News Kannada
Friday, September 30 2022

ಕರ್ನಾಟಕ

ಕಾಡು ಪ್ರಾಣಿಗಳ ಉಪಟಳ: ಬೆಳೆಸಿದ ಫಸಲು ರೈತರ ಕೈ ಸೇರುತ್ತಿಲ್ಲ - 1 min read

Photo Credit :

ಕಾಡು ಪ್ರಾಣಿಗಳ ಉಪಟಳ: ಬೆಳೆಸಿದ ಫಸಲು ರೈತರ ಕೈ ಸೇರುತ್ತಿಲ್ಲ

ಕಾರವಾರ: ಕಳೆದ ಕೆಲವು ದಿನಗಳಿಂದ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ರೈತರನ್ನು ಕಂಗಾಲು ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನ ಕೃಷಿ ಭೂಮಿಗಳಿಗೆ ನುಗ್ಗಿ ಕೃಷಿ ಭೂಮಿಯನ್ನು ಹಾಳು ಮಾಡುತ್ತಿದೆ.

ಭಟ್ಕಳ ತಾಲೂಕಿನ ವೆಂಕಟಾಪುರದ ಹುರುಳಿ ಸಾಲಿನಲ್ಲಿ ರೈತರು ಬೆಳೆದ ಭತ್ತದ ಬೆಳೆಗೆ ಕಾಡು ಹಂದಿ ಹಾಗೂ ಮಂಗಗಳ ಕಾಟ ಹೆಚ್ಚಿದ್ದು ಲಕ್ಷಗಟ್ಟಲೇ ಬೆಲೆಬಾಳುವ ಭತ್ತದ ಬೆಳೆಗಳನ್ನು ಹಾಳು ಮಾಡುತ್ತಿದೆ.ಈ ಬಗ್ಗೆ ರೈತರು ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆಯ ದೂರು ಸಲ್ಲಿಸಿದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.

ಕೇವಲ ಭತ್ತದ ಬೆಳೆಯಷ್ಟೇ ಅಲ್ಲದೆ ಗದ್ದೆಯಲ್ಲಿ ಬೆಳೆಯಲಾಗುವ ವಿವಿಧ ತರಕಾರಿ ಹಾಗೂ ತೋಟಗಳಿಗೂ ಈ ಕಾಡು ಪ್ರಾಣಿಗಳು ನುಗ್ಗಿ ಹಾನಿ ಮಾಡುತ್ತಿದೆ. ಕಾಡು ಪ್ರಾಣಿಗಳನ್ನು ತಡೆಯಲು ರೈತರು ನಾನಾ ಕಸರತ್ತು ಮಾಡಿದರೂ ರಾತ್ರಿ ವೇಳೆಯಲ್ಲಿ ಗದ್ದೆ, ತೋಟಗಳಿಗೆ ನುಗ್ಗುತ್ತಿವೆ. ಕಳೆದ ಎರಡು ವರ್ಷಗಳ ಹಿಂದೆ ಇಷ್ಟೊಂದು ಕಾಡು ಪ್ರಾಣಿಗಳ ಕಾಟ ಇರಲಿಲ್ಲ. ಬೆಳೆದ ಬೆಳೆ ಕಾಡು ಪ್ರಾಣಿಗಳ ಪಾಲಾದರೆ ತಮ್ಮ ಪಾಡೇನು ಎನ್ನುವ ಚಿಂತೆ ರೈತರ ಕಾಡುತ್ತಿದೆ.

ಕೇವಲ ಭಟ್ಕಳ ತಾಲೂಕಿನಲ್ಲೇ ಹುರುಳಿಸಾಲ್, ಕಾರ್ಗದ್ದೆ ಮಜಿರೆಯಲ್ಲಿ ನೂರಾರು ಎಕರೆ ಜಮೀನು ಸಾಗುವಳಿಯಾಗುತ್ತಿದ್ದವು. ಈಗ ಕಾಡು ಪ್ರಾಣಿಗಳ ಹೆಚ್ಚಿರುವುದರಿಂದ ಕೇವಲ 10ರಿಂದ20 ಎಕರೆ ಪ್ರದೇಶದಲ್ಲಿ ಮಾತ್ರ ಕೃಷಿ ಚುಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ತೋಟಕ್ಕೆ ಮಂಗನ ಕಾಟ: ರೈತರ ಭತ್ತದ ಬೆಳೆಯ ಜೊತೆಗೆ ತಮ್ಮ ಉಪ ಜೀನವ ನಡೆಸಲು ತೋಟದಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ. ಆದರೆ ರಾತ್ರಿ ವೇಳೆ ಹಂದಿಗಳ ಕಾಟ ಹೆಚ್ಚಿದ್ದರೇ ಹಗಲಿನಲ್ಲಿ ಮಂಗಗಳ ಉಪಟಳ ಹೆಚ್ಚಾಗಿವೆ.

ಈ ಬಗ್ಗೆ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಆಗ್ರಹವಾಗಿದೆ.

See also  ಇತರ ರಾಜ್ಯದಲ್ಲಿ ಬಳಸದ ಲಸಿಕೆ ರಾಜ್ಯಕ್ಕೆ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ ಬಿಎಸ್‌ವೈ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು