News Kannada
Saturday, October 08 2022

ಕರ್ನಾಟಕ

ಮಣ್ಣಲ್ಲಿ ಹೂತಿಟ್ಟ ಶವವನ್ನು ಹೊರತೆಗೆದು ಚಿನ್ನ ಕಳ್ಳತನ - 1 min read

Photo Credit :

ಮಣ್ಣಲ್ಲಿ ಹೂತಿಟ್ಟ ಶವವನ್ನು ಹೊರತೆಗೆದು ಚಿನ್ನ ಕಳ್ಳತನ

ಕಲಬುರಗಿ: ಮಣ್ಣಿನಲ್ಲಿ ಹೂತಿಟ್ಟ ಶವವನ್ನು ಹೊರ ತೆಗೆದು ಶವದ ಮೇಲಿದ್ದ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ನಡೆದಿದೆ.

ಪ್ರೇಮಾಬಾಯಿ ಡಗೆ ಎಂಬ 75 ವರ್ಷದ ಅಜ್ಜಿ ಐದು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಅಜ್ಜಿಗೆ ಮಕ್ಕಳಿಲ್ಲದ ಹಿನ್ನೆಲೆ ಗ್ರಾಮಸ್ಥರು ಆಕೆಯ ಮೈಮೇಲಿನ ಆಭರಣಗಳ ಸಮೇತ ಅಂತ್ಯಕ್ರಿಯೆ ನೆರವೇರಿಸಿದ್ದರು. ಇದನ್ನು ತಿಳಿದ ಪರಿಚಿತ ವ್ಯಕ್ತಿಯಿಂದಲೇ ಇಂತಹ ಹೇಯ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ.

ಸಮಾಧಿಯಿಂದ ಶವ ಹೊರ ತೆಗೆದು ಶವದ ಮೈಮೇಲಿದ್ದ 50ಗ್ರಾಂ ಗೂ ಹೆಚ್ಚು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಖದೀಮರು ಶವದ ಮೇಲಿನ ಚಿನ್ನಾಭರಣ ದೋಚಿ ಶವ ಹಾಗೆಯೇ ಹೊರಗೆ ಬಿಟ್ಟು ಪರಾರಿಯಾಗಿದ್ದಾರೆ.

ಮಂಗಳವಾರ ಬೆಳಗ್ಗೆ ಸಮಾಧಿ ಮೇಲೆ ಬಿದ್ದಿರುವ ಶವ ಕಂಡು ಗ್ರಾಮಸ್ಥರು ಕಂಗಾಲಾಗಿದ್ದು, ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 

See also  ಮಂಡ್ಯದಲ್ಲಿ ನಿಖಿಲ್ ಎಲ್ಲಿದೀಯಪ್ಪಾ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು