News Kannada
Saturday, October 01 2022

ಕರ್ನಾಟಕ

ಬ್ಯಾಂಕಿನಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ಪಂಗನಾಮ - 1 min read

Photo Credit :

ಬ್ಯಾಂಕಿನಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ಪಂಗನಾಮ

ಕಾರವಾರ:ನಕಲಿ ಬಂಗಾರವನ್ನು ಅಸಲಿ ಎಂದು ಪ್ರಮಾಣಿಕರಿಸಿ ಮಲ್ಲಾಪುರ ಬ್ಯಾಂಕಿಗೆ ೬೮.೧೫ ಲಕ್ಷ ರೂ. ಪಂಗನಾಮ ಹಾಕಿದ್ದ ರಾಜಕುಮಾರ್ ಶೇಟ್, ಈಗ ಕದ್ರಾದ ಎಸ್ಬಿಐ ಬ್ಯಾಂಕಿನ ಶಾಖೆಯಲ್ಲೂ೨೫.೨೧ ಲಕ್ಷ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕಿನಲ್ಲಿ ಇನ್ನಷ್ಟು ಚಿನ್ನಾಭರಣಗಳ ಪರಿಶೀಲನೆ ನಡೆಯುತ್ತಿದೆ.

ಕದ್ರಾದ ಬ್ಯಾಂಕಿನಲ್ಲಿ ಚಿನ್ನದ ಪರಿಶೀಲನೆ ನಡೆಯುತ್ತಿದ್ದ ಸಂದರ್ಭದಲ್ಲಿ ಒಟ್ಟೂ ೧೧ ಆರೋಪಿಗಳು ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಹಕರು ಬ್ಯಾಂಕಿಗೆ ವಂಚನೆ ಮಾಡಬೇಕು ಎಂದು ತಂದ ನಕಲಿ ಬಂಗಾರವನ್ನು ಅಸಲಿ ಎಂದು ದೃಢಪಡಿಸುತ್ತಿದ್ದ ರಾಜಕುಮಾರ್ ಶೇಟ್ ಈಗ ತಲೆ ಮರಿಸಿಕೊಂಡಿದ್ದಾನೆ. ತಮ್ಮ ಖಾತೆಗಳಲ್ಲಿ ನಕಲಿ ಬಂಗಾರ ಅಡವಿಟ್ಟ ನಾಗೇಶ ಶಾನಭಾಗ, ಲಕ್ಷ್ಮಣ ಬಾಂದೇಕರ್, ಲಿಂಗರಾಜು, ಮೌಲಾಲಿ, ರಾಜೇಶ್ವರಿ, ಸಯ್ಯದ್ ಮೊಹಮ್ಮದ್, ಮರಿಯಪ್ಪ, ಮಂಜುಳಾ, ಜೇಮ್ಸ್ ಹಾಗೂ ಆನಂದ ಬಾಂದೇಕರ್ ವಿರುದ್ಧ ಪ್ರಕರಣದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಲ್ಲಾಪುರದ ನಿವಾಸಿ ರಾಜಕುಮಾರ್ ಶೇಟ್ ಮಲ್ಲಾಪುರದ ಸಿಂಡಿಕೇಟ್ ಬ್ಯಾಂಕ್ ಹಾಗೂ ಕದ್ರಾದ ಎಸ್ಬಿಐ ಶಾಖೆಯಲ್ಲಿ ಚಿನ್ನಾಭರದ ಪರೀಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಅದನ್ನೇ ದುರುಪಯೋಗಮಾಡಿಕೊಂಡು ಎರಡು ಬ್ಯಾಂಕುಗಳಿಗೆ ಕೋಟ್ಯಾಂತರ ರೂ. ಪಂಗನಾಮ ಹಾಕಿದ್ದಾನೆ. ಮಲ್ಲಾಪುರದ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ರಾಜಕುಮಾರ್ ಶೇಟ್ ತಲೆ ಮರಿಸಿಕೊಂಡಿದ್ದ. ಅದರ ಪೂರ್ವದಲ್ಲೇ ಕದ್ರಾದ ಎಸ್ಬಿಐ ಬ್ಯಾಂಕಿಗೂ ವಂಚಿಸಿದ್ದಾನೆ.

ಅನೇಕ ಜನರಿಗೆ ನಕಲಿ ಚಿನ್ನ ತರುವಂತೆ ಬ್ಯಾಂಕಿನಲ್ಲಿ ಚಿನ್ನದ ಪರೀಕ್ಷಕನಾಗಿದ್ದ ರಾಜಕುಮಾರ್ ಶೇಟ್ ಹೇಳುತ್ತಿದ್ದ. ತಂದ ಬಂಗಾರವನ್ನು ಅಸಲಿ ಎಂದು ದೃಢಪಡಿಸಿ, ಜನ ಪಡೆದ ಸಾಲದಿಂದ ಪಾಲುಪಡೆಯುತ್ತಿದ್ದ ಎನ್ನಲಾಗಿದೆ.

ಅದರಂತೆ ಮಲ್ಲಾಪುರದ ಸಿಂಡಿಕೇಟ್ ಬ್ಯಾಂಕಿಗೆ ಒಟ್ಟೂ ೬೩ ಖಾತೆ ಹೊಂದಿದ ೩೩ ಗ್ರಾಹಕರು ನಕಲಿ ಚಿನ್ನವನ್ನು ಅಡವಿಟ್ಟು ೬೮.೧೫ಲಕ್ಷ ರೂ. ಪಂಗನಾಮ ಹಾಕಲಾಗಿದೆ. ಈಗ ಬೆಳಕಿಗೆ ಬಂದಿರುವ ಪ್ರಕರಣದಲ್ಲಿ ೧೧ ಜನ ಆರೋಪಿಗಳು ನಕಲಿ ಚಿನ್ನವನ್ನು ಕದ್ರಾದ ಎಸ್ಬಿಐ ಶಾಖೆಯಲ್ಲಿ ಅಡವಿಟ್ಟು ೨೫.೨೧ ಲಕ್ಷ ರೂ. ಸಾಲ ಪಡೆದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಗೌತಮ್ಕುಮಾರ್ ದಾಸ ಕದ್ರಾಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಂಚನೆ ಹೇಗೆ: ಇಲ್ಲಿನ ಬ್ಯಾಂಕ್ಗಳಲ್ಲಿ ಬಂಗಾರ ಪರೀಕ್ಷಕನಾಗಿ ರಾಜಕುಮಾರ ನೇಮಕಗೊಂಡಿದ್ದ. ನನಗೆ ಹಣದ ತುರ್ತು ಅಗತ್ಯವಿದೆ ಎಂದು ಆತನ ಬಳಿ ಬರುವ ಜನರಿಗೆ ತನ್ನ ಬಳಿ ಇರುವ ಒಂದಿಷ್ಟು ಬಂಗಾರವನ್ನುಕೊಟ್ಟಿರುತ್ತೇನೆ. ಅದನ್ನು ಬ್ಯಾಂಕಿನಲ್ಲಿಟ್ಟು ಸಾಲ ಪಡೆದು ಹಣ ನನಗೆ ಕೊಡಿ, ನಿಮಗೆ ಒಂದಿಷ್ಟು ಹಣವನ್ನು ಕಮೀಷನ್ ಕೊಡುತ್ತೇನೆ ಎಂದು ಜನರನ್ನು ರಾಜಕುಮಾರ ನಂಬಿಸುತ್ತಿದ್ದ. ಮಲ್ಲಾಪುರದಸಿಂಡಿಕೇಟ್ ಬ್ಯಾಂಕಿನಲ್ಲಿ ಈತ ಬಂಗಾರದ ಅಂಗಡಿಯನ್ನೂ ಹೊಂದಿದ್ದ ಹಿನ್ನೆಲೆಯಲ್ಲಿ ಬಹುತೇಕ ಜನ ಈತನ ಮಾತನ್ನು ನಂಬಿದ್ದರು.

ಆದರೆ ಈತ ಅಡವಿಡುವ ಸಲುವಾಗಿ ಜನರಿಗೆ ನೀಡುತ್ತಿದ್ದ ಬಂಗಾರ ನಕಲಿ. ಆ ಬಂಗಾರವನ್ನು ಸ್ವತಃ ತಾನೇ ಪರೀಕ್ಷೆ ಮಾಡುತ್ತಿದ್ದರಿಂದ ಜನರಿಗೆ ಅನುಮಾನ ಬರುತ್ತಿರಲಿಲ್ಲ. ಕಳೆದ ಹದಿನೈದು ದಿನದ ಹಿಂದೆ.ಮಲ್ಲಾಪುರದ ಸಿಂಡಕೇಟ್ ಬ್ಯಾಂಕ್ನಲ್ಲಿ ಅಡವಿಟ್ಟ ಕೆಲ ಬಂಗಾರವನ್ನು ಹರಾಜಿಗೆ ಕರೆದಾಗ ನಕಲಿ ಎಂಬುದು ಪತ್ತೆಯಾಗಿತ್ತು. ಅದೇ ರೀತಿ ಕದ್ರಾದ ಎಸ್ಬಿಐ ಬ್ಯಾಂಕಿನಲ್ಲೂ ಪ್ರಕರಣ ಬೆಳಕಿಗೆ ಬಂದಿದೆ.ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಕದ್ರಾ ಹಾಗೂ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

See also  ವೃದ್ಧದಂಪತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು