News Kannada
Monday, October 03 2022

ಕರ್ನಾಟಕ

ಕಾವೇರಿ ತಾಲೂಕು ಬೇಡಿಕೆಗೆ ಕಿಡಿ: ಕುಶಾಲನಗರ ಬಂದ್ ಯಶಸ್ವಿ - 1 min read

Photo Credit :

ಕಾವೇರಿ ತಾಲೂಕು ಬೇಡಿಕೆಗೆ ಕಿಡಿ: ಕುಶಾಲನಗರ ಬಂದ್ ಯಶಸ್ವಿ

ಕುಶಾಲನಗರ: ಕುಶಾಲನಗರವು ಕೊಡಗು ಜಿಲ್ಲೆಯಲ್ಲಿಯೇ ಪ್ರಮುಖ ವಾಣಿಜ್ಯ ನಗರ ಶಿಕ್ಷಣ ಮತ್ತು ಕೈಗಾರಿಕೆಗಳ ನೆಲೆಬೀಡು ಆಗಿದೆ. ಜನ ಸಾಂದ್ರತೆ ಹೆಚ್ಚಿರುವ ಕುಶಾಲ ನಗರ ತಾಲೂಕು ಕೇಂದ್ರವಾಗಿ ಕಾವೇರಿ ತಾಲೂಕಾಗಬೇಕೆಂಬ ಬಹುದಿನಗಳ ಬೇಡಿಕೆಯ ಮುಂದುವರಿದ ಭಾಗವಾಗಿ ಶನಿವಾರ ಬೆಳಗ್ಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಕೇವಲ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಸಾಧಾರಣವಾಗಿತ್ತು. ಆದರೆ ಆ ಬಸ್ಸುಗಳಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ನೆರೆಯ ಮೈಸೂರು ಹಾಸನ ಜಿಲ್ಲೆಯ ದಿನ ನಿತ್ಯ ಪ್ಯಾಪಾರ ವ್ಯವಹಾರ ಮಾಡುತ್ತಿರುವ ವ್ಯಾಪಾರಿಗಳು ಬಂದ್ ನ ಪೂರ್ವ ಸೂಚನೆ ಅರಿತು ಸಂಪೂರ್ಣವಾಗಿ ಬಂದ್ ಯಶಸ್ವಿಯಾಗುವಂತಹ ರೀತಿಯಲ್ಲಿ ಅವರೂ ಕೂಡ ವ್ಯಾಪಾರ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದರು. ಶಾಲಾ ಕಾಲೇಜುಗಳು ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ವಿದ್ಯಾರ್ಥಿಗಳಿಲ್ಲದೆ ಬಹುತೇಕ ಶಾಲೆಗಳು ಸ್ವಯಂ ಘೋಷಿತರಾಗಿ ಮುಚ್ಚಿದ್ದವು.

ಪ್ರಸ್ತಾವಿತ ಕುಶಾಲನಗರ ತಾಲೂಕು ಹಾಸನ, ಮೈಸೂರು ಪ್ರದೇಶಗಳಿಗೆ ಮಂಗಳೂರು ಕಡೆಗೂ ರಾಷ್ಟೀಯ ಹೆದ್ದಾರಿಯಾಗಿರುವ ಪರಿಣಾಮ ಪ್ರವಾಸಿಗರ ಹಾಗು ಅಂತರ್ ರಾಜ್ಯ ಖಾಸಗಿ ಬಸ್ ಗಳ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ಅಡಚಣೆಯಾಗಿದೆ.

ಕಾವೇರಿ ತಾಲೂಕು ಹೋರಾಟದ ಕೇಂದ್ರೀಯ ಮತ್ತು ಸ್ಥಾನೀಯ ಸಮಿತಿಗಳ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಮೈಸೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿ ರಸ್ಥೆಯಲ್ಲೇ ಬೆಳಗ್ಗೆ 10.30ರಿಂದ ಸುಮಾರು 1 ಗಂಟೆಗಳ ಕಾಲ ರಸ್ತೆ ತಡೆದು ಧರಣಿ ನಡೆಸಿದರು. ತಾಲೂಕು ಬೇಡಿಕೆಯ ಘೋಷಣೆಗಳನ್ನು ಕೂಗುತ್ತಾ ಹರತಾಳ ಆಚರಿಸಿದರು. ಈ ಸಂದರ್ಭ ರಸ್ತೆ ತಡೆ ಪರಿಣಾಮ ವಾಹನಗಳು ಸುಮಾರು 1 ಗಂಟೆಗಳ ಕಾಲ ಎರಡೂ ಬದಿಗಳಲ್ಲಿ ನಾಲ್ಕು ಕಿ.ಮಿ.ವರೆಗೆ ವಾಹನಗಳು ನಿಂತು ಸಂಚಾರ ಸ್ಥಗಿತವಾಗಿತ್ತು. ಒಂದು ಗಂಟೆಯ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು ರಸ್ತೆ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಧ್ಯಾಹ್ನ ಮತ್ತೆ ಕುಶಾಲನಗರ ಫೀಲ್ಡ್ ಮಾರ್ಶಲ್ ವೃತ್ತದಲ್ಲಿ ಸಭೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರೀಯ ಹೋರಾಟ ಸಮಿತಿಯ ಅಧ್ಯಕ್ಷ ವಿ.ಪಿ ಶಶಿಧರ್ ನೇತೃತ್ವದಲ್ಲಿ 2ನೇ ಹಂತದ ರಸ್ತೆಯಲ್ಲಿ ವಾಹನಗಳನ್ನು ತಡೆದು, ಮಾನವಸರಪಳಿ ನಿರ್ಮಿಸಿ ಧರಣಿ ಪ್ರತಿಭಟನೆ ನಡೆಸಿದರು. ತಾಲೂಕು ಬೇಡಿಕೆಯ ಘೋಷಣೆಗಳು ಪ್ರತಿಭಟನಾಕಾರರಿಂದ ಪ್ರತಿ ಧ್ವನಿಸುತ್ತಿದ್ದವು.

See also  ಕೆಆರ್ ಎಸ್ ಜಲಾಶಯ ಭರ್ತಿಗೆ ಒಂದೇ ಅಡಿ ಬಾಕಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು