News Kannada
Tuesday, September 27 2022

ಕರ್ನಾಟಕ

ಕುರುಳಿ ಅಂಬಲದಲ್ಲಿ ಗಮನ ಸೆಳೆದ ಪುತ್ತರಿಕೋಲಾಟ್ ಸೊಬಗು - 1 min read

Photo Credit :

ಕುರುಳಿ ಅಂಬಲದಲ್ಲಿ ಗಮನ ಸೆಳೆದ ಪುತ್ತರಿಕೋಲಾಟ್ ಸೊಬಗು

ಚೆಟ್ಟಳ್ಳಿ: ಕೊಡಗಿನ ಇತಿಹಾಸ ಪ್ರಸಿದ್ದವಾದ ಮಡಿಕೇರಿ ತಾಲೂಕಿನ ಕಡಗದಾಳುವಿನ ಇಗ್ಗುತಪ್ಪ ಕುರುಳಿ ಅಂಬಲದಲ್ಲಿ ಪುತ್ತರಿ ಕೋಲಾಟ್ ಸಂಪ್ರದಾಯ ಬದ್ಧವಾಗಿ ನಡೆಯಿತ್ತು.

ಕೊಡಗಿನ ಸಾಂಪ್ರದಾಯಿಕ ಪುತ್ತರಿ ಹಬ್ಬಕ್ಕೆ 2ದಿನ ಮುಂಚಿತವಾಗಿ ಊರಿನವರು ರಾತ್ರಿ 8 ಗಂಟೆಗೆ ಈಡು ತೆಗೆದರು. ಪುತ್ತರಿ ಹಬ್ಬದಂದು ಮಂದ್ನಲ್ಲಿದೇವ ನೆಲೆಗೆ ಕದುರುಕಟ್ಟಿ ಎರಡು ದಿನಗಳನಂತರ ಸಂಜೆ 5ಗಂಟೆಗೆ ಸಾಂಪ್ರದಾಯ ಬದ್ಧವಾಗಿ ಊರಿನವರ ಸಮ್ಮುಖದಲ್ಲಿ ಮಂದ್ತೊರ್ಪ ಕಾರ್ಯಕ್ರಮ ನೆರವೇರಿತು. ಮೂರನೆಯ ದಿನ ನಾಡುಕೋಲ್, ಅಂದು ಪಾಂಡಿರ ಕುಟುಂಬದ ದೇಶತಕ್ಕರು, ಪೊನ್ನಚೆಟ್ಟಿರ ಕುಟುಂಬದ ನಾಲ್ಕುನಾಡುತಕ್ಕರು, ಕೊರವಂಡ ಕುಟುಂಬದ ಊರು ತಕ್ಕರು, ಒಟ್ಟು 7ನಾಡಿನ ತಕ್ಕರು, ಊರಿನವರೆಲ್ಲ ಸೇರಿ ಸಾಂಪ್ರದಾಯವಾಗಿ ಆಚರಿಸಿದರು.

ಮಧ್ಯಾಹ್ನ 12ಗಂಟೆಗೆ ಊರಿನವರೆಲ್ಲ ಸೇರಿ ಊರುತಕ್ಕರಾದ ಕೊರವಂಡ ಕುಟುಂಬದ ಐನ್ಮನೆಗೆ ತೆರಳಿ ಮಧ್ಯಾಹ್ನದ ಊಟೋಪಚಾರ ಮುಗಿಸಿ ಸಾಂಪ್ರದಾಯದ ವಾಲಗ ತಳಿಯಕ್ಕಿ ಬೊಳ್ಚ , ದುಡಿಕೊಟ್ಟ್ ಹಾಡಿನೊಂದಿಗೆ ಮಂದ್ಗೆಕರೆತರಲಾಯಿತು. ದೇಶತಕ್ಕರನ್ನು ನಾಡ್ತಕ್ಕರನ್ನು ಸಾಂಪ್ರದಾಯ ಬದ್ಧವಾಗಿಕರೆತಂದು ಸತ್ಕರಿಸಲಾಯಿತು.

ದೇಶತಕ್ಕರು, ಊರುತಕ್ಕರು, ನಾಡುತಕ್ಕರು ಮೇದರಕೊಟ್ಟಿಗೆ ಕೋಲಾಟ್, ಪರೆಕಳಿಯನ್ನು ಕುಣಿದರೆ ಉಳಿದವರು ಸಾಲಾಗಿ ಹೆಜ್ಜೆ ಹಾಕಿದರು. ದುಡಿಕೊಟ್ಟಿಗೆ ಬೊಳಕಾಟ್ ಪ್ರದರ್ಶಿಸಿದರೆ ವಾಲಗಕ್ಕೆ ಪುರುಷರು ಮಹಿಳೆ ಮಕ್ಕಳೆಲ್ಲ ಹೆಜ್ಜೆ ಹಾಕಿ ಕುಣಿದರು. ತಕ್ಕ ಮುಖ್ಯಸ್ಥರಿಗೆ, ನೆಂಟರಿಸ್ಟರಿಗೆ ಊರಿನವರೆಲ್ಲ ಫಲಹಾರ ಸವಿದರು.ತಕ್ಕ ಮುಖ್ಯಸ್ಥರನ್ನು ಮಂದ್ ನಿಂದ ವಾಲಗ ದುಡಿಕೊಟ್ಟಿನೊಂದಿಗೆ ಬೀಳ್ಕೊಟ್ಟರೆ ಕೊರವಂಡ ಕುಟುಂಬದ ಊರುತಕ್ಕರನ್ನು ಕೊರವಂಡ ಐನ್ ಮನೆಗೆ ವಾಲಗ ದುಡಿಕೊಟ್ ಹಾಡಿನೊಂದಿಗೆ ಬೀಳ್ಕೊಟ್ಟು ದೇವನೆಲೆಯಲ್ಲಿ ಒಪ್ಪಿಸಲಾಯಿತು.

ಶನಿವಾರ ಸಂಜೆ 7ಗಂಟೆಗೆ ವಿಷ್ಣು ಮೂರ್ತಿ ಪೂಜೆ ಸಲ್ಲಿಸಿ ಮೌನವಾಗಿ ಕೋಲನ್ನು ಮಂದ್ನ ದೇವನೆಲೆಯಲ್ಲಿ ಒಪ್ಪಿಸಿದರು.

See also  ಕಪಿಲೆಯ ರೌದ್ರತೆಗೆ ಮುಳುಗಿದ ಸುತ್ತೂರು ಸೇತುವೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು