News Kannada
Tuesday, September 27 2022

ಕರ್ನಾಟಕ

ಕಾವೇರಿ ತಾಲೂಕು ಬೇಡಿಕೆ ಪ್ರತಿಭಟನೆಗೆ ಸೇರಿದ ಜನಸಾಗರ - 1 min read

Photo Credit :

ಕಾವೇರಿ ತಾಲೂಕು ಬೇಡಿಕೆ ಪ್ರತಿಭಟನೆಗೆ ಸೇರಿದ ಜನಸಾಗರ

ಕುಶಾಲನಗರ: ಇದೊಂದು ಅದ್ಭುತ ಜನಸಾಗರದ, ಜನಸಂದೋಹದ, ಸಡಗರ-ಸಂಭ್ರಮ, ಉತ್ಸಾಹಗಳ ಸಂಗಮವಾಗಿದ್ದು, ಹರಿದುಬಂದ ಪ್ರಸ್ತಾವಿತ ಕುಶಾಲನಗರ ಕೇಂದ್ರವಾಗಿರಿಸಿದ ಕಾವೇರಿ ತಾಲೂಕು ಬೇಡಿಕೆಯ ಹೋರಾಟದ ಪ್ರವಾಹ.

ಪುರಾತನ ತಾವರೆ ಕೆರೆಯಿಂದ ಪ್ರಾರಂಭವಾದ ಚೆಟ್ಟಳ್ಳಿ, ಸುಂಟಿಕೊಪ್ಪ, ನೆಲ್ಯಹುದಿಕೇರಿ, ವಾಲ್ನೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, 7ನೇ ಹೊಸಕೋಟೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಬಸವನಹಳ್ಳಿ, ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕಣಿವೆ, ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ಮತ್ತು ಸ್ಥಾನೀಯ ಸಮಿತಿಗಳ ವ್ಯಾಪ್ತಿಯಲ್ಲಿ ಸಂಘಟಿತವಾಗಿ, ಸಿದ್ಧವಾಗಿ, ಆಕ್ರೋಶಭರಿತರಾಗಿ ಹೃದಯಾಳದ ಘೋಷಣೆಗಳನ್ನು ತಾಲೂಕು ರಚನೆ ಆಗಲೇಬೇಕೆಂಬ ಒತ್ತಾಸೆಯ ಬೇಡಿಕೆಗಳನ್ನು ಪ್ರತಿಭಟನಾಕಾರರು ಕುಶಾಲನಗರ ಹೃದಯಭಾಗಕ್ಕೆ ಶಿಸ್ತಿನಿಂದ ಹರಿದುಬಂದರು. ಮುಖ್ಯ ವೃತ್ತದಲ್ಲಿ ಸಮಾವೇಶವಾಗಿ ನಂತರ ರಥಬೀದಿ, ಮಾರುಕಟ್ಟೆ ರಸ್ತೆ, ಕೊಪ್ಪ ಕಡೆ ಹಾದು ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ಕಳೆದ ಹದಿನೈದು ದಿನಗಳಿಂದ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಿದ ಗುಂಡೂರಾವ್ ವೇದಿಕೆ ಬಳಿ ಸಮಾವೇಶಗೊಂಡರು.

ಈ ಬೃಹತ್ ಜಾಥಾದಲ್ಲಿ ನಿಸರ್ಗಧಾಮ ಕೇಂದ್ರದ ವ್ಯಾಪಾರಿಗಳು ತಮ್ಮದೇ ವೈಶಿಷ್ಟ್ಯದಲ್ಲಿ ಸೇರಿಕೊಂಡಿದ್ದರೆ, ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಬಹಿಷ್ಕರಿಸಿ ತಾಲೂಕು ರಚನೆಯ ಬೇಡಿಕೆಯ ಘೋಷಣೆಗಳನ್ನು ಕೂಗುತ್ತಾ ಅವರು ಸಹ ಬೃಹತ್ ಜಾಥಾಕ್ಕೆ ಸಾಥ್ ನೀಡಿದರು. ಕುಶಾಲನಗರ ಮಹಿಳಾ ಸಮಾಜ ಹಾಗೂ ಆಲ್-ಇ-ಸಾನ್ ಕಮಿಟಿ ಸದಸ್ಯರು, ಜಾಮೀಯ, ಹಿಲಾಲ್ ಮಸೀದಿಗಳ ಪ್ರತಿನಿಧಿಗಳು ಈ ಬೃಹತ್ ಜಾಥಾಕ್ಕೆ ಬೆಂಬಲಿಸಿ ಘೋಷಣೆ ಕೂಗಿ ಸಾಗಿಬಂದರು. ಈ ಮೆರವಣಿಗೆಯಲ್ಲಿ ಕೇಂದ್ರೀಯ ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಮುದ ಧರ್ಮಪ್ಪ, ಲತೀಫ್, ಮಂಜುಳಾ, ಸುನೀತ ಮತ್ತು ತಾಲೂಕು ಪಂಚಾಯಿತಿ ಸದಸ್ಯರು, 19 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ತಾಲೂಕು ಬೇಡಿಕೆಯ ಘೋಷಣೆಗಳನ್ನು ಕೂಗುತ್ತ, ಬೇಕೆ ಬೇಕು ತಾಲೂಕು ಬೇಕು ಎನ್ನತ್ತಾ ಕಾರು ನಿಲ್ದಾಣದಲ್ಲಿ ಸಮಾವೇಶಗೊಂಡರು.

ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಸಾಗಿಬಂದ ಜನಸಾಗರಕ್ಕೆ ಉತ್ತಮವಾದ ರೀತಿಯಲ್ಲಿ ಹಾದಿ ತೋರಿಸಿದ ಪೊಲೀಸ್ ವ್ಯವಸ್ಥೆ ಯಾವುದೇ ಅನಾಹುತಗಳು ಸಂಭವಿಸದಂತೆ ಡಿವೈಎಸ್ಪಿ ಸಂಪತ್ ಕುಮಾರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿಗಳಾದ ಜಗದೀಶ್, ಜೆ.ಇ.ಮಹೇಶ್, ನೂರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಗಳು ಕಾನೂನು ಭಂಗವಾಗದಂತೆ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು.

See also  ಕಾಸರಗೋಡು: ಬೈಕ್-ಕಾರು ಅಪಘಾತದಲ್ಲಿ ಕೃಷಿ ಸಹಾಯಕ ದುರ್ಮರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು