News Kannada
Thursday, October 06 2022

ಕರ್ನಾಟಕ

ದಂಪತಿಯ ಕತ್ತು ಕೊಯ್ದು ದರೋಡೆ: ಪತ್ನಿ ಸಾವು, ಪತಿಗೆ ಗಂಭೀರ ಗಾಯ - 1 min read

Photo Credit :

ದಂಪತಿಯ ಕತ್ತು ಕೊಯ್ದು ದರೋಡೆ: ಪತ್ನಿ ಸಾವು, ಪತಿಗೆ ಗಂಭೀರ ಗಾಯ

ಕಾಸರಗೋಡು: ಮನೆಗೆ ನುಗ್ಗಿದ ದರೋಡೆಕೋರರು ನಿವೃತ್ತ ಶಿಕ್ಷಕ ದಂಪತಿಯ ಕತ್ತು ಕೊಯ್ದು ದರೋಡೆಗೆ ಯತ್ನಿಸಿದ ಘಟನೆ ಚೀಮೇನಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಶಿಕ್ಷಕಿ ಪಿ.ವಿ.ಜಾನಕಿ ( ೬೫ ) ಸಾವನ್ನಪ್ಪಿದ್ದು ಗಂಭೀರ ಸ್ಥಿತಿಯಲ್ಲಿದ್ದ ಪತಿ ಕೃಷ್ಣನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರನ್ನು ಕಟ್ಟಿ ಹಾಕಿ ಮಾರಾಕಾಸ್ತ್ರದಿಂದ ಕತ್ತು ಕೊಯ್ದ ಬಳಿಕ ದರೋಡೆ ನಡೆಸಲಾಗಿದೆ. ಮೂವರ ತಂಡ ಈ ಕೃತ್ಯ ನಡೆಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ದಂಪತಿ ಮೇಲೆ ಹಲ್ಲೆ ನಡೆಸಿದ ತಂಡವು ಜಾನಕಿ ದೇಹದಲ್ಲಿದ್ದ ಚಿನ್ನದ ಸರ, ಮನೆಯಲ್ಲಿದ್ದ ಚಿನ್ನಾಭರಣ , ನಗದು ದರೋಡೆ ಕಳವು ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು , ಬೆರಳಚ್ಚು ತಜ್ಞರು , ಶ್ವಾನ ದಳ ಮಾಹಿತಿ ಕಲೆ ಹಾಕುತ್ತಿದ್ದು , ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದು ಬರಬೇಕಿದೆ.

See also  ಅತ್ತಿಗೆರೆಯಲ್ಲಿ 14ನೇ ಶತಮಾನದ ತಾಮ್ರ ಶಾಸನ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು