News Kannada
Wednesday, October 05 2022

ಕರ್ನಾಟಕ

ಕೊಡಗಿಗೆ 3 ಪ್ರತ್ಯೇಕ ತಾಲೂಕುಗಳಿಗೆ ಸಿಪಿಐಎಂ ಒತ್ತಾಯ - 1 min read

Photo Credit :

ಕೊಡಗಿಗೆ 3 ಪ್ರತ್ಯೇಕ ತಾಲೂಕುಗಳಿಗೆ ಸಿಪಿಐಎಂ ಒತ್ತಾಯ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ನೂತನ ಕಾವೇರಿ ತಾಲೂಕಿನ ಬೇಡಿಕೆಯೊಂದಿಗೆ ಪೊನ್ನಂಪೇಟೆ ಮತ್ತು ನಾಪೊಕ್ಲುಗಳನ್ನು ಒಳಗೊಂಡಂತೆ ಮೂರು ತಾಲೂಕುಗಳನ್ನು ರಚಿಸುವಂತೆ ಆಗ್ರಹಿಸಿ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಾರ್ಟಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು.

ಸಿಪಿಐಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ| ಇ.ರ. ದುರ್ಗಾ ಪ್ರಸಾದ್ ನೇತೃತ್ವದಲ್ಲಿ ಪಕ್ಷದ ಪ್ರಮುಖರು ಗುರುವಾರ ಜಿಲ್ಲಾಡಳಿತ ಭವನದ ಎದುರು ಮೂರು ತಾಲೂಕುಗಳ ರಚನೆಗಾಗಿ ಆಗ್ರಹಿಸಿದರು. ಕುಶಾಲನಗರವನ್ನು ಕೇಂದ್ರವಾಗಿಸಿಕೊಂಡ ‘ಕಾವೇರಿ ತಾಲೂಕು’ ಹೋರಾಟಕ್ಕೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಲ್ಲದೆ, ಜನಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಮತ್ತು ನಾಪೊಕ್ಲು ತಾಲೂಕುಗಳ ರಚನೆಗೂ ಸರ್ಕಾರ ಆಸಕ್ತಿ ವಹಿಸಬೇಕೆಂದು ಒತ್ತಾಯಿಸಿದರು.

ಅಧಿಕಾರ ವಿಕೇಂದ್ರೀಕರಣದ ಮೂಲಕ ಆಡಳಿತ ವ್ಯವಸ್ಥೆಯ ಜವಾಬ್ದಾರಿಗಳನ್ನು ಜನತೆಯ ಕೈಗೆ ನೀಡುವುದು ಅಭಿವೃದ್ಧಿಯ ದೃಷ್ಟಿಕೋನದ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ಇಂತಹ ಮಹತ್ವದ ವಿಚಾರಗಳ ಹಿನ್ನೆಲೆಯಲ್ಲಿ 2008ರ ಸುಮಾರಿನಲ್ಲೇ ಕಾವೇರಿ ತಾಲೂಕು ರಚನೆ, ಪೊನ್ನಂಪೇಟೆ ಮತ್ತು ನಾಪೊಕ್ಲು ತಾಲೂಕು ರಚನೆಗಳ ಪ್ರಸ್ತಾಪವನ್ನು ಸರ್ಕಾರದ ಮುಂದೆ ಮಂಡಿಸಲಾಗಿತ್ತೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಆಶಯದಂತೆ ದಶಕಗಳ ಹಿಂದೆಯೇ ಕಾವೇರಿ ತಾಲೂಕು ರಚನೆಯ ಹೋರಾಟ ಪ್ರಾರಂಭವಾಗಿತ್ತು. ಆದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳು ಜಿಲ್ಲೆಯ ನ್ಯಾಯಯುತವಾದ ನೂತನ ತಾಲೂಕುಗಳ ರಚನೆಯ ಬಗ್ಗೆ ಆಸಕ್ತಿ ತೋರದೆ ಇರುವುದರಿಂದ ಬೇಡಿಕೆ ನೆನೆಗುದಿಗೆ ಬಿದ್ದಿದೆ ಎಂದು ಅಭಿಪ್ರಾಯಪಟ್ಟರು. ಈಗಲಾದರೂ ರಾಜ್ಯ ಸರ್ಕಾರ ನೂತನ ತಾಲೂಕು ರಚನೆಯ ಹೋರಾಟಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಕೆಗೆ ಮುಂದಾಗಬೇಕೆಂದು ದುರ್ಗಾ ಪ್ರಸಾದ್ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಪ್ರಮುಖರಾದ ಎ.ಸಿ.ಸಾಬು, ರಮೇಶ್, ಎನ್.ಡಿ. ಕುಟ್ಟಪ್ಪ, ವರ್ಗೀಸ್ ಮೊದಲಾದವರು ಪಾಲ್ಗೊಂಡಿದ್ದರು.

See also  ಕಾಸರಗೋಡು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು