News Kannada
Sunday, September 25 2022

ಕರ್ನಾಟಕ

ಖಾದರಲಿಂಗ್ ದರ್ಗಾಕ್ಕೆ ಭೇಟಿ ನೀಡಿದ ಖಾದರ್ಲಿಂಗ್ ವಂಶಸ್ಥರು - 1 min read

Photo Credit :

ಖಾದರಲಿಂಗ್ ದರ್ಗಾಕ್ಕೆ ಭೇಟಿ ನೀಡಿದ ಖಾದರ್ಲಿಂಗ್ ವಂಶಸ್ಥರು

ಕಾರವಾರ: ಹಿಂದೂ ಮುಸ್ಲೀಮರ ಭಾವಕ್ಯತೆ ಪ್ರತಿಕವಾಗಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಖಾದರಲಿಂಗ್ ದರ್ಗಾದಲ್ಲಿ ಖಾದರಲಿಂಗ್ ವಂಶಸ್ಥರು ಭೇಟಿ ನೀಡಿದರು. ಖಾದರಲಿಂಗ್ರ ವಂಶಸ್ಥರು ದರ್ಗಾವನ್ನು ಹೂವು ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ಸ್ಥಳೀಯ ಜನರಿಗೆ ಅನ್ನ ದಾಸೋಹ ನಡೆಸುತ್ತಾರೆ.

ಆಂಧ್ರದ ಕರ್ನೂಲ್ನಲ್ಲಿರುವ ಅವರ ವಂಶಸ್ಥರು ಖಾದರಲಿಂಗ್ ಗದ್ದುಗಿಗೆ ಮುಂಡಗೋಡ ಜಮಾತ್ನ ಜೊತೆ ಫಾತೇಹ ಸಲ್ಲಿಸಿ ಮುಂಡಗೋಡ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಸರ್ವಧರ್ಮದವರೆಲ್ಲ ಸೇರಿ ಹರಿಸುತ್ತಾರೆ.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರಲಿಂಗ್ ರ ವಂಶಸ್ಥ ಅಲ್ಹಾಜ್ ಹಜರತ್ ಖ್ವಾಜಾ ಸಯ್ಯದ ಷಾ ಸಾಹೇಬ ಪೀರ್, ಧರ್ಮದ ಹಾದಿಯಲ್ಲಿ ನಡೆದರೆ ದೇವರು ಎಂದು ಕೈಬಿಡಲಾರ. ಖಾದರಲಿಂಗ್ ವಂಶಸ್ಥರು ಜಾತಿಭೇದ ಮಾಡದೇ ಎಲ್ಲರ ಒಳತಿಗಾಗಿ ಪರಮಾತ್ಮನ ಹತ್ತಿರ ಪ್ರಾರ್ಥನೆ ಮಾಡಿದವರು ಮುಂಡಗೋಡದಲ್ಲಿ ಐಕ್ಯರಾದ ಖಾದರಲಿಂಗರ ಹೆಸರು ಸಾನಿ ಮಿರಾಂಜೆ ಖುದಾನಾಮಾ ಮಹ್ಮದ ಮಹ್ಮದುಲ್ ಹುಸೇನಿ ಚಿಸ್ತೀ ಉಲ್ ಖಾದರಿ ಲಿಂಗ್ಬಂದ್ ಜಗತ್ ಗುರು ಜಾಗಿರದಾರ ಉರುಫ್(ಅಲಿಯಾಸ್) ಖಾದರಲಿಂಗ್.

ಜಗತ್ಗುರು ಎಂದರೆ ಜಗತ್ತಿನ ಎಲ್ಲ ಧರ್ಮದವರಿಗೆ ಬೋಧಿಸುವನೇ ಜಗತ್ಗುರು ಎಂದರು.

ಖಾದರಲಿಂಗ್ ತಂದೆಗೆ ಐವರು ಗಂಡು ಮಕ್ಕಳಲ್ಲಿ ಮುಂಡಗೋಡದಲ್ಲಿರುವ ಖಾದರಲಿಂಗ್ ೪ ನೇ ಮಗ. ಧರ್ಮದ ಕಾರ್ಯಗಳನ್ನು ಬೋಧಿಸುತ್ತಾ ಮುಂಡಗೋಡ ಬಂದು ದೇವರ ಸನ್ಮಾರ್ಗ ಕಾರ್ಯಗಳನ್ನು ಕೈಗೊಂಡು ಇಲ್ಲಿಯೇ ಐಕ್ಯರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಯ್ಯದ ಮಹ್ಮದಿ ಹುಸೇನಿ ನಜಂಸಾಹೇಬ(ಬೀದರ), ಸಯ್ಯದ ಷಾ ಜೈನುಲ್ಲಾ ಅಬೆದನ್ ಅಲೈ ಮುನ್ನಾ ಪಾಷಾ ಕೌತಾ ಆಲಂ(ಆಂಧ್ರ), ಸಯ್ಯದ ಖ್ವಾಜಾ ಪೀರ ಹುಸೇನಿ ಕೌತಾ ಆಲಂ( ಆಂಧ್ರ) ಸಯ್ಯದ ಅಜರುದ್ದಿನ ಚಿಸ್ತೀ(ಹುಬ್ಬಳ್ಳಿ) ಸಯ್ಯದ ಇಮಾಮಸಾಬ ಚಿಸ್ತೀ(ಹುಬ್ಬಳ್ಳಿ), ಮುಸ್ತಾಕ ಹರಿಹರಕರ ಇನ್ನಿತರರು ಆಗಮಿಸಿದ್ದರು.

See also  ಸಮಾನತೆಯ ಸಂದೇಶ ಸಾರಿದ ಕುವೆಂಪು ಜಗದ ಕವಿ: ಟಿ.ಪಿ.ರಮೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು