News Kannada
Wednesday, September 28 2022

ಕರ್ನಾಟಕ

ಉ. ಕ. ಜಿಲ್ಲೆಯಲ್ಲಿ ಕುಡಿಯುವ ನೀರು, ಕೃಷಿ ಭೂಮಿಯನ್ನು ಕಾಳುಗೆಡುವುತ್ತಿರುವ ಸಮುದ್ರದ ನೀರು - 1 min read

Photo Credit :

ಉ. ಕ. ಜಿಲ್ಲೆಯಲ್ಲಿ ಕುಡಿಯುವ ನೀರು, ಕೃಷಿ ಭೂಮಿಯನ್ನು ಕಾಳುಗೆಡುವುತ್ತಿರುವ ಸಮುದ್ರದ ನೀರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕೆಲ ಪ್ರದೇಶದಲ್ಲಿ ಜನ ನಿತ್ಯ ಉಪಯೋಗಿಸುವ ಸಿಹಿ ನೀರಿನ ಬಾವಿ ಸೇರಿದಂತೆ ಕೃಷಿ ಭೂಮಿಗಳಿಗೂ ಸಮುದ್ರದ ಉಪ್ಪು ನೀರು ಆಗಾಗ ನುಗ್ಗುತ್ತಿದ್ದು ಕುಡಿಯುವ ಶುದ್ಧ ನೀರಿನ ಅಭಾವ ಇರುವ ಸಂದರ್ಭದಲ್ಲಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಒಂದು ಬದಿಯಲ್ಲಿ ಉಪ್ಪು ನೀರಿನ ಸಮುದ್ರವನ್ನು ಹೊಂದಿರುವ ಕರಾವಳಿಯ ತಾಲೂಕುಗಳು ಇದೀಗ ಅದರಿಂದಲೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಮುದ್ರದಲ್ಲಿ ಉಬ್ಬರವಿಳಿತ ಪ್ರಕ್ರಿಯೆಗಳು ನಡೆದಾಗ ನದಿಗಳ ಮೂಲಕ ಹಿಮ್ಮುಖವಾಗಿ ಹರಿಯುವ ಉಪ್ಪು ನೀರು ಈ ಭಾಗದ ಸಮುದ್ರದಂಚಿನ ಪ್ರದೇಶಗಳ ಬಾವಿ, ಕೆರೆ ಸೇರಿದಂತೆ ಇನ್ನಿತರ ಸಿಹಿ ನೀರಿನ ಮೂಲಗಳನ್ನು ಸೇರುತ್ತಿವೆ.
ಕೃಷಿ ಭೂಮಿಗಳಿಗೆ ನುಗ್ಗುವ ಉಪ್ಪು ನೀರು ಬೆಳೆ ಹಾನಿಗೆ ಕಾರಣವಾಗುತ್ತಿದೆ. ಈ ಸಮಸ್ಯೆಯು ಕಳೆದ ಹಲವಾರು ವರ್ಷಗಳಿಂದ ಮುಂದುವರೆದುಕೊಂಡು ಬಂದಿದೆ. ಆದರೆ ಇದುವರೆಗೂ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ಜನರು ಪ್ರತಿ ವರ್ಷ ಸಮಸ್ಯೆಗಳ ನಡುವೆಯೇ ಜೀವಿಸುವ ಅನಿವಾರ್ಯತೆ ಎದುರಾಗಿದೆ.

ಮೈಲುಗಟ್ಟಲೆ ಸಾಗಬೇಕು: ಕರಾವಳಿಯ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳಗಳಲ್ಲಿ ಕೆಲವೆಡೆ ಕರಾವಳಿ ತೀರ ಹತ್ತಿರ ಇರುವ ಊರುಗಳಲ್ಲಿ ಬೇಸಿಗೆಯಲ್ಲಿ ಅಂತರ್ಜಲ ಮಟ್ಟವು ಕುಸಿದು ಬಾವಿಗಳಿಗೆ ಉಪ್ಪು ನೀರು ಸೇರಿಕೊಳ್ಳುತ್ತದೆ. ಇದರಿಂದ ಬಾವಿಗಳ ನೀರನ್ನು ಉಪಯೋಗಿಸಲು ಸಾಧ್ಯವಾಗದೆ ಜನತೆ ಶುದ್ಧ ನೀರಿಗಾಗಿ ಮೈಲುಗಟ್ಟಲೆ ದೂರ ಸಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕಾರವಾರ ತಾಲೂಕಿನ ಘಾಡಸಾಯಿ, ಹಳಗಾ, ಕಿನ್ನರ, ಅಮದಳ್ಳಿಯ ಕಂತ್ರಿವಾಡ, ಮುದಗಾ, ಚೆಂಡಿಯಾ, ಗೋಕರ್ಣ ಸಮೀಪದ ಕೆಲ ಗ್ರಾಮಗಳು, ಅಂಕೋಲಾ ತಾಲೂಕಿನ ಹಾರವಾಡ, ಅವರ್ಸಾ, ಹಟ್ಟಿಕೇರಿ, ಕುಮಟಾದ ಲುಕ್ಕೇರಿ, ಮಾಸೂರ, ದೇವರಬೋಳೆ, ಕಾಗಾಲ ಮತ್ತಿತರ ಗ್ರಾಮಗಳು, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಉಪ್ಪು ನೀರಿನ ಸಮಸ್ಯೆಯಿಂದ ಜನತೆ ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಅಪ್ರಯೋಜಕ ಬಾಂದಾರಗಳು: ಕರಾವಳಿಯ ವಿವಿಧ ಭಾಗಗಳಲ್ಲಿ ಉಬ್ಬರವಿಳಿತಗಳಿಂದಾಗಿ ಸಮುದ್ರದಿಂದ ಹೊಲಗದ್ದೆಗಳಿಗೆ ನುಗ್ಗುವ ಉಪ್ಪು ನೀರನ್ನು ತಡೆ ಹಿಡಿಯಲು ಬಾಂದಾರಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕೆಲವೆಡೆ ಅವು ನಿರ್ವಹಣೆಯಿಲ್ಲದೆ ದುರಸ್ಥಿ ಹಂತ ತಲುಪಿದರೆ ಇನ್ನು ಕೆಲವು ಭಾಗಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಬಾಂದಾರದ ಮೂಲಕವೇ ಉಪ್ಪು ನೀರು ಒಳ ಪ್ರವೇಶಿಸುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಅಧ್ಯಯನ ನಡೆಸಿ ಕ್ರಮಕ್ಕೆ ಮುಂದಾಗಬೇಕು.

ಬಂಜರಾದ ಭೂಮಿ: ಜಿಲ್ಲೆಯ ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಕಳೆದ ಹಲವಾರು ವರ್ಷಗಳಿಂದ ಇದೆ. ಇದರಿಂದ ಈ ಭಾಗದಲ್ಲಿ ಬೆಳೆ ಬೆಳೆಯಲಾಗುತ್ತಿದ್ದ ಸುಮಾರು ೧,೬೦೦ ಎಕರೆಯಷ್ಟು ಪ್ರದೇಶ ಉಪ್ಪು ನೀರಿನಿಂದ ಪ್ರಯೋಜನಕ್ಕೆ ಬರದಂತಾಗಿದೆ. ಹವಾಮಾನ ವೈಪರೀತ್ಯ, ಮಾಲಿನ್ಯ, ಮಾನವನು ನಡೆಸುತ್ತಿರುವ ಪ್ರಕೃತಿ ನಾಶದ ಕಾರಣಗಳಿಂದಾಗಿ ಈ ರೀತಿ ಸಮಸ್ಯೆ ತಲೆದೂರಲು ಕಾರಣ ಎನ್ನಲಾಗುತ್ತಿದೆ. ಉಪ್ಪು ನೀರಿನ ಸಮಸ್ಯೆಯಿಂದಾಗಿ ಇತ್ತೀಚಿನ ಕೆಲ ವರ್ಷಗಳಿಂದ ಈ ಭಾಗದ ರೈತರು ಕೃಷಿಯನ್ನು ತ್ಯಜಿಸುತ್ತಿದ್ದು ಭೂಮಿ ಈಗ ಬಂಜರಾಗಿದೆ.

See also  ಸರ್ಕಾರಿ ಚಿಲ್ಡ್ರನ್ಸ್ ಹೋಂ ಸ್ಥಳಾಂತರಕ್ಕೆ ಹುನ್ನಾರ: ಆರೋಪ

ಕರಾವಳಿ ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆಯಿಂದ ಕಡಿಮೆಯಾಗುತ್ತಿರುವ ಕೃಷಿ ಉತ್ಪಾದನೆಯ ಇಳಿಮುಖವನ್ನು ತಡೆಗಟ್ಟಲು ಕೃಷಿ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ. ತಜ್ಞರಿಂದ ಸಮೀಕ್ಷೆ ನಡೆಸಿ ಉಪ್ಪು ನೀರಿನಿಂದಾಗುವ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಹಾಗೂ ಪ್ರಯೋಗಗಳ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಮೂರು ವರ್ಷದ ಯೋಜನೆ ಇದಾಗಿದ್ದು ೨೦೧೬-೧೭ರ ಬಜೆಟ್ನಲ್ಲಿ ಇದಕ್ಕಾಗಿ ೧ ಕೋಟಿ ರೂ. ಬಿಡುಗಡೆಯಾಗಿತ್ತು. ಕಾಮಗಾರಿ ಕೆಲವು ಕಡೆಗಳಲ್ಲಿ ನಡೆದಿದ್ದು ಇನ್ನು ಹಲವು ಲಡೆಳಲ್ಲಿ ನಡೆಯಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು