News Kannada
Friday, September 30 2022

ಕರ್ನಾಟಕ

ಸೊಪ್ಪು ಕೀಳುವ ವಿಚಾರಕ್ಕ ಮಾರಾಮಾರಿ: 6 ಮಂದಿಗೆ ಗಾಯ - 1 min read

Photo Credit :

ಸೊಪ್ಪು ಕೀಳುವ ವಿಚಾರಕ್ಕ  ಮಾರಾಮಾರಿ: 6 ಮಂದಿಗೆ ಗಾಯ

ಚಾಮರಾಜನಗರ: ಸೊಪ್ಪು ಕೀಳುವ ವಿಚಾರಕ್ಕೆ ಆರಂಭವಾದ ಜಗಳ ಮಾರಾಮಾರಿಯಲ್ಲಿ ಅಂತ್ಯವಾಗಿದ್ದು ಪರಿಣಾಮ ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ನಡೆದಿದೆ.

ಮೇಕೆ ಮರಿಗಳಿಗೆ ಬೇವಿನಮರದಲ್ಲಿ ಸೊಪ್ಪು ಕೀಳುವ ವಿಚಾರವಾಗಿ ಕುಳ್ಳ ಸಿದ್ದಯ್ಯನ ಕುಟುಂಬ ಮತ್ತು ಕಾಂತರಾಜು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದೆ ಪರಿಣಾಮ ಎರಡು ಕುಟುಂಬಗಳ ಸದಸ್ಯರು ಕಲ್ಲು ಹಾಗೂ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ.

ಇದರಿಂದ ಕುಳ್ಳ ಸಿದ್ದಯ್ಯನ ಕುಟುಂಬದ ಸಿದ್ದರಾಜಮ್ಮ, ಅರುಣ್, ಸಿದ್ದರಾಜು ಅವರಿಗೆ ಗಾಯವಾದರೆ ಕಾಂತರಾಜು ಕುಟುಂಬದ ಮೂವರಿಗೂ ಗಂಭೀರವಾಗಿ ಗಾಯವಾಗಿದೆ. ಗಾಯಾಳುಗಳು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ದೂರುಗಳು ದಾಖಲಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಎರಡು ಕಡೆಯ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ಫೋನ್ ಕದ್ದಾಲಿಕೆ ಪ್ರಕರಣ: ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು