News Kannada
Wednesday, October 05 2022

ಕರ್ನಾಟಕ

ಮೋಜು ಮಸ್ತಿಗೆ ದೇವಾಲಯದ ಹುಂಡಿಗೆ ಕೈ ಹಾಕುತ್ತಿದ್ದ ಖದೀಮನ ಬಂಧನ - 1 min read

Photo Credit :

ಮೋಜು ಮಸ್ತಿಗೆ ದೇವಾಲಯದ ಹುಂಡಿಗೆ ಕೈ ಹಾಕುತ್ತಿದ್ದ ಖದೀಮನ ಬಂಧನ

ಮಂಡ್ಯ: ಮೋಜು ಮಸ್ತಿಗಾಗಿ ದೇವಾಲಯಗಳ ಹುಂಡಿ ಒಡೆದು ಹಣ ಕಳವು ಮಾಡುತ್ತಿದ್ದ ಕಳ್ಳನನ್ನು ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ ನಗದು ಹಣ, ಬೈಕ್, ಬೀಗ ಒಡೆಯಲು ಬಳಸುತ್ತಿದ್ದ ರಾಡ್ ನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ಪೇಟೆ ಪಟ್ಟಣ ನಿವಾಸಿ ಸಮೀವುಲ್ಲಾ ಖಾನ್ ಅವರ ಪುತ್ರ ವಸೀಂ(20) ದೇವಾಲಯಗಳ ಹುಂಡಿಗೆ ಕನ್ನಹಾಕುತ್ತಿದ್ದ ಕಳ್ಳನಾಗಿದ್ದಾನೆ.

ಶೋಕಿಲಾಲನಾಗಿದ್ದ ವಸೀಂ ಹಣಕ್ಕಾಗಿ ರಾತ್ರಿ ಹೊತ್ತು ಗ್ರಾಮಾಂತರ ಪ್ರದೇಶಗಳಲ್ಲಿದ್ದ ದೇಗುಲಗಳ ಹುಂಡಿ ಒಡೆದು ಹಣ ದೋಚುವ ಕೃತ್ಯ ಎಸಗುತ್ತಿದ್ದನು. ಇದುವರೆಗೆ ಹಲವು ದೇವಾಲಯಗಳ ಹುಂಡಿ ಕಳ್ಳತನವಾಗಿತ್ತು. ಆದರೆ ಅಲ್ಲಿ ಯಾವುದೇ ರೀತಿಯ ಸಿಸಿ ಟಿವಿ ಇಲ್ಲದ ಕಾರಣದಿಂದ ಇದುವರೆಗೆ ಸಿಕ್ಕಿಬಿದ್ದಿರಲಿಲ್ಲ. ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು, ನಾಟನಹಳ್ಳಿ, ರಾಯಸಮುದ್ರ, ಹೊಸಹೊಳಲು ಗ್ರಾಮದ ದೇವಸ್ಥಾನದ ಹುಂಡಿಯನ್ನು ಒಡೆದು ಅದರಲ್ಲಿದ್ದ ಕಾಣಿಕೆ ಹಣವನ್ನು ದೋಚಿದ್ದನು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು.

ಆಗಾಗ್ಗೆ ದೇವಾಲಯಗಳಲ್ಲಿ ಕಾಣಿಕೆ ಹುಂಡಿಯನ್ನು ಒಡೆದು ಹಣ ದೋಚುವ ಘಟನೆಗಳು ನಡೆಯುತ್ತಿದ್ದರಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಖದೀಮನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಲೇ ಇದ್ದರು. ಈ ನಡುವೆ ವಸೀಂ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ದೇವಸ್ಥಾನದ ಬಳಿ ಬೈಕ್ನೊಂದಿಗೆ ನಿಂತಿದ್ದನು. ಗಸ್ತು ಪೊಲೀಸರು ಅದೇ ಮಾರ್ಗವಾಗಿ ತೆರಳುತ್ತಿದ್ದಾಗ ಪೊಲೀಸ್ ಜೀಪನ್ನು ಕಂಡು ಬೈಕ್ ನೊಂದಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ತಕ್ಷಣ ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಣೆಗೊಳಪಡಿಸಿದಾಗ ದೇವಸ್ಥಾನದ ಹುಂಡಿಗೆ ಕನ್ನ ಹಾಕುತ್ತಿದ್ದ ವಿಚಾರವನ್ನು ತಿಳಿಸಿದ್ದಾನೆ. ಈತ ನಾಲ್ಕು ದೇವಸ್ಥಾನದಿಂದ ಸುಮಾರು 70 ಸಾವಿರಕ್ಕೂ ಹೆಚ್ಚು ಹಣವನ್ನು ಕಳವು ಮಾಡಿದ್ದಾನೆ ಎನ್ನಲಾಗಿದೆ. ಮೋಜು, ಮಸ್ತಿಗೆ ಬೇಕಾದ ಹಣಕ್ಕಾಗಿ ದೇವಾಲಯ ಹುಂಡಿ ಕದಿಯುವ ಕೃತ್ಯಕ್ಕೆ ಕೈಹಾಕಿದ್ದನು ಎನ್ನಲಾಗಿದೆ.

ಸರ್ಕಲ್ ಇನ್ಸ್ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಎಸ್ಐ ಗಿರೀಶ್ ಕುಮಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

See also  ಕೊನೆಗೂ ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಆರಂಭ: 4.99 ಕೋಟಿ ರೂ. ಯೋಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು