News Kannada
Thursday, September 29 2022

ಕರ್ನಾಟಕ

13ನೇ ದಿನ ಕಾಲಿಟ್ಟ ತಾಲ್ಲೂಕು ರಚನೆ ಹೋರಾಟ - 1 min read

Photo Credit :

13ನೇ ದಿನ ಕಾಲಿಟ್ಟ ತಾಲ್ಲೂಕು ರಚನೆ ಹೋರಾಟ

ಕುಶಾಲನಗರ: ಕಾವೇರಿ ತಾಲೂಕು ರಚನೆ ಆಗಬೇಕು ಎನ್ನುವ ಜನಾಗ್ರಹವನ್ನು ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ ಸಮೀಪದ ನಂಜರಾಯಪಟ್ಟಣದಲ್ಲೂ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ದುಬಾರೆ ವೃತ್ತದಲ್ಲಿ ಜಮಾಯಿಸಿದ ಗ್ರಾಮಸ್ಥರು ಮತ್ತು ಶಾಲಾ ವಿದ್ಯಾರ್ಥಿಗಳು ಕುಶಾಲನಗರ ಸಿದ್ಧಾಪುರ ರಸ್ತೆಯಲ್ಲಿ ಮಾನವ ಸರಪಳಿ ರಚಿಸಿ ವಾಹನ ಸಂಚಾರಕ್ಕೆ ತಡೆ ಒಡ್ಡಿದರು. ಸುಮಾರು 1 ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಲಾಯಿತು. ಇದರಿಂದಾಗಿ ದುಬಾರೆಗೆ ಆಗಮಿಸಿದ್ದ ಮತ್ತು ಇಲ್ಲಿಂದ ತೆರಳುತ್ತಿದ್ದ ಪ್ರವಾಸಿಗರು ತೊಂದರೆ ಅನುಭವಿಸಿದರು.

ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಪ್ರೇಮಾನಂದ, ನಂಜರಾಯಪಟ್ಟಣದಂತಹ ಗ್ರಾಮದಿಂದ ತಾಲೂಕು ಕೇಂದ್ರ ದೂರದ ಸೋಮವಾರಪೇಟೆಗೆ ಸರ್ಕಾರಿ ಕೆಲಸಗಳಿಗಾಗಿ ತೆರಳುವುದು ಕಷ್ಟ. ಒಂದು ಕೆಲಸ ಒಂದೇ ದಿನದಲ್ಲಿ ಆಗುತ್ತದೆ ಎನ್ನುವ ಖಾತರಿಯೂ ಇರುವುದಿಲ್ಲ. ಕಾವೇರಿ ತಾಲೂಕು ರಚಿಸಿ ಕುಶಾಲನಗರವನ್ನು ಕೇಂದ್ರ ಮಾಡಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ.

ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿ, ನಮ್ಮ ಬೇಡಿಕೆ ಈಡೇರಿಸಬೇಕಾಗಿದೆ ಎಂದರು. ತಾಲೂಕು ಪಂಚಾಯಿತಿ ಸದಸ್ಯ ವಿಜು ಚಂಗಪ್ಪ, ಗ್ರಾ.ಪಂ. ಸದಸ್ಯ ಸುಮೇಶ್, ಗ್ರಾಮಸ್ಥರಾದ ಎಂ.ಕೆ. ಮಾಚಯ್ಯ, ಐಯ್ಯಂಡ್ರ ಲೋಕನಾಥ್, ಅ.ಶು. ಬೋಪಣ್ಣ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಜೈನಾಬ, ಉಪಾಧ್ಯಕ್ಷೆ ಕುಮಾರಿ, ಸದಸ್ಯರಾದ ಕೋಳುಮಾಡು ನವೀನ್, ಮಲ್ಲಿಗೆ, ತಮ್ಮಯ್ಯ, ಚಂದ್ರಾವತಿ, ಹೋರಾಟ ಸಮಿತಿಯ ವಿ.ಪಿ. ಶಶಿಧರ್, ಖಾದರ್, ಪ್ರಮೋದ್ ಮುತ್ತಪ್ಪ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ಆಟೋರಿಕ್ಷಾದಲ್ಲಿದ್ದ ಮಹಿಳೆಗೆ ತೊಂದರೆ: ಹೆರಿಗೆ ನಂತರ ಆಟೋರಿಕ್ಷಾದಲ್ಲಿ ಮನೆಗೆ ಮರಳುತ್ತಿದ್ದ ಬಾಣಂತಿ ಮತ್ತು ಆಕೆಯ ಕುಟುಂಬ ಪ್ರತಿಭಟನೆಯಿಂದಾಗಿ ಕೆಲ ಕಾಲ ತೊಂದರೆ ಅನುಭವಿಸಿದ ಘಟನೆ ನಂಜರಾಯಪಟ್ಟಣದಲ್ಲಿ ನಡೆಯಿತು. ವಿಷಯ ತಿಳಿಯುತ್ತಿದ್ದಂತೆಯೇ ವಾಹನಗಳ ಮಧ್ಯೆ ಸಿಲುಕಿದ್ದ ಆಟೋ ರಿಕ್ಷಾ ಬಳಿ ತೆರಳಿದ ಸಂಘಟಕರು ದಾರಿ ಮಾಡಿಕೊಟ್ಟು ಬಾಣಂತಿ ಮನೆಗೆ ತೆರಳಲು ಸಹಕರಿಸಿದರು. ಪೊಲೀಸ್ ಸಿಬ್ಬಂದಿ ಪೊನ್ನಪ್ಪ ಮತ್ತು ಜಯಪ್ರಕಾಶ್ ಕೂಡ ನೆರವು ನೀಡಿದರು.

See also  ಹಾರ್ಡ್‌ಡಿಸ್ಕ್‌ಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ: ಅನಂತಕುಮಾರ್ ಹೆಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು