News Kannada
Wednesday, September 28 2022

ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯ ಉಗ್ರಾಣದಲ್ಲಿ ಹುಳವಾಗಿ ಕೊಳೆಯುತ್ತಿದೆ ಆಹಾರ ಸಾಮಗ್ರಿ - 1 min read

Photo Credit :

ಉತ್ತರ ಕನ್ನಡ ಜಿಲ್ಲೆಯ ಉಗ್ರಾಣದಲ್ಲಿ ಹುಳವಾಗಿ ಕೊಳೆಯುತ್ತಿದೆ ಆಹಾರ ಸಾಮಗ್ರಿ

ಕಾರವಾರ: ಅರ್ಹರಿಗೆ ವಿತರಣೆಯಾಗಬೇಕಾಗಿದ್ದ ಸಾವಿರ ರೂ ಟನ್ ಪಡಿತರ ಆಹಾರ ಮತ್ತು ಸರಬರಾಜು ಇಲಾಖೆಯ ಆಹಾರ ದಾಸ್ತಾನು ಉಗ್ರಾಣದಲ್ಲಿದ್ದು ಆಹಾರ ಸಾಮಗ್ರಿಗಳಿಗೆ ಹುಳವಾಗಿ ಹಾಳಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಶಿರಸಿ, ಮುಂಡಗೋಡ, ಹಳಿಯಾಳ ಹಾಗೂ ಇನ್ನಿತರ ತಾಲೂಕಿನ ಉಗ್ರಾಣದಲ್ಲಿರುವ ಸಾವಿರಾರೂ ಟನ್ ಪಡಿತರ ಸಾಮಗ್ರಿಗಳು ಅರ್ಹರಿಗೆ ಸೂಕ್ತ ರೀತಿಯಲ್ಲಿ ತಲುಪದ ಸಂಪೂರ್ಣವಾಗಿ ಹಾಳಾಗಿವೆ. ಎಪಿಎಲ್, ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗಾಗಿ ಪಡಿತರ ವಿತರಣೆಗೆ ಬಂದಿದ್ದ ಗೋಧಿ ಕಳೆದ ೯ ತಿಂಗಳಿಂದ ಉಗ್ರಾಣದಲ್ಲಿಯೇ ಉಳಿದುಕೊಂಡಿದೆ.

ಜಿಲ್ಲೆಯಲಿ ೩೦೦ಕ್ಕೂ ಹೆಚ್ಚು ಪಡಿತರ ವಿತರಣಾ ಕೇಂದ್ರಗಳಿವೆ. ಪ್ರತಿ ತಿಂಗಳು ಆಯಾ ಕೇಂದ್ರದಲ್ಲಿ ತಲಾ ೧೫ರಿಂದ ೨೦ ಕ್ವಿಂಟಲ್ ಗೋಧಿ ಪಡಿತರ ಕಾರ್ಡ್ ದಾರರಿಗೆ ವಿತರಣೆ ಮಾಡಲಾಗುತ್ತಿದೆ. ಆದರೆ ಸರಕಾರ ಕಳೆದ ೧೦ ತಿಂಗಳ ಹಿಂದೆ ಗೊಂದಲಮಯ ಆದೇಶ ಹೊರಡಿಸಿದ್ದರಿಂದ ಅರ್ಹರಿಗೆ ಗೋದಿ ವಿತರಣೆಯಾಗಿಲ್ಲ. ಇದರಿಂದ ಉಗ್ರಾಣದಲ್ಲಿಯೇ ಗೋದಿ ಸಂಪೂರ್ಣ ಹಾಳಾಗಿದ್ದು ಜಿಲ್ಲೆಯೊಂದರಿಂದಲೇ ಕೋಟ್ಯಾಂತರ ರೂ. ಸರಕಾರಕ್ಕೆ ನಷ್ಟವಾಗಿದೆ.

ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ರಾಜ್ಯಕ್ಕೆ ಗೋಧಿ ಸರಬರಾಜಾಗುತ್ತದೆ. ರಾಜ್ಯದಲಿರುವ ಪಡಿತರ ಅಂಗಡಿಗಳಿಗೆ ವಿತರಿಸುವ ಗುತ್ತಿಗೆಯನ್ನು ಹುಬ್ಬಳ್ಳಿಯ ಎಫ್ಸಿಐ ಕಂಪನೆಗೆ ನೀಡಲಾಗಿದೆ. ಆದರೆ ರಾಜ್ಯ ಸರಕಾರ ಗೋಧಿ ವಿತರಣೆ ಮಾಡುವುದನ್ನು ತಡೆ ಹಿಡಿದಿದ್ದರಿಂದ ಗೋಧಿ ಸೂಕ್ತ ರೀತಿಯಲ್ಲಿ ವಿತರಣೆಯಾಗದೆ ಉಗ್ರಾಣದಲ್ಲಿಯೇ ಕೊಳೆಯುತ್ತಿದೆ. ೯ ತಿಂಗಳಿಂದ ಗೋಧಿ ಇದ್ದಲ್ಲಿಯೇ ಇದ್ದರಿಂದ ಹುಳುಗಳು ಕಂಡುಬಂದಿದೆ. ಅದರ ಜೊತೆಗೆ ಹೆಗ್ಗಣ, ಇಲಿ ಸೇರಿದಂತೆ ಇನ್ನಿತರ ಕಾರಣದಿಂದಾಗಿ ಗೋಧಿ ಹಾಳಾಗಿವೆ.

ಕಾರವಾರದ ಆಹಾರ ಮತ್ತು ಸರಬರಾಜು ಇಲಾಖೆಯ ಆಹಾರ ದಾಸ್ತಾನು ಉಗ್ರಾಣದಲ್ಲಿ ಸುಮಾರು ೫೧೫ ಕ್ವಿಂಟಲ್, ಶಿರಸಿ ಉಗ್ರಾಣದಲ್ಲಿ ೨೭೫ ಕ್ವಿಂಟಲ್, ಅಂಕೋಲಾ ೩೪೦, ಮುಂಡಗೋಡ ೫೧ ಕ್ವಿಂಟಲ್ ಇದೆ ಎನ್ನುವ ಬಗ್ಗೆ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಅಲ್ಲದೆ ಉಳಿದ ತಾಲೂಕಿನ ಉಗ್ರಾಣದಲ್ಲಿ ಅಕ್ಕಿ, ಹೆಸರು ಬೆಳೆಗಳಿದ್ದು ಅವುಗಳು ಸಹ ಹಾಳಾಗಿರುವ ಅನುಮಾನ ವ್ಯಕ್ತವಾಗಿದೆ. ದಾಸ್ತಾನು ಇರುವ ಆಹಾರ ಸಾಮಗ್ರಿಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

See also  ಜ.ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟಿಸಿದ ರಾಷ್ಟ್ರಪತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು