News Kannada
Monday, October 03 2022

ಕರ್ನಾಟಕ

ನೀವು ತಿನ್ನೋ ಐಸ್ ಕ್ರೀಂ ತಯಾರಾಗೋದು ಇಲ್ಲೇ…! - 1 min read

Photo Credit :

ನೀವು ತಿನ್ನೋ ಐಸ್ ಕ್ರೀಂ ತಯಾರಾಗೋದು ಇಲ್ಲೇ...!

ಕಾಸರಗೋಡು: ನಮ್ಮ ಮನೆ ಬಾಗಿಲು, ಶಾಲಾ ಕಾಲೇಜು ಪರಿಸರ, ಸಂತೆ, ಉತ್ಸವದ ಸ್ಥಳಗಳಲ್ಲಿ ಹಾಗೂ ಬೀದಿ ಬೀದಿ ಗಳಲ್ಲಿ ಸೈಕಲ್ ಮತ್ತು ತಳ್ಳುಗಾಡಿಗಳ ಮೂಲಕ ತಲಪುವ ಐಸ್ ಕ್ರೀಮ್ ಖರೀದಿಸಲು ಮುಗಿ ಬೀಳುವವರೇ ಹೆಚ್ಚು. ಆದರೆ ಇದು ತಯಾರಿಕೆಗೆ ಎಷ್ಟರ ಮಟ್ಟಿಗೆ ಸ್ಬಚ್ಛತೆ ಹಾಗೂ ಅದರ ಸೇವನೆಯಿಂದ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಗಮನ ನೀಡುತ್ತಿಲ್ಲ.

ಬಹುತೇಕ ಹೊರರಾಜ್ಯದ ಮಾರಾಟಗಾರರು ಐಸ್ ಕ್ರೀಮ್ ಮಾರಾಟ ಮಾಡುತ್ತಿದ್ದು, ಈ ಐಸ್‍ಕ್ರೀಮ್‍ಗಳಿಗೆ ಬೇಡಿಕೆದಾರರು ಹೆಚ್ಚು. ಹಳ್ಳಿಗಳಲ್ಲಿ ಇದಕ್ಕಾಗಿಯೇ ಕಾದು ನಿಲ್ಲುವ ಮಕ್ಕಳ ಗುಂಪೇ ಇರುತ್ತದೆ. ಆದರೆ ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುವ ಇಂತಹ ಐಸ್‍ಕ್ರೀಂನ್ನು ತಯಾರಿಸುವ ಹೆಚ್ಚಿನ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲ. ಅನ್ಯರಾಜ್ಯ ಕಾರ್ಮಿಕರು ವಾಸವಿರುವ ಕ್ವಾರ್ಟರ್ಸ್‍ಗಳನ್ನು ಕೇಂದ್ರೀಕರಿಸಿ ಈ ಐಸ್‍ಕ್ರೀಂನ್ನು ತಯಾರಿಸಲಾಗುತ್ತಿದೆ. ನೀಲೇಶ್ವರ ನಗರಸಭೆಯ ಕಡಿಞಮೂಲೆ ಸಮೀಪದ ಕ್ವಾರ್ಟರ್ಸ್‍ನಲ್ಲಿಯೂ ಸ್ವಚ್ಛತೆಯಿಲ್ಲದ ಸ್ಥಳದಲ್ಲಿ ಐಸ್‍ಕ್ರೀಂ ತಯಾರಿಸಲಾಗುತ್ತಿದೆ.

ಸ್ವಚ್ಛತೆಯಿಲ್ಲದ ಸ್ಥಳದಲ್ಲಿ ಐಸ್‍ಕ್ರೀಂ ತಯಾರಿಸಲಿರುವ ಸಾಮಗ್ರಿಗಳನ್ನು ದಾಸ್ತಾನಿಡಲಾಗುತ್ತಿದೆ. ಮೀನು ಹಾಳಾಗದಿರಲು ಉಪಯೋಗಿಸುವ ಅಮೋನಿಯಂ ಬೆರೆಸಿದ ಐಸ್‍ನ್ನು ಈ ಐಸ್‍ಕ್ರೀಂ ತಯಾರಿಸಲು ಉಪಯೋಗಿಸಲಾಗುತ್ತಿದೆ.

ಐಸ್‍ಕ್ರೀಂ ತಯಾರಿಸುವ ಯಂತ್ರ ತುಕ್ಕುಹಿಡಿದ ಸ್ಥಿತಿಯಲ್ಲಿದೆ. ಐಸ್‍ಕ್ರೀಂ ತಯಾರಿಸಲಿರುವ ಎಸೆನ್ಸ್ ಗಳು ಗುಣಮಟ್ಟ ಇಲ್ಲದವುಗಳಾಗಿವೆ. ಶುದ್ಧೀಕರಿಸದ ಕೊಳವೆಬಾವಿಯ ನೀರನ್ನು ಐಸ್‍ಕ್ರೀಂ ತಯಾರಿಗೆ ಉಪಯೋಗಿಸಲಾಗುತ್ತಿದೆ. ಇದರ ಸಮೀಪದಲ್ಲೇ ಹಲವಾರು ಮಂದಿ ಉಪಯೋಗಿಸುವ ಶೌಚಾಲಯವಿದೆ. ಕ್ವಾರ್ಟರ್ಸ್‍ನ ಕೊಠಡಿಗಳಲ್ಲಿ ಹೆಚ್ಚಿನವುಗಳಿಗೆ ಬಾಗಿಲುಗಳಿಲ್ಲ. ನಗರಸಭೆಯ ಪರವಾನಗಿ ಕೂಡಾ ಇಲ್ಲದೆ ಐಸ್‍ಕ್ರೀಂ ತಯಾರಿ ಘಟಕ ಕಾರ್ಯಾಚರಿಸುತ್ತಿದೆ.

ನಗರಸಭಾ ಆರೋಗ್ಯ ಅಧಿಕಾರಿಗಳು ಈ ಹಿಂದೆಯೇ ಮುನ್ನೆಚ್ಚರಿಕೆ ನೀಡಿದ್ದರೂ ಅದನ್ನು ಅವಗಣಿಸಿ ಐಸ್‍ಕ್ರೀಂ ತಯಾರಿ ಮುಂದುವರಿಸುತ್ತಿದ್ದಾರೆ. ಈ ರೀತಿ ತಯಾರಿಸುವ ಐಸ್‍ಕ್ರೀಂ ಕಾಲರಾ ಮೊದಲಾದ ರೋಗಗಳು ಹರಡಲು ಕಾರಣವಾಗಲಿದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಕರಾವಳಿ ಪ್ರದೇಶಗಳಲ್ಲಿ ಹೊರರಾಜ್ಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಕ್ವಾರ್ಟರ್ಸ್‍ಗಳನ್ನು ಕೇಂದ್ರೀಕರಿಸಿ ಇಂತಹ ಐಸ್‍ಕ್ರೀಂ ತಯಾರಿ ಘಟಕಗಳಲ್ಲಿ ಹೆಚ್ಚಿನವು ಕಾರ್ಯಾಚರಿಸುತ್ತಿವೆ. ಈ ಕೊಠಡಿಗಳಿಗೆ ಬಾಗಿಲುಗಳಿಲ್ಲ. ಇದ್ದವುಗಳೂ ಹಾನಿಗೀಡಾಗಿವೆ. ಐಸ್‍ಕ್ರೀಂ ಉತ್ಪಾದನೆಗೆ ಸ್ಥಳೀಯಾಡಳಿತ ಸಂಸ್ಥೆಯಿಂದ ಲೈಸೆನ್ಸ್ ಕೂಡಾ ಇಲ್ಲದೆ ಇವುಗಳಲ್ಲಿ ಹೆಚ್ಚಿನ ಐಸ್‍ಕ್ರೀಂ ತಯಾರಿ ಘಟಕಗಳು ಕಾರ್ಯಾಚರಿಸುತ್ತಿವೆ.

ನೀಲೇಶ್ವರ ಕಡಿಞಮೂಲೆಯ ಶಾಲಾ ಸಮೀಪದ ಕ್ವಾರ್ಟರ್ಸ್‍ನಲ್ಲಿ ಕಾರ್ಯಾಚರಿಸುತ್ತಿರುವ ಇಂತಹ ಐಸ್‍ಕ್ರೀಂ ತಯಾರಿ ಕೇಂದ್ರವನ್ನು ನೀಲೇಶ್ವರ ನಗರಸಭೆಯ ಆರೋಗ್ಯ ವಿಭಾಗ ತಪಾಸಣೆ ನಡೆಸಿತು. ಐಸ್‍ಕ್ರೀಂ ತಯಾರಿಗಿರುವ ಸಾಮಗ್ರಿಗಳನ್ನು ಸ್ವಚ್ಛತೆ ಇಲ್ಲದ ಸ್ಥಳದಲ್ಲಿ ದಾಸ್ತಾನಿಡುವುದಾಗಿ ನಗರಸಭಾ ಆರೋಗ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಸ್ವಚ್ಛತೆಯಿಲ್ಲದ ಕ್ವಾರ್ಟರ್ಸ್‍ಗಳನ್ನು ಕೇಂದ್ರೀಕರಿಸಿ ಐಸ್‍ಕ್ರೀಂ ಉತ್ಪಾದಿಸಿ ದ್ವಿಚಕ್ರವಾಹನಗಳು-ಸೈಕಲ್, ತಳ್ಳುಗಾಡಿಗಳಲ್ಲಿ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಇಂತಹ ನಿರ್ಮಾಣ ಕೇಂದ್ರಗಳ ವಿರುದ್ಧ ನಗರಸಭೆಯ ಆರೋಗ್ಯ ವಿಭಾಗ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ನೀಲೇಶ್ವರ ನಗರಸಭಾಧ್ಯಕ್ಷ . ಕೆ.ಪಿ.ಜಯರಾಜನ್ ತಿಳಿಸಿದ್ದಾರೆ.

See also  ಏಕರೂಪದ ಶಿಕ್ಷಣ ಜಾರಿಗೆ ಅಣ್ಣ ಹಜಾರೆಯನ್ನು ಭೇಟಿಯಾದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು