News Kannada
Tuesday, October 04 2022

ಕರ್ನಾಟಕ

ಬೋಪಯ್ಯರಿಗೆ ಯಾಕೆ ಹಾಕಿ ಉಸಾಬರಿ? - 1 min read

Photo Credit :

ಬೋಪಯ್ಯರಿಗೆ ಯಾಕೆ ಹಾಕಿ ಉಸಾಬರಿ?

ಚೆಟ್ಟಳ್ಳಿ; ಬಿದ್ದಾಟಂಡ ಹಾಕಿ ಉತ್ಸವಕ್ಕೆ 40 ಲಕ್ಷ ಬಿಡುಗಡೆಯಾಗಿ ಸರಕಾರ ಕೇವಲ 5 ಲಕ್ಷ ನೀಡಿದೆ ಎನ್ನುವ ಮಾತು ಕೆ. ಜಿ. ಬೋಪಯ್ಯನವರಿಗೆ ಯಾರೋ  ನೀಡಿದ ತಪ್ಪು ಮಾಹಿತಿ ಎಂದು ಎಂಎಲ್ ಸಿ ವೀಣಾ ಅಚ್ಚಯ್ಯ ಹಾಗು ಬಿದ್ದಾಟಂಡ ಹಾಕಿ ಉತ್ಸವದ ಮುಖ್ಯ ಸಂಚಾಲಕರಾದ ಬಿದ್ದಾಟಂಡ ತಮ್ಮಯ ನವರು ಹೇಳಿದ್ದಾರೆ.

20016-17ರ ಮೇ ತಿಂಗಳಲ್ಲಿ ನಾಪೋಕ್ಲುವಿನಲ್ಲಿ ನಡೆದ ಹಾಕಿ ಉತ್ಸವಕ್ಕೆ ವರ್ಷಪ್ರತಿ ನೀಡುವಂತೆ ರೂ 40 ಲಕ್ಷ ಅನುದಾನವನ್ನು ಉಸ್ತುವಾರಿ ಸಚಿವರು ಭರವಸೆ ನೀಡಿದಂತೆ ಮುಖ್ಯಮಂತ್ರಿಗಳ ಸಹಿಯನ್ನು ಅನುದಾನ ಬಿಡುಗಡೆ ಪತ್ರಕ್ಕೆ ಹಾಕಿಸಿ ಆದೇಶ ಹೊರಡಿಸಿ ಯುವ ಸಬಲೀಕರಣ ಕ್ರೀಡಾ ಇಲಾಖೆಗೆ ಕಳುಹಿಸಿ ಕೊಟ್ಟಿರುತ್ತಾರೆ. ಆದರೆ ಬಿದ್ದಾಟಂಡ ಹಾಕಿ ಉತ್ಸವ ಸಮಿತಿಯವರು ಲೆಕ್ಕ ಪರಿಶೋಧನೆಯ ವಿಳಂಬದ ಕಾರಣದಿಂದ ಉಸ್ತುವಾರಿ ಸಚಿವರ ಆದೇಶದಂತೆ ಒಂದು ತಿಂಗಳ ಮೊದಲೇ ಲೆಕ್ಕ ಪತ್ರವನ್ನು ಯುವಜನ ಸಬಲೀಕರಣ ಇಲಾಖೆಗೆ ನೀಡಲು ವಿಫಲರಾದ ಕಾರಣ ಇಲಾಖೆಯು ಮೊದಲ ಹಂತವಾಗಿ ಐದು ಲಕ್ಷ ಹಣವನ್ನು ಬಿಡುಗಡೆ ಮಾಡಿತ್ತು ಎಂದರು.

ಆದರೆ ಬಿದ್ದಾಟಂಡ ಹಾಕಿ ಸಮಿತಿಯವರು ಪೂರ್ತಿ ಲೆಕ್ಕಪತ್ರವನ್ನು ನೀಡಿಯೇ 40 ಲಕ್ಷ ಹಣವನ್ನು ಪಡೆದುಕೊಳ್ಳುವುದಾಗಿ ತಮ್ಮಯ್ಯನವರು ವಿವರಿಸಿದರು.

ಬಳಿಕ ವೀಣಾ ಅಚ್ಚಯ್ಯನವರು ಮಾತನಾಡಿ, ಶಾಂತೇ ಯಂಡ ಹಾಕಿ ನಮ್ಮೆಗೆ 40 ಲಕ್ಷ ಅನುದಾನ ನೀಡುವಂತೆ ಸಲ್ಲಿಸಿದ ಪ್ರಸ್ತಾವನೆಗೆ ಮಾನ್ಯ ಮುಖ್ಯ ಮಂತ್ರಿಯವರು 40 ಲಕ್ಷವನ್ನೇ ಬಿಡುಗಡೆ ಮಾಡಿರುತ್ತಾರೆ. ಕಳೆದು ಹೋದ ಹಾಕಿ ಉತ್ಸವದ ಬಗ್ಗೆ ಮಾತನಾಡಲು ಇವರಿಗೆ ಅದಿಕಾರ ಕೊಟ್ಟವರು ಯಾರು, ಹಾಕಿ ನಮ್ಮೆಗೆ ಉಸಾಬರಿ ಬೋಪಯ್ಯನಿಗೇಕೆ ಎಂದು ಕಿಡಿಕಾರಿದರು.

ದಯವಿಟ್ಟು ರಾಜಕೀಯ ರಹಿತವಾಗಿ ನಡೆಯುವ ಹಾಕಿ ನಮ್ಮೆಗೆ ರಾಜಕೀಯ ಬೆರೆಸಿ ಚುನಾವಣೆಗೆ ಸ್ಪರ್ದಿಸುವುದು ಬೇಡ ಎಂದರು.

See also  ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ ನೀರಿಲ್ಲದೆ ಒಣಗಿದ ಭತ್ತದಗದ್ದೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು