News Kannada
Thursday, September 29 2022

ಕರ್ನಾಟಕ

ಯುವಕರು ಉದ್ಯೋಗಕ್ಕೆ ಹೊರದೇಶಕ್ಕೆ ಹೋಗುವುದು ನಿಲ್ಲಲಿ: ಡಾ.ನಿರ್ಮಲಾನಂದ ನಾಥ ಸ್ವಾಮೀಜಿ - 1 min read

Photo Credit :

ಯುವಕರು ಉದ್ಯೋಗಕ್ಕೆ ಹೊರದೇಶಕ್ಕೆ ಹೋಗುವುದು ನಿಲ್ಲಲಿ: ಡಾ.ನಿರ್ಮಲಾನಂದ ನಾಥ ಸ್ವಾಮೀಜಿ

ಚಿಕ್ಕಮಗಳೂರು: ನಮ್ಮ ನೆಲದಲ್ಲಿ ಹುಟ್ಟಿ, ಇಲ್ಲಿ ಸಿಗುವ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ವೃತ್ತಿಪರ ಕೋರ್ಸ್ಗಳಾದ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಇನ್ನು ಇತರೆ ಪದವಿ ಪಡೆದ ಯುವ ಪಡೆ ಉದ್ಯೋಗಕ್ಕಾಗಿ ಬೇರೆ ದೇಶಗಳಿಗೆ ವಲಸೆ ಹೋಗುತ್ತಿರುವುದು ನಿಲ್ಲಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ನುಡಿದರು.

ಕಲ್ಯಾಣನಗರದ ದೀಪಕ್ ದೊಡ್ಡಯ್ಯನವರ ನಿವಾಸದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹೆಚ್ಚು ವಿದ್ಯಾವಂತರು ಹಣದ ಆಸೆಗಾಗಿ ವಿದೇಶಗಳಿಗೆ ತೆರಳುತ್ತಿರುವುದರಿಂದ, ಹಳ್ಳಿಗಳು ಒಂದು ರೀತಿಯ ವೃದ್ದಾಶ್ರಮಗಳಂತಾಗಿವೆ.

ಮನುಷ್ಯನಿಗೆ ಅದರಲ್ಲೂ ಯುವ ಜನತೆಗೆ ಒಮ್ಮೆ ಹಣದ ದಾಹ ಹೆಚ್ಚಿದರೆ, ಅವರು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವುದಿಲ್ಲ. ಹಣಕ್ಕೆ ಅತಿಯಾದ ಸ್ಥಾನ ನೀಡುವಾಗ ಹೆತ್ತವರ ಗೋಳು ಕೇಳದಾಗುತ್ತದೆ. ಅವನ ಸ್ಥಿತಿ ನಮ್ಮ ಸಮಾಜದಲ್ಲಿ ಉಂಟಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು. ಮಕ್ಕಳು ಹೊರ ದೇಶಕ್ಕೆ ಹೋಗಲು ವಿದ್ಯಾರ್ಥಿಗಳಿಗಿಂತ ಅವರ ಪೋಷಕರೆ ಹೆಚ್ಚಾಗಿ ಹೆಚ್ಚಿನ ಆಸಕ್ತಿ ತೋರುತ್ತಿರುವುದು ದುರದೃಷ್ಟಕರ.

ಹೊರದೇಶಕ್ಕೆ ಉದ್ಯೋಗಕ್ಕಾಗಿ ಹೋಗುವ ಜನರು ಹೆಚ್ಚಿನ ಜನರು ಅಲ್ಲಿಯ ಹೈಟೆಕ್ ಜೀವನಕ್ಕೆ ಹೊಂದಿಕೊಳ್ಳುವುದರ ಪರಿಣಾಮ, ಈ ನಾಡಿನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಸಂಪೂರ್ಣವಾಗಿ ಮರೆಯುವುದರ ಜೊತೆಗೆ ಸಮಾಜದಲ್ಲಿ ಕೆಟ್ಟ ಸಂಪ್ರದಾಯಗಳಿಗೆ ಸ್ಪೂರ್ತಿಯಾಗುತ್ತಾರೆ ಎಂದು ತಿಳಿಸಿದರು. ದೇವರಲ್ಲಿ ಯಾರು ನಂಬಿಕೆ ಇಡುತ್ತಾರೋ ಅವರನ್ನು ದೇವರು ಎಂದೂ ಕೈ ಬಿಡುವುದಿಲ್ಲ. ದೇವರ ಮೇಲಿನ ಭಯ, ಭಕ್ತಿಯಿಂದಲೇ ನಮ್ಮ ಸಮಾಜದಲ್ಲಿ ಇನ್ನೂ ಒಳ್ಳೆಯವರ ಸಂಖ್ಯೆಯೇ ಜಾಸ್ತಿಯಿದೆ. ಮಠ,ಮಂದಿರಗಳು ಈ ಸಮಾಜದ ಶ್ರದ್ದಾ ಕೇಂದ್ರಗಳು, ಸನ್ಯಾಸಿಗಳು ಸಮಾಜವನ್ನು ತಿದ್ದುವ ಕಾರ್ಯ ಮಾಡಬೇಕು. ತಮ್ಮ, ನಡೆ ನುಡಿಗಳು ಬೇರೆಯವರಿಗೆ ಆದರ್ಶವಾಗುವಂತಿರಬೇಕು.

ಮಹಿಳೆಯೇ ಮನೆಯ ಆಧಾರಸ್ಥಂಭ, ಯಾವ ಕುಟುಂಬದಲ್ಲಿ ಮಹಿಳೆಗೆ ಸಿಗಬೇಕಾದ ಸ್ಥಾನಮಾನಗಳು ಸರಿಯಾಗಿ ಸಿಗವುದಿಲ್ಲವೋ ಆ ಮನೆ ಸಂಸ್ಕಾರಯುತ ಮನೆಯಾಗಲು ಸಾಧ್ಯವಿಲ್ಲ ಎಂದರು.

 

See also  ಅಂಗನವಾಡಿಯಲ್ಲಿ ಕುಕ್ಕರ್ ಸಿಡಿದು ಮಕ್ಕಳಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

179
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು