News Kannada
Friday, October 07 2022

ಕರ್ನಾಟಕ

ಸಕಲೇಶಪುರದಲ್ಲಿ ಕಾಫಿ ಬೆಳೆಗಾರರ ಸಭೆ: ಕಲಬೆರಕೆ ಕಾಳುಮೆಣಸು ವ್ಯವಹಾರ ತಡೆಗೆ ಬೆಳೆಗಾರರ ಆಗ್ರಹ - 1 min read

Photo Credit :

ಸಕಲೇಶಪುರದಲ್ಲಿ ಕಾಫಿ ಬೆಳೆಗಾರರ ಸಭೆ: ಕಲಬೆರಕೆ ಕಾಳುಮೆಣಸು ವ್ಯವಹಾರ ತಡೆಗೆ ಬೆಳೆಗಾರರ ಆಗ್ರಹ

ಮಡಿಕೇರಿ: ಭಾರತಕ್ಕೆ ವಿದೇಶಗಳಿಂದ ಕರಿಮೆಣಸು ಆಮದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಬೆಳೆಗಾರ ಸಂಘಟನೆಗಳ ನಿಯೋಗ ನ.23 ರಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿವೆ.

ಕರಿಮೆಣಸನ್ನು ನಿಯಮ ಬಾಹಿರವಾಗಿ ಆಮದು ಮಾಡಿಕೊಂಡು ಭಾರತೀಯ ಕರಿಮೆಣಸಿನೊಂದಿಗೆ ಮಿಶ್ರಣ ಮಾಡುವ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಬೇಕೆಂದು ಬೆಳೆಗಾರ ಸಂಘಟನೆಗಳು ಒಮ್ಮತದಿಂದ ಒತ್ತಾಯಿಸಿದೆ.

ಸಕಲೇಶಪುರದಲ್ಲಿನ ಕಾಫಿ ಬೆಳೆಗಾರರ ಸಂಘದ ಕಛೇರಿ ಸಭಾಂಗಣದಲ್ಲಿ ಮಂಗಳವಾರ ಮಹತ್ವದ ಸಭೆ ನಡೆಸಿದ ಹಲವಾರು ಬೆಳೆಗಾರ ಸಂಘಟನೆಗಳ ಪ್ರಮುಖರು, ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರ ಬಳಿ ನ.23 ರಂದು ಗುರುವಾರ ನಿಯೋಗ ತೆರಳಿ, ವಿದೇಶಗಳಿಂದ ಕರಿಮೆಣಸು ಆಮದಿನಿಂದ ಭಾರತೀಯ ಕರಿಮೆಣಸು ಉದ್ಯಮದ ಮೇಲೆ ಉಂಟಾಗುತ್ತಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೂಲಂಕುಶವಾಗಿ ತಿಳಿಸಲು ತೀಮರ್ಾನಿಸಿದವು.

ಈ ಕೂಡಲೇ ಕೇಂದ್ರ ಸರ್ಕಾರ ಕರಿಮೆಣಸು ಆಮದನ್ನು ನಿಲ್ಲಿಸಬೇಕು. ಸಂಬಾರ ಮಂಡಳಿಯು ಮರು ಆಮದುಗೊಳ್ಳುವ ಕರಿಮೆಣಸಿಗೆ ಸರ್ಟಿಫಿಕೇಟ್ ನೀಡುವುದನ್ನು ಸ್ಥಗಿತಗೊಳಿಸಬೇಕು. ಕೇಂದ್ರ ವಾಣಿಜ್ಯ ಸಚಿವಾಲಯಲು ಆಮದುಗೊಳ್ಳುವ ಕರಿಮೆಣಸಿಗೆ ಅಡಕೆ ಮತ್ತು ಏಲಕ್ಕಿ ಮಾದರಿಯಂತೆ ಟನ್ ಒಂದಕ್ಕೆ 8 ಸಾವಿರ ಡಾಲರ್ ಕನಿಷ್ಟ ಆಮದು ಶುಲ್ಕವನ್ನು ವಿಧಿಸಬೇಕು. ಆಮದುಗೊಳ್ಳುವ ವಾಣಿಜ್ಯ ಬೆಳೆಗಳ ಮೇಲೆ ಅವು ಯಾವ ದೇಶದಲ್ಲಿ ಬೆಳೆಸಲ್ಪಟ್ಟವು ಎಂಬುದನ್ನು ನಮೂದಿಸುವ ನಿಯಮ ಜಾರಿಗೊಳಿಸಬೇಕು. ರಬ್ಬರ್ ನಂತೆ ಕರಿಮೆಣಸು ಆಮದುಗೊಳ್ಳಲೇಬೇಕಾಗಿದ್ದರೆ ಭಾರತದ ಯಾವುದಾದರೂ ಎರಡು ನಿರ್ದಿಷ್ಟ ಬಂದರುಗಳ ಮೂಲಕವೇ ಆಮದಾಗಬೇಕೆಂದು ನಿಯಮ ರೂಪಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವರಿಗೆ ಸಲ್ಲಿಸಲಾಗುವ ಮನವಿಯಲ್ಲಿ ತಿಳಿಸಲು ಸಭೆಯಲ್ಲಿ ವಿವಿಧ ಬೆಳೆಗಾರ ಸಂಘಟನೆಗಳ ಪ್ರಮುಖರು ಒಮ್ಮತಾಭಿಪ್ರಾಯ ತಳೆದರು.

ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಬೆಳೆಯಲಾಗುವ ಕರಿಮೆಣಸನ್ನು ಭಾರತದಲ್ಲಿ ಅಂದಾಜು 65 ಸಾವಿರ ಟನ್ ಗಳಷ್ಟು ಬೆಳೆಯಲಾಗುತ್ತಿದೆ. ಈ ಪೈಕಿ ಶೇ.80 ರಷ್ಟು ಆಂತರಿಕ ಬಳಕೆಯಾಗುತ್ತಿದೆ. ಆದರೆ, ವಿಯೆಟ್ನಾಂ ಸೇರಿದಂತೆ ಕೆಲವು ವಿದೇಶಗಳಿಂದ ಇತ್ತೀಚಿನ ವರ್ಷಗಳಲ್ಲಿ ಕರಿಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದಾಗಿ ಭಾರತೀಯ ಕರಿಮೆಣಸು ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಕೋಟಿಗಟ್ಟಲೆ ಲಾಭದ ವಹಿವಾಟು ಇದಾಗಿದ್ದು, ಇದರಿಂದ ಭಾರತದ ತೋಟಗಾರಿಕಾ ರಂಗಕ್ಕೂ ಆರ್ಥಿಕ ಹೊಡೆತ ಬೀಳುತ್ತಿದೆ.

ಉತೃಷ್ಟ ದರ್ಜೆಯ ಭಾರತೀಯ ಕರಿಮೆಣಸು ತನ್ನ ಬೇಡಿಕೆಯೊಂದಿಗೆ ಬೆಲೆಯನ್ನೂ ಮಾರುಕಟ್ಟೆಯಲ್ಲಿ ಆಮದು ಕರಿಮೆಣಸಿನಿಂದಾಗಿ ಕಳೆದುಕೊಳ್ಳುವ ಹಂತದಲ್ಲಿದೆ ಎಂಬ ವಿವರವನ್ನೂ ಕೇಂದ್ರ ವಾಣಿಜ್ಯ ಸಚಿವರಿಗೆ ಸಲ್ಲಿಸಲಾಗಿರುವ ಮನವಿಯಲ್ಲಿ ಬೆಳೆಗಾರ ಸಂಘಟನೆಗಳು ಮಾಹಿತಿ ನೀಡಲು ನಿರ್ಧರಿಸಿವೆ.

ಸಕಲೇಶಪುರದಲ್ಲಿ ನಡೆದ ಸಭೆಯಲ್ಲಿ ಉಪಾಸಿ, ಕ್ಯಾಂಪ್ಕೋ, ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕೇರಳ ಬೆಳೆಗಾರರ ಒಕ್ಕೂಟ, ಅಡಕೆ, ಕೋಕೋ ಬೆಳೆಗಾರ ಸಂಘಟನೆ, ಬ್ಲಾಕ್ ಗೋಲ್ಡ್ ಲೀಗ್, ಕೊಡಗು ಬೆಳೆಗಾರರ ಒಕ್ಕೂಟ, ಕೊಡಗು ಜಿಲ್ಲಾ ಬೆಳೆಗಾರರ ಸಂಘ, ಶಿರಸಿಯ ಅಡಕೆ ಬೆಳೆಗಾರರ ಸೊಸೈಟಿ,, ಸಹಕಾರ ಭಾರತಿ,ಹಾಸನ ಜಿಲ್ಲಾ ಬೆಳೆಗಾರರ ಸಂಘ ಸೇರಿದಂತೆ 15 ವಿವಿಧ ಬೆಳೆಗಾರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

See also  ಸಾಮಾಜಿಕ ಹೊಣೆಗಾರಿಕೆಯನ್ನು ಎಂಜಿನಿಯರ್ಗಳು ನಿರ್ವಹಿಸಬೇಕು: ಕೆ.ಅಣ್ಣಾಮಲೈ

ಈ ಎಲ್ಲಾ ಬೆಳೆಗಾರ ಸಂಘಟನೆಗಳಿಂದ ರಚಿಸಲ್ಪಟ್ಟ ಕರಿಮೆಣಸು ಆಮದು ನಿಷೇಧಿಸುವ ಸಂಬಂಧಿತ ನೂತನ ಸಮಿತಿಯ ಮುಖ್ಯ ಸಂಚಾಲಕರಾಗಿ ಕೊಂಕೋಡಿ ಪದ್ಮನಾಭ, ಸಹಸಂಚಾಲಕರಾಗಿ ಕೆ.ಕೆ.ವಿಶ್ವನಾಥ್ ಅವರನ್ನು ನೇಮಕಗೊಳಿಸಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ : ರೈತರ ಸಾಲ ಮನ್ನಾ, ಮತ್ತು ಕೃಷಿ ತಜ್ಞ ಡಾ. ಸ್ವಾಮಿನಾಥನ್ ಸಮಿತಿ ವರದಿ ಜಾರಿಗೆ ಆಗ್ರಹಿಸಿ ನವದೆಹಲಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಕೊಡಗು ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಮುಖಂಡರಾದ ಅಜ್ಜಮಾಡ ಚಂಗಪ್ಪ, ಬಾಚಮಾಡ ಭವಿಕುಮಾರ್ ಸೇರಿದಂತೆ ಹಲವು ರೈತ ಮುಖಂಡರು ಜಿಲ್ಲೆಯಿಂದ ಪಾಲ್ಗೊಂಡಿದ್ದರು.

‘ಕಿಶಾನ್ ಸಂಸತ್’ ಹೆಸರಿನಲ್ಲಿ ದೇಶಾದ್ಯಂತ ಇರುವ ವಿವಿಧ ರೈತ ಸಂಘಟನೆಗಳ ಒಕ್ಕೂಟ ಈ ಪ್ರತಿಭಟನೆಯನ್ನು ಸಂಘಟಿಸಿದ್ದು ಎಲ್ಲಾ ರಾಜ್ಯಗಳಿಂದಲೂ ರೈತರೂ ಭಾಗವಹಿಸಿದ್ದರು. ದೆಹಲಿಯ ರಾಮಲೀಲಾ ಮೈದಾನ ಮತ್ತು ಸಂಸತ್ ಭವನ ರಸ್ತೆಯಲ್ಲಿ ಜಮಾವಣೆಗೊಂಡ ರೈತರು ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಕೃಷಿಯಲ್ಲಿ ಮಹಿಳೆಯ ಪಾತ್ರ, ಮಹಿಳೆ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಸಮಲೋಚನೆ ನಡೆಯಿತು. ಹಲವು ಕೃಷಿ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಯಿತು. ದೇಶಾದ್ಯಂತ ಬರ, ನೆರೆ, ಬೆಳೆ ನಷ್ಟ ಮತ್ತು ಅವೈಜ್ಞಾನಿಕ ಬೆಲೆ ನಿಗದಿಯಿಂದ ಪ್ರತಿ ವರ್ಷ ಲಕ್ಷಾಂತರ ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದನ್ನು ತಪ್ಪಿಸಲು ಮತ್ತು ರೈತರಿಗೆ ಧೈರ್ಯ ತುಂಬಲು ಕೂಡಲೇ ದೇಶದ ಎಲ್ಲಾ ರೀತಿಯ ರೈತರು ಮಾಡಿರುವ ಎಲ್ಲಾ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಲೇ ಬೇಕೆಂದು ಒತ್ತಾಯಿಸಲಾಯಿತು.

ಎಲ್ಲಾ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಕ್ರಮ ಕೈಗೊಳ್ಳಬೇಕು ಉತ್ಪಾದನ ವೆಚ್ಚ ಆದರಿಸಿ ಪ್ರತಿ ಬೆಳೆಗೂ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಲಾಯಿತು. ತಕ್ಷಣವೇ ಡಾ. ಸ್ವಾಮಿ ನಾಥನ್ ವರದಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಲಾಯಿತು.ಉತ್ತರ ಕರ್ನಾಟಕ ಜಿಲ್ಲೆಗಳ ನೀರಿನ ಭವಣೆ ನೀಗಿಸುವ ಕಳಸ ಬಂಡೂರಿ ಯೋಜನೆಯ ಶೀಘ್ರ ಆರಂಭಕ್ಕೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವಂತೆ ರೈತರ ಬೆಳೆ ವಿಮೆ ಜಿಲ್ಲೆಯ ರೈತರಿಗೆ ದೊರಕಿಲ್ಲ ಇದರ ಹೊಣೆ ಜಿಲ್ಲಾಧಿಕಾರಿಗಳು ಹೊರಬೇಕೆಂದು ಒತ್ತಾಯಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು