News Kannada
Wednesday, October 05 2022

ಕರ್ನಾಟಕ

ವೈದ್ಯಕೀಯ ಕಾಲೇಜು ಕಾಮಗಾರಿ ಪೂರ್ತಿಯಾಗದ ವಿರುದ್ಧ ವಿಶೇಷ ಪ್ರತಿಭಟನೆ - 1 min read

Photo Credit :

ವೈದ್ಯಕೀಯ ಕಾಲೇಜು ಕಾಮಗಾರಿ ಪೂರ್ತಿಯಾಗದ ವಿರುದ್ಧ ವಿಶೇಷ ಪ್ರತಿಭಟನೆ

ಕಾಸರಗೋಡು: ಬಹುನಿರೀಕ್ಷಿತ ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜು ಶಿಲಾನ್ಯಾಸಗೈದು ನಾಲ್ಕು ವರ್ಷ ಪೂರ್ಣಗೊಂಡರೂ ಕಾಮಗಾರಿಗೆ ಮೀನಮೇಷ ಎಣಿಸುತ್ತಿರುವುದನ್ನು ಹಾಗೂ ವೈದ್ಯಕೀಯ ಕಾಲೇಜನ್ನು ಬೇರೆ ಜಿಲ್ಲೆಗೆ ವರ್ಗಾಹಿಸುವ ಹುನ್ನಾರವನ್ನು ವಿರೋಧಿಸಿ ಜನಪರ ಆಂದೋಲನ ಸಮಿತಿಯ ನೇತೃತ್ವದಲ್ಲಿ  ಮಂಗಳವಾರ ರಾತ್ರಿ ಪೆರ್ಲ ಉಕ್ಕಿನಡ್ಕದಲ್ಲಿರುವ ವೈದ್ಯಕೀಯ ಕಾಲೇಜು  ಪರಿಸರದಲ್ಲಿ “ಕಾದು ಕುಳಿತುಕೊಳ್ಳುವ”ಎಂಬ ವಿಶೇಷ ಚಳುವಳಿ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಕಾಸರಗೋಡು ಶಾಸಕ  ಎನ್. ಎ ನೆಲ್ಲಿಕುನ್ನು, ಹೋರಾಟ ಸಮಿತಿ ಮುಖಂಡ ಮಾಹಿನ್ ಕೇಳೊಟ್,  ಪ್ರೊ. ಎ. ಶ್ರೀನಾಥ್, ಸೋಮಶೇಖರ ಜೆ. ಎಸ್.  ಶ್ಯಾಮ್ ಪ್ರಸಾದ್  ಮೊದಲಾದವರು ಉಪಸ್ಥಿತರಿದ್ದರು.

2013 ನವಂಬರ್ 30ರಂದು ಅಂದಿನ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಶಿಲಾನ್ಯಾಸಗೈದ ವೈದ್ಯಕೀಯ ಕಾಲೇಜು ಅಕಾಡೆಮಿಕ್ ಬ್ಲಾಕ್ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಇದೇ ಸಂದರ್ಭದಲ್ಲಿ 68 ಕೋಟಿ ಮೀಸಲಿರಿಸಿದ ಆಸ್ಪತ್ರೆ ಕಟ್ಟಡದ ಟೆಂಡರ್ ವಿವಿಧ ಕಾರಣಗಳನ್ನು ನೀಡಿ ಕಾಮಗಾರಿ ಆರಂಭಕ್ಕೆ ವಿಳಂಬಗೊಳಿಸಲಾಗುತ್ತಿದ್ದು, ಕಳೆದ 2 ವರ್ಷಗಳಿಂದ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಬೇಡಿಕೆ ಈಡೇರಿಸದಿದ್ದಲ್ಲಿ ಜನವರಿ 30ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೋರಾಟ ಸಮಿತಿ ಮುನ್ನೆಚ್ಚರಿಕೆ ನೀಡಿದೆ.

See also  ಸೈಕಲ್ ಕವಿ ಎಂದೇ ಖ್ಯಾತರಾಗಿದ್ದ ಐರಸಂಗ ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು