News Kannada
Tuesday, October 04 2022

ಕರ್ನಾಟಕ

ಹಳ್ಳಿಗೂ ಬಂದ್ರೂ ಸರಗಳ್ಳರು…ಮಹಿಳೆಯರೇ ಎಚ್ಚರವಿರಿ… - 1 min read

Photo Credit :

ಹಳ್ಳಿಗೂ ಬಂದ್ರೂ ಸರಗಳ್ಳರು…ಮಹಿಳೆಯರೇ ಎಚ್ಚರವಿರಿ…

ಮಾಗಡಿ: ಮಹಿಳೆಯರ ಸರಕಳ್ಳತನ ಪ್ರಕರಣ ಬೆಂಗಳೂರುನಂತಹ ನಗರ ಮಾತ್ರವಲ್ಲದೆ ಎಲ್ಲೆಡೆಯೂ ನಡೆಯತೊಡಗಿದ್ದು, ಮಹಿಳೆಯರು ಹೊರಗೆ ಓಡಾಡಲು ಭಯಪಡುವಂತಾಗಿದೆ.

ಗ್ರಾಮೀಣ ಪ್ರದೇಶದ ಮಹಿಳೆಯರ ಕೊರಳಿನ ಮೇಲೆ ಕಣ್ಣಿಟ್ಟಿರುವ ಸರಗಳ್ಳರು ತಮ್ಮ ಕೈಚಳಕ ಬಳಸಿ ಮಾಂಗಲ್ಯ ಸರ ಸೇರಿದಂತೆ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗುತ್ತಿದ್ದಾರೆ.

ಇದೀಗ ಬೈಕ್ನಲ್ಲಿ ಪತಿಯೊಂದಿಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಮತ್ತೊಂದು ಬೈಕ್ನಲ್ಲಿ ಬಂದ ಸರಕಳ್ಳರು ಪತ್ನಿಯ ಕೊರಳಿಗೆ ಕೈ ಹಾಕಿ 20 ಗ್ರಾಂನ 3 ತಾಳಿ, 6 ಚಿನ್ನದ ಗುಂಡುಗಳ ಸೇರಿ 1 ಲಕ್ಷದ 50 ಸಾವಿರ ಮೌಲ್ಯದ ಮಾಂಗಲ್ಯದ ಸರವನ್ನು ಎಳೆದುಕೊಂಡು ಹೋಗಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಣಿಗಲ್ ತಾಲೂಕಿನ ಕುರುಡಿಹಳ್ಳಿಯ ಸುಮಾ (23) ಮಾಂಗಲ್ಯ ಸರ ಕಳೆದುಕೊಂಡವರು. ಸುಮಾ ತನ್ನ ತವರೂರಾದ ಮಾಗಡಿ ತಾಲೂಕಿನ ಸಂಜೀವಯ್ಯನಪಾಳ್ಯದಿಂದ ಗುರುವಾರ ತವರು ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಹುಚ್ಚಹನುಮೇಗೌಡನಪಾಳ್ಯದ ಬಳಿ ಹಿಂಬದಿಯಿಂದ ಬಂದ ಬೈಕ್ ಸವಾರ ಇಬ್ಬರು ಏಕಾಏಕಿ ಕೊರಳಿಗೆ ಕೈ ಹಾಕಿ ಬಲವಾಗಿ ಮಾಂಗಲ್ಯ ಸರವನ್ನು ಎಳೆದುಕೊಂಡು ಹೋಗಿದ್ದಾರೆ.

ಸರ ಎಳೆದ ರಭಸಕ್ಕೆ ಬೈಕ್ ಸವಾರರಿಬ್ಬರು ಕೆಳಗೆ ಬಿದ್ದು ಸಮಾರವರ ಕೈ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿ ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

See also  ದಲಿತ ಯುವಕನ ಬೆತ್ತಲೆ ಮೆರವಣಿಗೆ: ಆರು ಜನರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು