News Kannada
Monday, September 26 2022

ಕರ್ನಾಟಕ

ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತನೊಬ್ಬನ 1ಲಕ್ಷ ಹಣ ಕಳವು - 1 min read

Photo Credit :

ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತನೊಬ್ಬನ 1ಲಕ್ಷ ಹಣ ಕಳವು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪರಿವರ್ತನಾ ರ್ಯಾಲಿಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಜೇಬಿನಿಂದ ಒಂದು ಲಕ್ಷ ರೂ. ಕದ್ದ ಘಟನೆ ಸಂಭವಿಸಿದೆ.

ಪರಿವರ್ತನಾ ರ್ಯಾಲಿಯ ಸಂದರ್ಭದಲ್ಲಿ ಮುಂಡಗೋಡ ತಾಲೂಕಿನ ಮಳವಳ್ಳಿ ಎನ್ನುವಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಂಜುನಾಥ ಎನ್ನುವವರ ಬಳಿ ಜೋಳ ಮಾರಿ ತಂದ ಒಂದು ಲಕ್ಷ ರೂ. ಜೇಬಿನಲ್ಲಿತ್ತು.

ಇದೇ ಸಂದರ್ಭದಲ್ಲಿ ಮಂಜುನಾಥ ಯಡಿಯೂರಪ್ಪ ಅವರ ಫೋಟೊ ಮೊಬೈಲ್ ಮೂಲಕ ತೆಗೆಯುವಾಗ ಕಳ್ಳರು ಕೈ ಚಳಕದಿಂದ ಕಳುವು ಮಾಡಿದ್ದಾರೆ.

ಕಷ್ಟದ ಹಣ ಕಳೆದುಕೊಂಡ ಮಂಜುನಾಥ ಜೋರಾಗಿ ಅಳುತ್ತಾ ಸಮಾವೇಶ ನಡೆಯುತ್ತಿರುವ ಸ್ಥಳಕ್ಕೆ ಬಂದು ಘಟನೆ ಬಗ್ಗೆ ಹೇಳಿಕೊಂಡಿದ್ದಾನೆ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

See also  ತಹಶೀಲ್ದಾರ್ ಮೇಲೆ ಹಲ್ಲೆ ಆರೋಪ : ಇಬ್ಬರು ಮಹಿಳೆಯರೂ ಸೇರಿ 15 ಮಂದಿಯ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು