News Kannada
Friday, October 07 2022

ಕರ್ನಾಟಕ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ: ಮೂವರು ಸಾವು, ಒಬ್ಬನ ಸ್ಥಿತಿ ಚಿಂತಾಜನಕ - 1 min read

Photo Credit :

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ: ಮೂವರು ಸಾವು, ಒಬ್ಬನ ಸ್ಥಿತಿ ಚಿಂತಾಜನಕ

ಬೆಂಗಳೂರು: ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಸಮೀಪದ ಬೆಟ್ಟಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಈ ಘಟನೆಯಿಂದ ನಾಲ್ವರಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. 75 ವರ್ಷದ ವೆಂಕಟನರಸಪ್ಪ, ಪತ್ನಿ ತಾಯಮ್ಮ ಮತ್ತು ಮಗಳು ಹೊನ್ನಮ್ಮ ಮೃತ ದುರ್ದೈವಿಗಳು. ವಿಷ ಸೇವಿಸಿದ ಮಗ ದೊಡ್ಡೇಗೌಡ ಎಂಬವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ನಗರದ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಕೌಟುಂಬಿಕ ಕಲಹದಿಂದ ತಂದೆ-ತಾಯಿ ಬೆಟ್ಟಹಳ್ಳಿಯ ಮನೆಯಲ್ಲಿ ವಿಷ ಸೇವಿಸಿದ ವಿಚಾರ ತಿಳಿದ ಅಕ್ಕ-ತಮ್ಮ ತಾವರೆಕೆರೆ ಬಳಿ ವಿಷ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ದೊಡ್ಡೇಗೌಡರಿಗೆ ವಿವಾಹವಾಗಿದ್ದು, ಮನೆಯಲ್ಲಿ ಸಣ್ಣ-ಪುಟ್ಟ ಗಲಾಟೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮಾದನಾಯಕನಹಳ್ಳಿ ಹಾಗೂ ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

 

See also  ಯಡಿಯೂರಪ್ಪ ಪದಚ್ಯುತಗೊಳಿಸಿದರೆ ಲಿಂಗಾಯಿತ ಸಮುದಾಯದ ಅವಕೃಪೆ : ಎಂ. ಬಿ. ಪಾಟೀಲ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು