಿಸಿದ ಹುಲಿ - 1 min read

Photo Credit :

ಕೊಡಗಿನಲ್ಲಿ ಭಯ ಹುಟ್ಟಿಸಿದ ಹುಲಿ

ಮಡಿಕೇರಿ: ಸಿದ್ದಾಪುರ ಬಳಿಯ ಮಾಲ್ದಾರೆ ಬಿ.ಟಿ.ಕಾಡು ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿ ಬೋನಿಟ್ಟ ಬಳಿಕ ನಾಪತ್ತೆಯಾಗಿದೆ. ದೀಪಾವಳಿ ವೇಳೆ ಪಟಾಕಿ ಸಿಡಿಸಿದ್ದರಿಂದ ಹುಲಿ ಕಾಡಿನತ್ತ ಹೋಗಿರಬಹುದೆಂದು ಜನ ನಂಬಿದ್ದರು. ಆದರೆ ಈ ವ್ಯಾಪ್ತಿಯಲ್ಲಿ ಕಾಣಿಸದ ಹುಲಿ ಇದೀಗ ದಕ್ಷಿಣ ಕೊಡಗಿನ ಗೋಣಿಕೊಪ್ಪ ಬಳಿಯ ಸುಳುಗೋಡು ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು, ಎರಡು ಕರುಗಳನ್ನು ಕೊಂದು ಹಾಕಿದೆ.

ಕಳೆದ ಕೆಲವು ದಿನಗಳ ಹಿಂದೆ ಮಾಲ್ದಾರೆ ಬಿ.ಟಿ.ಕಾಡು ತೋಟದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಇದರಿಂದ ಹೆದರಿಂದ ಜನರು ಅರಣ್ಯ ಇಲಾಖೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಹುಲಿ ಹಿಡಿಯಲು ಬೋನನ್ನು ತಂದಿಟ್ಟರಾದರೂ ದೀಪಾವಳಿ ಹಬ್ಬ ಬಂದ ಕಾರಣ ಪಟಾಕಿ ಸಿಡಿಸಿದ್ದರಿಂದ ಬೆದರಿದ ಹುಲಿ ಅತ್ತ ಕಡೆ ಬಂದಿರಲಿಲ್ಲ.

ಆದರೆ ಇದೀಗ ಸುಳುಗೋಡು ಗ್ರಾಮದಲ್ಲಿ ಎರಡು ಕರುಗಳನ್ನು ಕೊಂದಿರುವ ಹುಲಿ ಒಂದು ಕರುವನ್ನು ಹೊತ್ತೊಯ್ದಿದೆ. ಇದೇ ಮಾಲ್ದಾರೆಯಲ್ಲಿ ಕಾಣಿಸಿಕೊಂಡಿದ್ದ ಹುಲಿಯೇ ಈ ಕೃತ್ಯವನ್ನು ಎಸಗಿದೆಯಾ ಅಥವಾ ಬೇರೆ ಹುಲಿ ಕಾಡಿನಿಂದ ಇತ್ತ ಬಂದಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಆಹಾರಕ್ಕಾಗಿ ಅಡ್ಡಾಡುವ ಹುಲಿ ಒಂದೇ ಕಡೆ ಇರದೆ ಅಲ್ಲಲ್ಲಿ ಅಡ್ಡಾಡುತ್ತಾ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ.

ಸುಳುಗೋಡು ಕೊಕ್ಕೇಂಗಡ ಸ್ವಾದೀನ್ ಬಿದ್ದಪ್ಪ ಎಂಬವರಿಗೆ ಸೇರಿದ ಕರುಗಳು ತೋಟದಲ್ಲಿ ಮೇಯುತ್ತಿದ್ದ ಸಂದರ್ಭ ಹುಲಿ ದಾಳಿ ನಡೆಸಿದೆ. ಒಂದು ಕರುವನ್ನು ಮೇಯಲು ಬಿಟ್ಟು ಮತ್ತೊಂದನ್ನು ಕಟ್ಟಿ ಹಾಕಿದ್ದರು. ಬಿಟ್ಟಿದ್ದ ಕರುವನ್ನು ಕೊಂದು ಕಾಡಿಗೆ ಹೊತ್ತೊಯ್ದಿದೆ. ಇನ್ನೊಂದು ಕರುವನ್ನು ಕೊಂದು ಹಾಕಿದೆ. ಹುಲಿಯದೇ ಕೃತ್ಯ ಎಂಬುದಕ್ಕೆ ಹುಲಿಯ ಉಗುರಿನ ಗುರುತು ಪತ್ತೆಯಾಗಿದೆ.

ಒಟ್ಟಾರೆ ಕಾಡಾನೆ, ಚಿರತೆ, ಹುಲಿಗಳು ಕೊಡಗಿನ ಹಲವು ಕಡೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಸೇರಿದಂತೆ ಬೆಳೆಗಾರರು ಭಯಪಡುವಂತಾಗಿದೆ. ಕಾಫಿ ತೋಟದಲ್ಲಿ ಅವಿತುಕೊಂಡಿರುವ ಇವು ಯಾವಾಗ ಬೇಕಾದರೂ ದಾಳಿ ಮಾಡುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

See also  ಭೀಕರ ರಸ್ತೆ ಅಪಘಾತ: ನಾಲ್ಕು ಜನ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು