News Kannada
Thursday, September 29 2022

ಕರ್ನಾಟಕ

ಕಾರ್ಮಿಕನ ಮೇಲೆ ಚಿರತೆ ದಾಳಿ : ಕಾರ್ಮಿಕರ ಪ್ರತಿಭಟನೆ - 1 min read

Photo Credit :

ಕಾರ್ಮಿಕನ ಮೇಲೆ ಚಿರತೆ ದಾಳಿ : ಕಾರ್ಮಿಕರ ಪ್ರತಿಭಟನೆ

ಸೋಮವಾರಪೇಟೆ: ಕಾಫಿ ತೋಟದ ಒಂಟಿ ಲೈನ್ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕರೊಬ್ಬರು ಕಾಡುಪ್ರಾಣಿಗೆ ಬಲಿಯಾಗಿರುವ ಘಟನೆ ಪಟ್ಟಣಕ್ಕೆ ಸಮೀಪದ ನಗರೂರು ಎಸ್ಟೇಟ್ ನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ನಗರೂರು ಕಲ್ಲುಬಂಗ್ಲೆ ನಿವಾಸಿ ತಿಮ್ಮಪ್ಪ(67) ಮೃತಪಟ್ಟವರು. ಸಂತೋಷ್ ಎಂಬವರಿಗೆ ಸೇರಿದ ನಗರೂರು ಕಾಫಿ ತೋಟದಲ್ಲಿ ಮೃತರು ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಬೆಳಗ್ಗೆ ಕಾರ್ಮಿಕರು ಕಾಫಿ ತೋಟಕ್ಕೆ ತೆರಳಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.

ಸೂಕ್ತ ಪರಿಹಾರಕ್ಕಾಗಿ ಸುತ್ತಮುತ್ತಲ ಕಾರ್ಮಿಕರು ಹಾಗೂ ಸಾರ್ವಜನಿಕರು ರಸ್ತೆ ತಡೆ ನಡೆಸಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರ ಸೂಚನೆ ಮೇರೆಗೆ, ಅರಣ್ಯ ಇಲಾಖೆ ಮೃತರ ಕುಟುಂಬಕ್ಕೆ 5ಲಕ್ಷ ರೂ. ಪರಿಹಾರ ಘೋಷಿಸಿ, ಸ್ಥಳದಲ್ಲಿ 2 ಲಕ್ಷ ರೂ. ಚೆಕ್ ವಿತರಿಸಿದರು.

ಮನೆ ಬಾಗಿಲಿನಲ್ಲೇ ಮೃತದೇಹ ಬಿದ್ದಿದ್ದು, ಮುಖ, ಕುತ್ತಿಗೆ ಹಾಗು ಎಡಗೈ ಹಸ್ತವನ್ನು ಪ್ರಾಣಿ ತಿಂದಿದೆ. ಚಿರತೆ ದಾಳಿ ಮಾಡಿರುವ ಕಾರಣ ಮೃತರಿಗೆ ಪರಿಹಾರ ನೀಡಬೇಕು ಎಂದು ಕಾರ್ಮಿಕರು ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಡಿಎಫ್ಓ ಸೂರ್ಯಸೇನ್, ಎಸಿಎಫ್ ಚಿಣ್ಣಪ್ಪ, ಆರ್ ಎಫ್ಓ ಲಕ್ಷ್ಮೀಕಾಂತ್ ಹಾಗು ಸಿಬ್ಬಂದಿ ಪರಿಶೀಲನೆ ನಡೆಸಿದರು. ಕಾಫಿ ತೋಟದಲ್ಲಿ ಹುಟುಕಾಟ ನಡೆಸಿದರೂ ಚಿರತೆ ಎಂಬುದಕ್ಕೆ ಯಾವುದೇ ಕುರುಹು ಲಭಿಸಲಿಲ್ಲ. ಮೃತರು ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ. ನಾಯಿ ದಾಳಿಯ ಬಗ್ಗೆ ಸಂಶಯವಿದೆ. ಸೂಕ್ತ ತನಿಖೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಡಿಎಫ್ಓ ಹೇಳಿದರು.

ಇದರಿಂದ ಕೆರಳಿದ ಕಾರ್ಮಿಕರು ಹಾಗೂ ಸಾರ್ವಜನಿಕರು, ಕಾರ್ಮಿಕ ಕಾಡುಪ್ರಾಣಿಗೆ ಬಲಿಯಾಗಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ಘೋಷಿಸದಿದ್ದರೆ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಹೇಳಿ ಮಡಿಕೇರಿ ಸೋಮವಾರಪೇಟೆ ಮಾರ್ಗದಲ್ಲಿ ರಸ್ತೆ ತಡೆ ಪ್ರಾರಂಭಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಡಿಎಫ್ಓ ಅವರು, ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರವನ್ನು ಘೋಷಿಸಿದರು. ಮಾನವೀಯ ದೃಷ್ಟಿಯಿಂದ ಪರಿಹಾರ ಘೋಷಿಸಲಾಗಿದ್ದು, ಇಂದು 2ಲಕ್ಷ ರೂ. ನೀಡಲಾಗುವುದು. 3 ಲಕ್ಷ ರೂ.ಗಳು ಮೃತರ ಸಂಬಂಧಿಕರ ಖಾತೆ ಜಮೆಯಾಗಲಿದೆ ಎಂದು ಸಮಾಧಾನ ಪಡಿಸಿದರು. ನಂತರ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್, ಕಾಂಗ್ರೆಸ್ ನ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್ ಅವರುಗಳು ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಜಯಕರ್ನಾಟಕ ಸಂಘಟನೆಯ ತಾಲೂಕು ಸುರೇಶ್ ಶೆಟ್ಟಿ, ಕರವೇ ತಾಲೂಕು ಅಧ್ಯಕ್ಷ ದೀಪಕ್, ತಾಪಂ ಸದಸ್ಯ ಬಿ.ಬಿ.ಸತೀಶ್, ಪ್ರಮುಖರಾದ ಹಾನಗಲ್ ಮಿಥುನ್, ರಾಶಿ, ಹಸನಬ್ಬ ಮತ್ತಿತರರು ಪರಿಹಾರಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸರ್ಕಲ್ ಇನ್ಸ್ ಪೆಕ್ಟರ್ ನಂಜುಂಡೇಗೌಡ, ಸಬ್ಇನ್ಸ್ ಪೆಕ್ಟರ್ ಶಿವಣ್ಣ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

See also  ಶಬರಿಮಲೆ ಬಿಕ್ಕಟ್ಟು: ಇಂದು ಕೇರಳದಲ್ಲಿ ಹರತಾಳಕ್ಕೆ ಕರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು