News Kannada
Friday, October 07 2022

ಕರ್ನಾಟಕ

ಚಾಮರಾಜೇಶ್ವರ ರಥ ನಿರ್ಮಾಣದಲ್ಲಿ ವಿಳಂಬ: ವಾಟಾಳ್ ಕಿಡಿ - 1 min read

Photo Credit :

ಚಾಮರಾಜೇಶ್ವರ ರಥ ನಿರ್ಮಾಣದಲ್ಲಿ ವಿಳಂಬ: ವಾಟಾಳ್ ಕಿಡಿ

ಚಾಮರಾಜನಗರ: ನಗರದ ಪ್ರಸಿದ್ಧವಾದ ಶ್ರೀ ಚಾಮರಾಜೇಶ್ವರ ರಥ ಬೆಂಕಿಗೆ ಸಿಲುಕಿ ಒಂದು ವರ್ಷ ಕಳೆದರೂ ನೂತನ ರಥ ನಿರ್ಮಾಣದತ್ತ ಆಸಕ್ತಿ ತೋರದ ಜಿಲ್ಲಾಡಳಿತದ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದ ಮುಂಭಾಗ ಬೆಂಕಿ ಬಿದ್ದು ಭಿನ್ನವಾಗಿರುವ ಶ್ರೀ ಚಾಮರಾಜ್ವೇಶ್ವರ ರಥವನ್ನು ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು ಪ್ರತಿ ವರ್ಷ ಆಷಾಢ ಮಾಸದಲ್ಲಿ ನಡೆಯುವ ಶ್ರೀಚಾಮರಾಜೇಶ್ವರ ರಥೋತ್ಸವ ನಿಂತು ಹೋಗಿದೆ. ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದು, ಇನ್ನೂ 15 ದಿನಗಳೊಳಗಾಗಿ ನೂತನ ರಥನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡದಿದ್ದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಚಿಕ್ಕಂಗಡಿಬೀದಿ, ದೊಡ್ಡಂಗಡಿ ಬೀದಿ, ಜೋಡಿರಸ್ತೆ. ಬೈಪಾಸ್ ರಸ್ತೆ ಸೇರಿದಂತೆ ಇನ್ನೂ ಅನೇಕ ಕಡೆ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಕಟ್ಟಡ ಮಾಲೀಕರಿಗೆ ತೊಂದರೆ ಕೊಡದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂತರ ಕಟ್ಟಡ ಕೆಡುವುದಕ್ಕೆ ಹೋಗ ಬೇಕಾಗಿತ್ತು. ಅದು ಯಾವುದು ಮಾಡದೇ ಅಧಿಕಾರಿಗಳು ಕಟ್ಟಡ ಮಾಲೀಕರಿಗೆ ಜೆಸಿಬಿ ಯಂತ್ರ ತಂದು ಅಂಗಡಿಗಳ ಮುಂದೆ ನಿಲ್ಲಿಸಿ ದೌರ್ಜನ್ಯ ಎಸಗಿ ಹೆದರಿಸಿ ಭಯಪಡಿಸಿ ತೊಂದರೆ ನೀಡಿದ್ದಾರೆ ಎಂದು ದೂರಿದರು.

ಬೆಳಗಾವಿಯಲ್ಲಿರುವ ಸುವರ್ಣಸೌಧವನ್ನು ಸುಮಾರು 500ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಮಾಡಿರುವ ಉದ್ದೇಶ ಉತ್ತರಕರ್ನಾಟಕ-ಹೈದರಬಾದ್ ಭಾಗದ ಜನತೆಗೆ ಅನುಕೂಲ ಮಾಡುವ ಉದ್ದೇಶದಿಂದ ಸುವರ್ಣಸೌಧ ನಿರ್ಮಾಣವಾಗಿದೆ.

ಈ ಸ್ಥಳದಲ್ಲಿ 1 ವರ್ಷದಲ್ಲಿ ಒಂದು ಸಲ ಅಧೀವೇಶನ ನಡೆಯುತ್ತದೆ ಇನ್ನುಳಿದ ದಿನಗಳಲ್ಲಿ ಅಧಿಕಾರಿಗಳಾಗಲೀ ಅಥವಾ ಜನಪ್ರತಿನಿಧಿಗಳಾಗಲಿ ಇರುವುದಿಲ್ಲ. ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಸಂಪೂರ್ಣ ವಿಫಲವಾಗಿದೆ. ಬೆರಳು ಎಣಿಕೆ ಶಾಸಕರು ಮಾತ್ರ ಕಲಾಪದಲ್ಲಿ ಭಾಗವಹಿಸಿದ್ದಾರೆ ಇನ್ನುಳಿದ ಶಾಸಕರು ಎಲ್ಲಿ ಹೋದರು ಎಂದು ವಾಟಾಳ್ ಗುಡುಗಿದರು.

 

See also  ಅತ್ಯಾಚಾರ ಪ್ರಕರಣ: ಬಂಟ್ವಾಳದ ಇಬ್ಬರು ಕಾಸರಗೋಡಿನಲ್ಲಿ ಸೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು