News Kannada
Wednesday, October 05 2022

ಕರ್ನಾಟಕ

ಸ್ವಚ್ಛತಾ ಸಿಬ್ಬಂದಿಗಳಿಗೆ ಸಂಬಳದಲ್ಲಿ ವಂಚನೆ: ಸಿಐಟಿಯು - 1 min read

Photo Credit :

ಸ್ವಚ್ಛತಾ ಸಿಬ್ಬಂದಿಗಳಿಗೆ ಸಂಬಳದಲ್ಲಿ ವಂಚನೆ: ಸಿಐಟಿಯು

ಮಡಿಕೇರಿ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನವನ್ನು ನೀಡದೆ ಗುತ್ತಿಗೆದಾರರು ವಂಚಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಿಐಟಿಯು ಸಂಯೋಜಿತ ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳ ಸಂಘ, ಕಾರ್ಮಿಕ ಕಾನೂನು ಉಲ್ಲಂಘನೆಯ ಆರೋಪದಡಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಪಿ.ಆರ್.ಭರತ್, ಮುಂದಿನ 10 ದಿನಗಳ ಒಳಗೆ ಕಡಿತಗೊಳಿಸಿರುವ ವೇತನವನ್ನು ಭರ್ತಿ ಮಾಡಿ, ಸ್ವಚ್ಛತಾ ಸಿಬ್ಬಂದಿಗಳಿಗೆ ನೀಡದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳ ಸಮೂಹವನ್ನು ಎರಡು ಭಾಗವಾಗಿ ವಿಭಾಗಿಸಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಒಟ್ಟು 33 ಸಿಬ್ಬಂದಿಗಳಲ್ಲಿ 10 ಮಂದಿಯನ್ನು ಸಫಾಯಿ ಕರ್ಮಚಾರಿಗಳಾಗಿಯು, ಉಳಿದ 23 ಮಂದಿಯನ್ನು ಆಸ್ಪತ್ರೆಯ ಉಳಿದ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ. 10 ಕರ್ಮಚಾರಿಗಳಿಗೆ ಮಾಸಿಕ ವೇತನ 10 ಸಾವಿರ ರೂ. ಹಾಗೂ 23 ಸಿಬ್ಬಂದಿಗಳಿಗೆ ತಲಾ 9 ಸಾವಿರ ರೂ.ಗಳಂತೆ ವೇತನ ನೀಡುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದರು. ಆದರೆ ಪ್ರಸ್ತುತ ತಿಂಗಳು ವೇತನ ನೀಡುವ ಸಂದರ್ಭ ಕರ್ಮಚಾರಿಗಳಿಗೆ ಕನಿಷ್ಠ ವೇತನ 10 ಸಾವಿರ ರೂ. ನೀಡಿದ್ದು, ಉಳಿದ 23 ಸಿಬ್ಬಂದಿಗಳಿಗೆ ಕೇವಲ 7 ಸಾವಿರ ರೂ.ಗಳಂತೆ ವೇತನ ಪಾವತಿಸಲಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ ವರ್ಷ ಡಿ ಗ್ರೂಪ್ ನೌಕರರಾಗಿ 61 ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇವರ ವೇತನಕ್ಕೂ ಕತ್ತರಿ ಹಾಕಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ಬಯಸಿದಾಗ ಸಿಬ್ಬಂದಿ ಕೆಲಸಕ್ಕೆ ನೇಮಕಗೊಳ್ಳುವ ಸಂದರ್ಭ ಮುಂಗಡವಾಗಿ ಗುತ್ತಿಗೆದಾರನಿಗೆ 10 ಸಾವಿರ ರೂ.ನೀಡುವ ನಿಯಮ ಕಾನೂನಿಗೆ ವಿರುದ್ಧವಾಗಿ ರೂಪಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಮುಂಗಡ ಹಣ ನೀಡದ ಕಾರ್ಮಿಕರಿಂದ ಹಣವನ್ನು ಭರ್ತಿ ಮಾಡುವುದಕ್ಕಾಗಿ ವೇತನದಿಂದ ಕಡಿತಗೊಳಿಸಲಾಗುತ್ತಿದೆ. ಅಲ್ಲದೆ, ಕೆಲಸ ಬೇಕಾದರೆ ಭಾನುವಾರ ರಜೆ ನೀಡುವುದಿಲ್ಲವೆಂದು ತಿಳಿಸಿ ವಾರದ ರಜೆ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು.

See also  ತಿ ನರಸೀಪುರದಲ್ಲಿ ನಿತ್ಯ ಅರ್ಧ ದಿನ ಸ್ವಯಂ ಪ್ರೇರಿತ ಲಾಕ್‌ ಡೌನ್‌ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು