News Kannada
Friday, October 07 2022

ಕರ್ನಾಟಕ

ಪ.ಪಂ.ನಲ್ಲಿ ಭಾರೀ ಅವ್ಯವಹಾರ: ತನಿಖೆ ನಡೆಸಲು ಎಸಿಬಿಗೆ ದೂರು - 1 min read

Photo Credit :

ಪ.ಪಂ.ನಲ್ಲಿ ಭಾರೀ ಅವ್ಯವಹಾರ: ತನಿಖೆ ನಡೆಸಲು ಎಸಿಬಿಗೆ ದೂರು

ಮೂಡಿಗೆರೆ: ಪ.ಪಂ.ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದನ್ನು ಬಯಲಿಗೆಳೆಯಲು ಮುಂದಾಗಿದ್ದನ್ನು ಸಹಿಸದ ಅಧ್ಯಕ್ಷರು ಹಾಗೂ ಅವರ ಹಿಂಬಾಲಕ ಸದಸ್ಯರು ಸೇರಿಕೊಂಡು ತನ್ನ ಹಾಗೂ ತನ್ನ ಪತಿಯ ವಿರುದ್ಧ ಪತ್ರಿಕೆಗಳಿಗೆ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಪಪಂ ಉಪಾಧ್ಯಕ್ಷೆ ನಯನ ಲೋಕಪ್ಪಗೌಡ ತಿಳಿಸಿದರು.

ಕೆ.ವೆಂಕಟೇಶ್ ಪ.ಪಂ. ಸದಸ್ಯರಾದ ಪ್ರಾರಂಭದಿಂದ ಈ ತನಕ ಬಾರಿ ಅವ್ಯವಹಾರ ನಡೆಸಿದ್ದಾರೆ. ಅವರ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಟ್ಟಣದ ಸ.ನಂ.21 ರಲ್ಲಿ 2.20 ಎಕರೆ ಕಂದಾಯ ಭೂಮಿಯನ್ನು ವಸತಿಗೆ ಪರಿವರ್ತಿಸದೇ, ಹರಾಜು ಮಾಡದೇ ಹಂಚಿಕೆ ಮಾಡಲಾಗಿದೆ. ಪಾರ್ಕ್ ಮತ್ತು ಅಂಗನವಾಡಿಗೆಂದು ಮೀಸಲಿಟ್ಟಿದ್ದ ಜಾಗವನ್ನು ಬೇರೆಯವರಿಗೆ ಖಾತೆ ಮಾಡಿ ನಿಯಮವನ್ನು ಗಾಳಿಗೆ ತೋರಿದ್ದಾರೆ.

ಈ ಹಿಂದೆ ಪ.ಪಂ. ನಲ್ಲಿ ಗುಮಾಸ್ತನಾಗಿದ್ದ ನಾರಾಯಣ ಶೆಟ್ಟಿಯ ಪತ್ನಿ, 5 ವರ್ಷ ಪ್ರಾಯದ ಪುತ್ರ ಹಾಗೂ ಮಾವನ ಹೆಸರಿಗೆ ಸುಮಾರು 16 ಸೈಟ್ ಗಳನ್ನು ಖಾತೆ ಮಾಡಿ ಅಕ್ರಮ ಎಸಗಿದ್ದಾರೆ. ಕಳೆದ 30 ವರ್ಷಗಳಿಂದ ಇನ್ನಿಲ್ಲದಂತೆ ಅವ್ಯವಹಾರ ನಡೆಸಿ ಪ.ಪಂ.ನ್ನು ಹರಾಜು ಮಾಡುವ ಹಂತಕ್ಕೆ ತಲುಪುವಂತಹ ಅವ್ಯವಹಾರ ನಡೆಸಿದ್ದಾರೆಂದು ಗಂಭೀರ ಆರೋಪ ಮಾಡಿದರು.

ಪ.ಪಂ. ಸಾಮಾನ್ಯ ಸಭೆಯಲ್ಲಿ ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ನ.16ರಂದು ಸಭೆ ಕರೆದ ದಿನ ಪರಿಮಳಮ್ಮ ದೇವಸ್ಥಾನ ಕಾರ್ಯಕ್ರಮ ಇರುವುದರಿಂದ ನ.16ರ ಸಭೆಯನ್ನು ಒಂದು ದಿನ ಮುಂದೂಡುವಂತೆ 6 ಮಂದಿ ಸದಸ್ಯರು ಮನವಿ ಮಾಡಿ ಪತ್ರ ನೀಡಿದ್ದರೂ, ಅಧ್ಯಕ್ಷರು ಕೋರಂ ಇಲ್ಲದೆಯೂ ಸಭೆ ನಡೆಸಿದ್ದಾರೆ. ಭ್ರಷ್ಟಾಚಾರ ನಡೆಸುವ ಸಲುವಾಗಿ ಅಧ್ಯಕ್ಷೆ ರಮೀಜಾಬಿ ಅವರಿಗೆ ಯಾವುದೇ ಅರ್ಜಿ ಬಂದರೂ ವೆಂಕಟೇಶ್ ರನ್ನು ಕೇಳದೇ ಸಹಿ ಮಾಡುವುದಿಲ್ಲ. ಅಧ್ಯಕ್ಷರಿಗೆ ಸ್ವಂತ ನಿರ್ಧಾರ ತೆಗೆದುಕೊಂಡು ಸಾರ್ವಜನಿಕರ ಕೆಲಸ ಮಾಡಲು ಬರುವುದಿಲ್ಲ ಎಂದು ದೂರಿದರು.

ಇವರು ಮಾಡುತ್ತಿರುವ ಅವ್ಯವಹಾರವನ್ನು ಪ್ರಶ್ನೆ ಮಾಡುತ್ತೇವೆಂದು ಬಿಜೆಪಿ ಸದಸ್ಯರನ್ನು ದೂರವಿಟ್ಟು ಮನ ಬಂದಂತೆ ಸಭೆ ನಡೆಸುತ್ತಿದ್ದಾರೆಂದು ದೂರಿದ ಅವರು, ಒಬ್ಬ ಭ್ರಷ್ಟಾಚಾರಿ ಸದಸ್ಯನ ಜೊತೆ ಸೇರಿ ತನ್ನ ಪತಿ ಲೋಕಪ್ಪಗೌಡರ ವಿರುದ್ಧ ಆರೋಪ ಮಾಡಿರುವ ಅಧ್ಯಕ್ಷೆ ರಮೀಬಾಜಿ ಅವರು ತನ್ನ ಪತಿಯನ್ನು ದಲ್ಲಾಳಿ ಎಂದು ಕರೆದಿದ್ದು ಸರಿಯಲ್ಲ. ಎಲ್ಲಾ ಅವ್ಯವಹಾರಗಳ ಬಗ್ಗೆ ಎಸಿಬಿ ತನಿಖೆ ನಡೆಸಲು ದೂರು ನೀಡಲಾಗುವುದು ಎಂದು ತಿಳಿಸಿದರು.

See also  ಗರ್ಭಿಣಿ ಸಾವಿನಲ್ಲಿ ಸಂಶಯದ ಅಂಶಗಳಿಲ್ಲ: ಎಸ್‍ಪಿ ಡಾ.ಸುಮನ್ ಸ್ಪಷ್ಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

179
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು