ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತೆಗೆಂದು ನಿಯೋಜನೆಗೊಂಡ ಚಿಕ್ಕಮಗಳೂರು ಗುಪ್ತಚರ ಇಲಾಖೆಯ ಡಿವೈಎಸ್ಪಿ ಇಂದು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಶೇಖ್ ಹುಸೇನ್ ಮೃತಪಟ್ಟ ಡಿವೈಎಸ್ಪಿಯಾಗಿದ್ದು, ಹೃದಯಾಘಾತವಾದ ಅವರನ್ನು ಎನ್.ಆರ್.ಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಸೇನ್ ಅವರು ಚಿಕ್ಕಮಗಳೂರು ಗುಪ್ತಚರ ಇಲಾಖೆ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸಿಎಂ ಹೆಲಿಕಾಪ್ಟರ್ ಟೇಕ್ ಆಫ್ ಆದ ಮೇಲೆ ಲೋ ಬಿಪಿ ಹಾಗೂ ಶುಗರ್ ನಿಂದ ಹೃದಯಾಘಾತವಾಗಿದೆ. ಕಳೆದ ರಾತ್ರಿ ಎನ್.ಆರ್.ಪುರದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಅವರು ಅಲ್ಲಿಂದ ಹುಬ್ಬಳ್ಳಿ ಗೆ ತೆರಳಿದ ಬಳಿಕ ಈ ಘಟನೆ ನಡೆದಿದೆ.