News Kannada
Monday, October 03 2022

ಕರ್ನಾಟಕ

ಬೆಳವಾಡಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಭೇಟಿ - 1 min read

Photo Credit :

ಬೆಳವಾಡಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಭೇಟಿ

ಚಿಕ್ಕಮಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಚಟುವಟಿಕೆಗಳನ್ನು ಬಿಂಬಿಸುವ ಚಲನಚಿತ್ರ ನಿರ್ಮಿಸಲಾಗುತ್ತಿದ್ದು, ಚಿತ್ರೀಕರಣ ನಡೆಯುತ್ತಿರುವ ತಾಲೂಕಿನ ಬೆಳವಾಡಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿ ವೀಕ್ಷಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಅವರ ತಂಡ ಗ್ರಾಮದ ಮುಂಭಾಗದಲ್ಲಿ ವೀರೇಂದ್ರ ಹೆಗ್ಗಡೆ ಅವರನ್ನು ಸ್ವಾಗತಿಸಿತು. ನಂತರ ಗ್ರಾಮೀಣ ವಾದ್ಯ ಹಾಗೂ ಭಜನಾ ತಂಡಗಳ ನಡುವೆ ಹೆಗ್ಗಡೆ ಅವರನ್ನು ಮೆರವಣಿಗೆ ಮುಖಾಂತರ ಚಿತ್ರೀಕರಣದ ಸ್ಥಳವಾದ ಶ್ರೀ ಉದ್ಭವ ಗಣಪತಿ ದೇವಾಲಯಕ್ಕೆ ಕರೆ ತರಲಾಯಿತು. ದೇವಾಲಯದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು, ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ವೀರೇಂದ್ರ ಹೆಗ್ಗಡೆ ಅವರು ಚಿತ್ರೀಕರಣವನ್ನು ವೀಕ್ಷಿಸುವುದರ ಜೊತೆಗೆ ನಿರ್ದೇಶಕ ನಾಗಾಭರಣ ಅವರಿಂದ ಚಿತ್ರೀಕರಣದ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಪತ್ರಕರ್ತರೊಂದಿಗೆ ವೀರೇಂದ್ರ ಹೆಗ್ಗಡೆ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಚಟುವಟಿಕೆ ಮತ್ತು ಸಾಧನೆಗಳನ್ನು ಜನತೆ ನೋಡಲಿ, ಆ ಮೂಲಕ ಅವರೂ ಪರಿವರ್ತನೆಯಾಗಿ ಸ್ವಾವಲಂಬಿಗಳಾಗಿ ಬಾಳಲಿ ಎಂಬ ಸದುದ್ದೇಶದಿಂದ ಈ ಚಿತ್ರ ನಿರ್ಮಿಸಲಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ 20 ಲಕ್ಷ ಸದಸ್ಯರಿಂದ ತಲಾ 20 ರೂ.ನಂತೆ ಸಂಗ್ರಹಿಸಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಚಿತ್ರಕ್ಕೆ ಕಾನೂರಾಯಣ ಎಂದು ಹೆಸರಿಡಲಾಗಿದೆ ಎಂದರು.

ನಿರ್ದೇಶಕ ನಾಗಾಭರಣ ಮಾತನಾಡಿ, 2 ಕೋಟಿ ರೂ.ಗಳ ವೆಚ್ಚದಲ್ಲಿ 2 ಗಂಟೆ ಕಾಲಾವಧಿಯ ಈ ಚಿತ್ರವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಶೇ.20ರಷ್ಟು ಚಿತ್ರೀಕರಣವಾಗಿದೆ. ಮಾರ್ಚ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.

See also  ಮದ್ದೂರಿನಲ್ಲಿ ಮಸಣ ಸೇರಿದ ಮದುವೆ ದಿಬ್ಬಣ: 13ಮಂದಿ ಸಾವು, 20 ಮಂದಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು