News Kannada
Saturday, October 01 2022

ಕರ್ನಾಟಕ

ಬೆಂಗಳೂರಿನಲ್ಲಿ ಕನ್ನಡಕ್ಕೆ ಕಂಟಕ ಬಂದಿದೆ: ಡಾ. ಮನುಬಳಿಗಾರ್ ಆತಂಕ - 1 min read

Photo Credit :

ಬೆಂಗಳೂರಿನಲ್ಲಿ ಕನ್ನಡಕ್ಕೆ ಕಂಟಕ ಬಂದಿದೆ: ಡಾ. ಮನುಬಳಿಗಾರ್ ಆತಂಕ

ಬೆಂಗಳೂರು: ರಾಜ್ಯದ ಇತರೆಡೆಗಿಂತ ಬೆಂಗಳೂರಿನಲ್ಲಿ ಕನ್ನಡ ಭಾಷೆಗೆ ಕಂಟಕ ಒದಗಿ ಬಂದಿದೆ. ಕನ್ನಡದ ಸ್ಥಿತಿಯ ಬಗ್ಗೆ ಆತಂಕ ಇದೆ. ಇದನ್ನು ನಿವಾರಿಸಲು ಎಲ್ಲರೂ ಮನೆಯಲ್ಲಿ ಕನ್ನಡ ಮಾತನಾಡುವ ಪರಿ ಪಾಠವನ್ನು ರೂಢಿಸಿಕೊಳ್ಳಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನುಬಳಿಗಾರ್ ಹೇಳಿದರು.
ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್ನ ರಾಜ್ಯೋತ್ಸವ ಸಮಾರಂಭದಲ್ಲಿ ಡಿಎಸ್ ಮ್ಯಾಕ್ಸ್ ಸಾಹಿತ್ಯ ಪುರಸ್ಕಾರ ಹಾಗೂ ಡಿಎಸ್ ಮ್ಯಾಕ್ಸ್ ಸಾಹಿತ್ಯಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ಅವರು ಬ್ರಿಟಿಷರ ಗುಲಾಮಗಿರಿ ಹೋದರೂ ಮನೆಯಲ್ಲಿ ಇಂಗ್ಲಿಷ್ ಮಾತನಾಡುವ ಮೂಲಕ ಬೆಂಗಳೂರಿನಲ್ಲಿ ಕನ್ನಡಕ್ಕೆ ಒದಗಿರುವ ಕಂಟಕವನ್ನು ತೊಲಗಿಸಬೇಕು ಎಂದರು.

ಇಂಗ್ಲಿಷ್ ಮಾತನಾಡಿದರೆ ಬುದ್ದಿವಂತರು ಎಂಬ ಮನೋಭಾವ ಬೆಳೆಯುತ್ತಿದೆ. ಇದರು ಸರಿಯಲ್ಲ. ಕನ್ನಡಿಗರಷ್ಟು ಬುದ್ಧಿವಂತರು ಎಂಬ ಮನೋಭಾವ ಬೆಳೆಯುತ್ತಿದೆ. ಇದು ಸರಿಯಲ್ಲ. ಕನ್ನಡಿಗರಷ್ಟು ಬುದ್ಧಿವಂತರು ಜಗತ್ತಿನಲ್ಲೇ ಇಲ್ಲ ಅಕ್ಷರ ಇಲ್ಲದಾಗಲೇ ಕಾವ್ಯವನ್ನು ಬರೆದವರು ಕನ್ನಡಿಗರು. ಇದನ್ನು ಅರ್ಥಮಾಡಿಕೊಂಡು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ ಎಂದರು.

ಸರ್ಕಾರಗಳು ಕೂಡ ಕನ್ನಡ ಭಾಷೆಗೆ ಪ್ರೋತ್ಸಹ ನೀಡುತ್ತಿದೆ. ಮಾತೃ ಭಾಷೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಕನ್ನಡಿಗರ ಕಲ್ಯಾಣಕ್ಕಾಗಿ ಇನ್ನೂ ಹಲವು ಕಾರ್ಯಕ್ರಮಗಳು ಆಗಬೇಕಿದೆ. ಕನ್ನಡದ ಜಾಗೃತಿ ಮೂಡಿಸುವ ಕೆಲಸ ಸದಾ ಆಗಬೇಕು. ನವೆಂಬರ್ ನಲ್ಲಿ ಮಾತ್ರ ಕನ್ನಡವನ್ನು ನೆನಪಿಸಿಕೊಳ್ಳುವಂತಾಗಬಾರದು ಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ದಾವಡೆಗೆರೆ ಮಠದ ಪೀಠಾಧ್ಯಕ್ಷರಾದ ಶ್ರೀ ನಟರಾಜ ಮಹಾಸ್ವಾಮಿಗಳಿಗೆ ಡಿಎಸ್ ಮ್ಯಾಕ್ಸ್ ಸಾಹಿತ್ಯ ಪುರಸ್ಕಾರ ಹಾಗೂ ಸಾಹಿತಿಗಳಾದ ಡಾ. ಡಿ. ರಾಜಶೇಖರಪ್ಪ, ಡಾ. ಬಸವರಾಜ ಕಲ್ಗುಡಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಶಾಂತಕುಮಾರಿ ಇಮ್ರಾಪುರ, ಡಾ. ಜಯಶ್ರೀ ದಂಡೆ ಇವರುಗಳಿಗೆ ಡಿಎಸ್. ಮ್ಯಾಕ್ಸ್ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದಕ್ಕೂ ಮೊದಲು ತಾಯಿ ಭುವನೇಶ್ವರಿಯ ಪೂಜೆ, ಧ್ವಜಾರೋಹಣ ನಂತರ ಸುಮಾರು 350 ಅಡಿ ಉದ್ದದ ಕನ್ನಡ ಧ್ವಜವನ್ನು ನಾಗವಾರ ರಿಂಗ್ ರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ ಕನ್ನಡ ರಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಮಾರಂಭದಲ್ಲಿ ಡಿಎಸ್ ಮ್ಯಾಕ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಕೆ.ವಿ. ಸತೀಶ್ ಕಾರ್ಯ ನಿರ್ವಾಹಕ ನಿರ್ದೇಶಕ ಎಸ್.ಪಿ. ದಯಾನಂದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

See also  ಸಭೆಯಲ್ಲೇ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು