News Kannada
Sunday, October 02 2022

ಕರ್ನಾಟಕ

ಸೋಮವಾರಪೇಟೆಯಲ್ಲಿ ಬೆಚ್ಚಿ ಬೀಳಿಸಿದ ಸರಣಿ ಕಳ್ಳತನ, ಶಟರ್ ತೆಗೆದು ಹಣ ದೋಚಿದ ಕದಿಮರು - 1 min read

Photo Credit :

ಸೋಮವಾರಪೇಟೆಯಲ್ಲಿ ಬೆಚ್ಚಿ ಬೀಳಿಸಿದ ಸರಣಿ ಕಳ್ಳತನ, ಶಟರ್ ತೆಗೆದು ಹಣ ದೋಚಿದ ಕದಿಮರು

ಸೋಮವಾರಪೇಟೆ: ಪಟ್ಟಣದ ವಿವಿಧೆಡೆ 6 ಕಡೆ ಸರಣಿ ಕಳ್ಳತನವಾಗಿದೆ. ಶುಕ್ರವಾರ ಬೆಳಗ್ಗಿನ ಜಾವ 2-30ರ ಸಮಯದಲ್ಲಿ ಅಂಗಡಿಗಳ ರೋಲಿಂಗ್ ಶೆಟರ್ಸ್ ಮೀಟಿ ತೆಗೆದು ಸಿಕ್ಕಿದಷ್ಟು ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಆಶೀರ್ವಾದ್, ಸುಮುಖ್ ಮೆಡಿಕಲ್ಸ್, ಲಕ್ಕಿ ದಿನಸಿ ಆಂಗಡಿಯ ಶಟರ್ ತಗೆದು ಚಿಲ್ಲರೆ ಹಣದೊಂದಿಗೆ ಪರಾರಿಯಾಗಿದ್ದಾರೆ.

ಸಿ.ಕೆ.ಸುಬ್ಬಯ್ಯ ರಸ್ತೆಯ ಟೆಕ್ಮಾ ಬಾರ್ ಒಳಪ್ರವೇಶಿಸಿದಾಗ ಸಿ.ಸಿ.ಕ್ಯಾಮೆರಾ ಇದ್ದರೂ, ಅದನ್ನು ಮಾಲೀಕರು ಆಫ್ ಮಾಡಿರುವುದರಿಂದ ಕಳ್ಳರ ಕೃತ್ಯ ಸೆರೆಯಾಗಿಲ್ಲ. ಅಲ್ಲಿಯೇ ಪಕ್ಕದ ಯೋಗೇಶ್ ಫುಟ್ವೇರ್, ಕ್ಯಾಲಿಟಿ ಕಾಫಿ ಪುಡಿ ಮಿಲ್ಲಿನ ಬಾಗಿಲು ಒಡೆದಿದ್ದಾರೆ. ಕಳ್ಳರ ತಂಡ ಶನಿವಾರ ಸಂತೆ ಮಾರ್ಗವಾಗಿ ತೆರಳಿ ಬೀಟಿಕಟ್ಟೆ ಜಂಕ್ಷನ್ ನಲ್ಲಿರುವ ದೀಪು, ಮತ್ತು ನವೀನ್ ದಿನಸಿ ಅಂಗಡಿ ಹಾಗು ಬೇಕರಿಯ ಬಾಗಿಲನ್ನು ತೆಗೆದು ಡ್ರಾಯರ್ನಲ್ಲಿದ್ದ ಅಲ್ಪ ಸ್ವಲ್ಪ ಹಣವನ್ನು ಕಳವು ಮಾಡಿದ್ದಾರೆ.

ಸಿ.ಒ.ಸಿ ಪ್ರತಿಭಟನೆ: ಸರಣಿ ಕಳ್ಳತನದಿಂದ ಇಡಿ ಪಟ್ಟಣ ಬೆಚ್ಚಿಬಿದ್ದಿದ್ದು, ಪಟ್ಟಣದ ವರ್ತಕರು ಚೇಂಬರ್ ಆಫ್ ಕಾಮರ್ಸ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು. 12 ಗಂಟೆಯವರೆಗೆ ಅಂಗಡಿ ಮುಂಗಟ್ಟು ಮುಚ್ಚಿ ಖಾಸಗಿ ಬಸ್ ನಿಲ್ದಾಣದ ಬಳಿ ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾನವ ಸರಪಳಿ ನಿರ್ಮಿಸಿ, ಪೊಲೀಸ್ ಇಲಾಖೆ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಸಿ.ಸಿ. ಕ್ಯಾಮೆರಾ ಆಫ್: ಪೊಲೀಸ್ ಇಲಾಖೆಯ ವತಿಯಿಂದ ಕೆಲ ಜಾಗದಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾಗಳು ಚಾಲನೆಯಲ್ಲಿಲ್ಲ. ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸೆಸ್ಕ್ ಸಂಪರ್ಕ ಕಡಿತಗೊಳಿಸಿದೆ ಎಂದು ಚೇಂಬರ್ ಅಧ್ಯಕ್ಷ ಮನು ಕುಮಾರ್ ರೈ ಆರೋಪಿಸಿದರು. ಪುಟ್ಟಪ್ಪ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪದಿಂದ ಕೂಡ ಸರಿಯಾದ ಬೆಳಕು ಸಿಗುತ್ತಿಲ್ಲ. ಪೊಲೀಸರು ಬೀಟ್ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಕಳ್ಳತನ ಪುನರಾವರ್ತನೆಯಾದರೆ ಪಟ್ಟಣ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ಪಟ್ಟಣದಲ್ಲಿ ಬೀಟ್ ಇತ್ತು: ಪಟ್ಟಣದಲ್ಲಿ ಪೊಲೀಸ್ ಬೀಟ್ ಇದ್ದ ಸಂದರ್ಭದಲ್ಲೇ ಕಳ್ಳತನಕ್ಕೆ ಪ್ರಯತ್ನ ನಡೆದಿದೆ. 10 ನಿಮಿಷಕ್ಕೆ ಮೊದಲು ಖಾಸಗಿ ಬಸ್ ನಿಲ್ದಾಣದ ಮಾರ್ಗವಾಗಿ ಪೊಲೀಸ್ ಸಿಬ್ಬಂದಿಗಳು ಬೇರೆ ವಾರ್ಡ್ ಗಳಿಗೆ ತೆರಳಿದ್ದಾರೆ.

ಅದು ಸಿ.ಸಿ.ಟಿ.ವಿಯಲ್ಲಿ ದಾಖಲಾಗಿದೆ ಎಂದು ಠಾಣಾಧಿಕಾರಿ ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಸಿ.ಸಿ.ಕ್ಯಾಮೆರಾ ಅಳವಡಿಸಿದವರು ರಾತ್ರಿ ಮನೆಗೆ ತೆರಳುವ ಸಂದರ್ಭ ಸ್ವಿಚ್ಆಫ್ ಮಾಡುತ್ತಾರೆ. ಇದರಿಂದ ಸಮಸ್ಯೆಯಾಗಿದೆ. ಪ್ರತಿ ರಸ್ತೆಯಲ್ಲಿ ಮುರ್ನಾಲ್ಕು ಸಿ.ಸಿ.ಕ್ಯಾಮೆರಾಗಳು ಚಾಲನೆಯಲ್ಲಿರಬೇಕು. ಎರಡು ವಾಹನಗಳಲ್ಲಿ ಐದಾರು ಮಂದಿ ಕಳ್ಳರು ಕಾರ್ಯನಿರ್ವಹಿಸಿರುವ ಬಗ್ಗೆ ಮಾಹಿತಿ ಇದ್ದು, ಹಿರಿಯ ಅಧಿಕಾರಿಗಳ ಸೂಚನೆಯಂತೆ ತನಿಖೆ ಮುಂದುವರಿದಿದೆ. ನಗದು ಕಳ್ಳತನದ ಬಗ್ಗೆ ಮಾಲೀಕರು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಠಾಣಾಧಿಕಾರಿ ಹೇಳಿದರು.

ಕಳ್ಳತನದಿಂದ ಜಖಂಗೊಂಡಿದ್ದ ರೋಲಿಂಗ್ ಶೆಟರ್ಸ್ನ್ನು ಅಂಗಡಿ ಮಾಲಿಕರು, ಜೆಸಿಬಿ ಯಂತ್ರದ ಮೂಲಕ ಸರಿಪಡಿಸಿಕೊಂಡರು. ಬೆಳಿಗ್ಗೆ ಸ್ಥಳಕ್ಕೆ ಡಿವೈಎಸ್ಪಿ ಮುರುಳಿಧರ್ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ತಜ್ಞರು ಪರಿಶೀಲಿಸಿದರು.

See also  ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು