News Kannada
Monday, October 03 2022

ಕರ್ನಾಟಕ

ಚಿಕ್ಕಮಗಳೂರಿನಲ್ಲಿ ಇಟ್ಟಿಗಾಗಿ ಇಬ್ಬರ ನಡುವೆ ಆರಂಭವಾದ ಜಗಳ ಒಬ್ಬನ ಸಾವಿನಲ್ಲಿ ಅಂತ್ಯ - 1 min read

Photo Credit :

ಚಿಕ್ಕಮಗಳೂರಿನಲ್ಲಿ ಇಟ್ಟಿಗಾಗಿ ಇಬ್ಬರ ನಡುವೆ ಆರಂಭವಾದ ಜಗಳ ಒಬ್ಬನ ಸಾವಿನಲ್ಲಿ ಅಂತ್ಯ

ಚಿಕ್ಕಮಗಳೂರು: ಹೆಣ್ಣಿಗಾಗಿ ಕೊಲೆಯಾಗಿದೆ, ಹಣಕ್ಕಾಗಿಯೂ ಹತ್ಯೆಯಾಗಿದೆ. ಆದ್ರೆ, ಇಟ್ಟಿಗೆಗಾಗಿ ಕೊಲೆ ನಡೆದಿರೋ ಉದಾಹರಣೆ ಇರ್ಲಿಲ್ಲ ಅನ್ಸತ್ತೆ. ಆದ್ರೀಗ, ಅದೂ ನಡೆದು ಹೋಗಿದೆ.

ಇಟ್ಟಿಗೆಗಾಗಿ ಆರಂಭವಾದ ಇಬ್ಬರ ನಡುವಿನ ಮನಃಸ್ತಾಪ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದವ ಸಗನ ಶೆಟ್ಟಿ. ಚಿಕ್ಕಮಗಳೂರು ತಾಲೂಕಿನ ದಂಬದಹಳ್ಳಿ ನಿವಾಸಿ. ಈತ ಅದೇ ಗ್ರಾಮದ ಕರುಣಾಕರ್ ಶೆಟ್ಟಿ ಎಂಬಾತನಿಗೆ ತನ್ನ ಜಮೀನನನ್ನ ವರ್ಷಕ್ಕೆ ಇಷ್ಟೆಂದು ಇಟ್ಟಿಗೆ ಫ್ಯಾಕ್ಟರಿಗೆಂದು ಗುತ್ತಿಗೆ ನೀಡಿದ್ದ. ಗುತ್ತಿಗೆ ಪಡೆದಿದ್ದ ಕರುಣಾಕರ್ ಶೆಟ್ಟಿ ಸಗನಶೆಟ್ಟಿಗೆ ಈ ವರ್ಷದ ಹಣ ನೀಡಬೇಕಿತ್ತು. ಆ ಬಗ್ಗೆ ಇಬ್ಬರ ನಡುವೆ ಹಲವು ಬಾರಿ ಮಾತಿನ ಚಕಮಕಿ ನಡೆದು, ಇಂದು ಬೆಳಗ್ಗೆ ಜಗಳವಾಗಿತ್ತು.

ಯಾವಾಗ ಕರುಣಾಕರ್ ಶೆಟ್ಟಿ ಹಣ ನೀಡಲು ಹಿಂದೇಟು ಹಾಕುದ್ರೋ ಆಗ ಸಗನ ಶೆಟ್ಟಿ ನನಗೂ ಇಟ್ಟಿಗೆ ಬೇಕು ತುಂಬಿಕೊಂಡು ಹೋಗುತ್ತೇನೆಂದು ಇಟ್ಟಿಗೆ ಫ್ಯಾಕ್ಟರಿ ಬಳಿ ಕೂಗಾಡಿದ್ರು. ಇದಾದ ಎರಡೇ ಗಂಟೆಗೆ ಇಟ್ಟಿಗೆ ಫ್ಯಾಕ್ಟರಿಯಿಂದ ತುಸು ದೂರದಲ್ಲಿ ಸಗನಶೆಟ್ಟಿ ಮೃತದೇಹ ಬಿದ್ದಿದ್ದು, ಮೃತದೇಹದ ಪಕ್ಕದಲ್ಲಿ ದೊಣ್ಣೆ ಹಾಗೂ ಖಾರದ ಪುಡಿ ಕವರ್ ಸಿಕ್ಕಿದ್ದು ಇವನ್ನ ತಂದವರು ಯಾರು ಅನ್ನೋದು ಮಾತ್ರ ನಿಗೂಢವಾಗಿದೆ.ಬೆಳಗ್ಗೆ ಜಗಳ ನಡೆದ ಕೂಡಲೇ ಕರುಣಾಕರ್ ಶೆಟ್ಟಿ ಹಾಗೂ ಸಗನಶೆಟ್ಟಿ ಪ್ರಮಾಣ ಮಾಡಲು ದೇವಾಲಯಕ್ಕೆ ಹೋಗಿದ್ದಾರೆ.

ಆದ್ರೆ, ಅಲ್ಲಿಗೆ ಕರುಣಾಕರ್ ಶೆಟ್ಟಿ ಬಂದಿಲ್ಲ. ಇದೆಲ್ಲಾ ಮೃತ ಕರುಣಾಕರ್ ಶೆಟ್ಟಿ ಮಗ ವಿಜಯ್ ಕುಮಾರ್ ಕಣ್ಣೆದುರೇ ನಡೆದದ್ದು. ಅಲ್ಲಿಂದ ಮನೆಗೆ ಬಂದ ಸಗನಶೆಟ್ಟಿ ಪುನಃ ಜಮೀನಿನ ಬಳಿ ಹೋದಾಗ ಈ ದುರ್ಘಟನೆ ಸಂಭವಿಸಿದೆ.

ಸಗನಶೆಟ್ಟಿಯ ಒಂದೊಂದು ಶೂ ಒಂದೊಂದೆಡೆ ಬಿದ್ದಿರೋದ್ನ ನೋಡುದ್ರೆ ಬಹುಶಃ ಕರುಣಾಕರ್ ಶೆಟ್ಟಿ ಇವರ ಕಣ್ಣಿಗೆ ಖಾರದ ಪುಡಿ ಹಾಕಿ ಅಟ್ಟಾಡಿಸಿಕೊಂಡು ಹೊಡೆದಿದು ಕೊಂದಿದ್ದಾರೆಂದು ಕಂಡು ಬರ್ತಿದೆ. ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡ್ತಿದ್ದವರು ಬಿಡಿಸಲು ಬಂದಾಗ ಕರುಣಾಕರ್ ಶೆಟ್ಟಿ ಅವರಿಗೂ ಎದುರಿಸಿ ಕಳಿಸಿದ್ರಂತೆ.

ಆದ್ರೆ, ಬೆಳಗ್ಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಕರುಣಾಕರ್ ಶೆಟ್ಟಿ ನಾಪತ್ತೆಯಾಗಿದ್ದಾನೆ. ಆತ ಸಿಕ್ಕ ಮೇಲೆ ಸ್ಪಷ್ಟವಾದ ಕಾರಣ ತಿಳಿಯಲಿದೆ ಅಂತಾರೆ ಎಸ್ಪಿ ಅಣ್ಣಾಮಲೈ.ಒಟ್ಟಾರೆಯಾಗಿ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ್ರಿಂದ ಇಟ್ಟಿಗಾಗಿ ಕೊಲೆಯೊಂದು ನಡೆದು ಹೋಗಿದೆ.

 

See also  ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು-ಸಿಎಂ ಬಸವರಾಜ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

179
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು