News Kannada
Saturday, September 24 2022

ಕರ್ನಾಟಕ

ದೇಣಿಗೆ ನೀಡಿ ವೃದ್ಧಾಶ್ರಮ ಸೇರಿದ ಮಾಜಿ ಸೈನಿಕ - 1 min read

Photo Credit :

ದೇಣಿಗೆ ನೀಡಿ ವೃದ್ಧಾಶ್ರಮ ಸೇರಿದ ಮಾಜಿ ಸೈನಿಕ

ಮಾಗಡಿ: ಇಲ್ಲಿನ ಉಡುವೆಗೆರೆ ನಿವಾಸಿ ನಿವೃತ್ತ ಸೈನಿಕರಾಗಿರುವ ದೊಡ್ಡಮರಿಯಪ್ಪ (82) ಅವರು ಮರೂರು ಬಳಿಯ ಸೂರಪನಹಳ್ಳಿ ವೃದ್ಧಾಶ್ರಮಕ್ಕೆ ಸ್ವಯಾರ್ಜಿತ ಕೂಡಿಟ್ಟ ಐವತ್ತು ಸಾವಿರ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ಬೆಂಗಳೂರು ಎಎಸ್ಸಿ ನಲ್ಲಿ 62ವರ್ಷಗಳ ಹಿಂದೆ ಮೂರು ವರ್ಷ ತರಬೇತಿ ಮತ್ತು ಸೇವೆ ಸಲ್ಲಿಸಿ ದೇಶದ ಲಡಾಕ್, ಜಮ್ಮು ಕಾಶ್ಮೀರದ ಗಡಿಯಲ್ಲಿ ಇಪ್ಪತ್ತನಾಲ್ಕು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದರು.

ಈ ವೃದ್ದ ತುಂಬಿದ ಕುಟುಂಬದಲ್ಲಿ ನೆಮ್ಮದಿಯಾಗಿದ್ದರು ಮನೆಯಲ್ಲಿ ಇವರನ್ನು ತಾತ್ಸಾರ ಮಾಡುವುದು ಗೋಚರವಾಗುತ್ತಿದ್ದಂತೆಯೇ ಮೂರು ತಿಂಗಳಿಂದ ಕೂಡಿರಿಸಿದ ಐವತ್ತು ಸಾವಿರ ಮೊತ್ತವನ್ನು ಕನಕ ಜಯಂತಿಯ ದಿನದಂದು ಮಾನಗಲ್ ಶ್ರೀನಿವಾಸ್ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಮರೂರು ಹ್ಯಾಂಡ್ಪೋಸ್ಟ್ನ ಶ್ರೀ ಸತ್ಯಸಾಯಿ ಸೇವಾ ಪ್ರತಿಷ್ಠಾನ ಟ್ರಸ್ಟ್ ಸೂರಪನಹಳ್ಳಿಯ ವೃದ್ಧಾಶ್ರಮದ ವ್ಯವಸ್ಥಾಪಕ ಗುಂಡೂರಾವ್ ಅವರಿಗೆ ನೀಡಿ ತಾವು ಆಶ್ರಮವಾಸಿಯಾಗಲು ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನನಗೆ ದೇಶಸೇವೆ ಸಲ್ಲಿಸಿದ ಸಮಾಧಾನವಿದೆ. ವೃದ್ಧಾಪ್ಯದಲ್ಲಿ ಮಕ್ಕಳು ಮೊಮ್ಮಕ್ಕಳು ಇದ್ದರೂ ವಯಸ್ಸಾದವರ ಸಮಸ್ಯೆಯನ್ನು ಅರಿತು ಸೇವೆ ಮಾಡುವ ಮನೋಭಾವದವರು ಕಡಿಮೆ ಅದರಿಂದಾಗಿ ವೃದ್ಧರ ಸಮಸ್ಯೆ ಏನೆಂದು ಅರಿತು ಅವರಿಗೆ ನನ್ನ ಈ ಸ್ವಯಾರ್ಜಿತ ಮೊತ್ತವನ್ನು ದೇಣಿಗೆ ನೀಡುವ ಈ ನಿರ್ಣಯವನ್ನು ಕೈಗೊಂಡಿರುವುದಾಗಿ ಮಿಲಿಟರಿ ದೊಡ್ಡಮರಿಯಪ್ಪ ಹೇಳಿದ್ದಾರೆ.

See also  ಭೀಕರ ರಸ್ತೆ ಅಪಘಾತ: ನಾಲ್ಕು ಜನ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು