News Kannada
Monday, October 03 2022

ಕರ್ನಾಟಕ

ಶಿರಸಿಯಲ್ಲಿ 160 ಮೀಟರ್ ನ ಕನ್ನಡ ಧ್ವಜ ಹಾರಿಸಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ - 1 min read

Photo Credit :

ಶಿರಸಿಯಲ್ಲಿ 160 ಮೀಟರ್ ನ ಕನ್ನಡ ಧ್ವಜ ಹಾರಿಸಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ

ಕಾರವಾರ: ಕನ್ನಡದ ಮೇಲಿನ ಅಭಿಮಾನ ಹೆಚ್ಚಿಸಿ ಜನಜಾಗೃತಿಗೊಳಿಸಬೇಕು ಎಂದು ರಾಜ್ಯೋತ್ಸವದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರೆಡ್ ಆ್ಯಂಟ್ ಸಂಘಟನೆಯಿಂದ ಬೃಹತ್ ಗಾತ್ರದ ಕನ್ನಡ ಧ್ವಜ ಮೆರವಣಿಗೆ ನಡೆಸಿತು.

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರೆಡ್ ಆ್ಯಂಟ್ ಸಂಘಟನೆಯಿಂದ 160 ಮೀಟರ್ ಉದ್ದದ ಕನ್ನಡ ಧ್ವಜ ಮೆರವಣಿಗೆ, ಮಾರಿಕಾಂಬಾ ಪ್ರೌಢಶಾಲೆ ಸುಮಾರು 400 ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಭಾಷೆ, ಕನ್ನಡಾಭಿಮಾನ, ಕನ್ನಡದ ಕುರಿತು ಜಾಗೃತಿ ಮೂಡಿಸಲು ಶಿರಸಿಯ ರೆಡ್ ಆ್ಯಂಟ್ ಫ್ರೆಂಡ್ಸ್ ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿದ್ದು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಧ್ವಜ ನಿರ್ಮಾಣವಾಗಿದೆ. ಕನ್ನಡ ರಾಜ್ಯೋತ್ಸವದ ದಿನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಜನರನ್ನು ಬೆರಗುಗೊಳಿಸಿದರು.

ನಗರದ ಮಾರಿಕಾಂಬಾ ಪ್ರೌಢಶಾಲೆಯ ಪ್ರಾಂಗಣದಿಂದ ಬೆಳಿಗ್ಗೆ 8.30 ಕ್ಕೆ ಕನ್ನಡ ಧ್ವಜದ ಮೆರವಣಿಗೆ ಹೊರಟ್ಟಿದ್ದು, ಸಿಪಿ ಬಝಾರ, ನಟರಾಜ ರಸ್ತೆ, ಬಸ್ ಸ್ಟಾಂಡ್ ವೃತ್ತ ಹೀಗೆ ಎಲ್ಲಾ ಕಡೆಗಳಲ್ಲಿ ಕನ್ನಡಾಭಿಮಾನ ಬೆಳಗಿದೆ. ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯ ಸುಮಾರು 400 ವಿದ್ಯಾರ್ಥಿಗಳು ಮೆರವಣಿಕೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರು ಸಿಬ್ಬಂದಿಗಳು ಇದ್ದರು. ರೆಡ್ ಆ್ಯಂಟ್ ಸಂಸ್ಥೆಯ ಗೆಳೆಯರ ಬಳಗವೇ ಸೇರಿ ಸುಮಾರು 15 ಸಾವಿರ ರೂ. ಖರ್ಚ ಮಾಡಿ ಶಿರಸಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ವಿಶೇಷವಾಗಿ ಆಚರಿಸಿಕೊಂಡರು.

 

See also  ಅಕ್ರಮ ಮರ ಸಾಗಾಟ : ಬೆಟ್ಟಗೇರಿಯಲ್ಲಿ ಮಾಲು ಸಹಿತ ಐವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು