News Kannada
Thursday, September 29 2022

ಕರ್ನಾಟಕ

ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರಿಂದ ಹಿಡಿಶಾಪ! - 1 min read

Photo Credit :

ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರಿಂದ ಹಿಡಿಶಾಪ!

ಚಾಮರಾಜನಗರ: ಪ್ರತಿನಿತ್ಯವೂ ಸಾವಿರಾರು ಭಕ್ತರು ಸೇರಿದಂತೆ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಮಲೆಮಹದೇಶ್ವರ ಬೆಟ್ಟದಲ್ಲಿ ಮೂಲ ಸೌಲಭ್ಯದ ಕೊರತೆಯಿಂದಾಗಿ ಇಲ್ಲಿಗೆ ಭೇಟಿ ನೀಡುವ ಮಂದಿ ಹಿಡಿಶಾಪ ಹಾಕುವಂತಾಗಿದೆ.

ಸ್ವಚ್ಛತೆ ಕೊರತೆ, ಶೌಚಾಲಯದ ಅವ್ಯವಸ್ಥೆಯಿಂದಾಗಿ ಇಲ್ಲಿ ದುರ್ನಾತ ಬೀರುತ್ತಿದ್ದು, ಮೂತ್ರ ಸೇರಿದಂತೆ ತ್ಯಾಜ್ಯ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದು ಅದನ್ನೇ ತುಳಿದುಕೊಂಡು ಭಕ್ತರು ದೇವಾಲಯಕ್ಕೆ ಬರುವಂತಾಗಿದೆ. ಹೀಗಾಗಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ವಿಫಲವಾದ ಮಲೆ ಮಹದೇಶ್ವರ ಅಭಿವೃಧ್ಧಿ ಪ್ರಾಧಿಕಾರದ ವಿರುದ್ಧ ಜನ ಕೆಂಡ ಕಾರುವಂತಾಗಿದೆ.

ಮಲೆಮಹದೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುವವರಿಗೆ ಇಲ್ಲಿನ ಶೌಚಾಲಯಗಳು ಅವ್ಯವಸ್ಥೆಯ ಆಗರವಾಗಿರುವುದು ಕಣ್ಣಿಗೆ ರಾಚುತ್ತದೆ. ಶೌಚಾಲಯದಿಂದ ಮಲಿನ ನೀರು ರಸ್ತೆಗೆ ಹರಿದು ಬರುತ್ತಿದ್ದು ಅದನ್ನೇ ತುಳಿದುಕೊಂಡು ದೇವಾಲಯಕ್ಕೆ ತೆರಳುತ್ತಿದ್ದು ಇದಕ್ಕೆ ಶೌಚಾಲಯದ  ಕೊರತೆಯಿಂದಾಗಿ ಜನ ಬಸ್ ನಿಲ್ದಾಣದ ಬಳಿ ಇರುವ ತೋಟದ ರಸ್ತೆಯ ಬದಿಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವುದೇ ಕಾರಣ ಎನ್ನಲಾಗುತ್ತಿದೆ.

ಮುಜರಾಯಿ ಇಲಾಖೆಗೆ ಒಳಪಟ್ಟಿದ್ದ ದೇವಾಲಯದ ಆಡಳಿತವನ್ನು ಕಳೆದ ಎರಡು ಮೂರು ವರ್ಷಗಳಿಂದ ಪ್ರಾಧಿಕಾರ ವಹಿಸಿಕೊಂಡಿದೆ. ಜತೆಗೆ ಇಲ್ಲಿಂದ ರಾಜ್ಯದ ಬೊಕ್ಕಸಕ್ಕೆ ವರ್ಷದಿಂದ ವರ್ಷಕ್ಕೆ ಆದಾಯವೂ ಹೆಚ್ಚಳವಾಗುತ್ತಿದೆ. ಆದರೆ ಅಭಿವೃದ್ಧಿ ಕಾರ್ಯ ಮಾತ್ರ ಶೂನ್ಯವಾಗಿದೆ. ಭಕ್ತರಿಗೆ ಸರಿಯಾದ ಕೊಠಡಿಗಳ ವ್ಯವಸ್ಥೆಯನ್ನು ಮಾಡುತ್ತಿಲ್ಲ. ಕೆಲವೊಮ್ಮೆ ಕೊಠಡಿಗಳು ಖಾಲಿ ಇದ್ದರೂ ಖಾಲಿ ಇಲ್ಲವೆಂದು ಹೇಳಿ ಖಾಸಗಿ ಒಡೆತನದ ವಸತಿ ಗೃಹಗಳಿಗೆ ಹೋಗುವಂತೆ ಮಾಡುತ್ತಿದ್ದಾರೆ ಎಂಬ ಆರೋಪವೂ ಇಲ್ಲಿ ಕೇಳಿ ಬರುತ್ತಿದೆ.

ಇಲ್ಲಿ ಭಕ್ತರು ವಾಸ್ತವ್ಯ ಹೂಡಲು ಡಿ.ಮಾದರಿಯ ಕೊಠಡಿಯನ್ನು ನೀಡುತ್ತಾರಾದರೂ ಅಲ್ಲಿ ಭಕ್ತರೇ ಚಾಪೆ, ರಗ್ಗು, ದಿಂಬುಗಳನ್ನು ಬಾಡಿಗೆಗೆ ಪಡೆದುಕೊಳ್ಳುವುದು ಅನಿವಾರ್ಯ. ಜತೆಗೆ ಬೆಳಗ್ಗೆ ಎಂಟರಿಂದ ಒಂಬತ್ತು ಘಂಟೆಯವರೆಗೆ ನೀರು ಬಿಡುವುದರಿಂದ ಸ್ನಾನ ಮಾಡಿ ಸಕಾಲಕ್ಕೆ ದೇವರದರ್ಶನ ಮಾಡಲು ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಒಟ್ಟಾರೆ ಮಲೆಮಹದೇಶ್ವರ ಬೆಟ್ಟದಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಸಾಮಾನ್ಯವಾಗಿದ್ದು, ಪ್ರಾಧಿಕಾರ ಇತ್ತ ಗಮನಹರಿಸುವುದು ಅವಶ್ಯಕವಾಗಿದೆ.

See also  ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಬೀದಿ ನಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು