News Kannada
Wednesday, September 28 2022

ಕರ್ನಾಟಕ

ಪರೇಶ ಯಾವುದೇ ಸಂಘಟನೆಯಲ್ಲೂ ಗುರುತಿಸಿಕೊಂಡಿಲ್ಲ: ತಂದೆ ಕಮಲಾಕರ್ ಸ್ಪಷ್ಟನೆ - 1 min read

Photo Credit :

ಪರೇಶ ಯಾವುದೇ ಸಂಘಟನೆಯಲ್ಲೂ ಗುರುತಿಸಿಕೊಂಡಿಲ್ಲ: ತಂದೆ ಕಮಲಾಕರ್ ಸ್ಪಷ್ಟನೆ

ಕಾರವಾರ: ಕಳೆದ ಕೆಲವು ದಿನಗಳ ಹಿಂದೆ ಹತ್ಯೆಯಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಯುವಕ ಪರೇಶ ಮೇಸ್ತಾ ಸಹಜ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಇದನ್ನು ತಿರುಚಲಾಗಿದೆ. ನನ್ನ ಮಗನ ಹತ್ಯೆಯಾಗಿದೆ, ಸಾವಿನ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಪರೇಶ ಮೇಸ್ತಾನ ತಂದೆ ಕಮಲಾಕರ್ ಆಗ್ರಹಿಸಿದ್ದಾರೆ.

ಹೊನ್ನಾವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಾವು ಹಿಂದೂಗಳೇ ಆದರೆ ಯಾವ ಸಂಘಟನೆ ಜೊತೆ ಪರೇಶ ಇರಲಿಲ್ಲ ಎಂದು ಕಮಲಾಕರ್ ಸ್ಪಷ್ಟಪಡಿಸಿದರು.

ಡಿ.೬ಕ್ಕೆ ದೇವಸ್ಥಾನಕ್ಕೆ ಹೋಗುತ್ತೀನಿ ಎಂದು ತನ್ನ ತಾಯಿ ಹತ್ತಿರ ಹೇಳಿಕೊಂಡು ತೆರಳಿದ್ದಾನೆ. ಸಂಜೆ ವೇಳೆ ಮಗ ಮನೆಗೆ ಬಂದ ಮೇಲೆ ಕೇಳಿದೆ ಪರೇಶ ಬಂದಿದ್ದಾನಾ ಎಂದು ಕೇಳಿದಾಗ ಇಲ್ಲ ಎಂದಳು. ರಾತ್ರಿವರೆಗೂ ಪತ್ತೆ ಇರಲಿಲ್ಲ. ಬಳಿಕ ಪೊಲೀಸರಿಗೆ ದೂರು ಸಹ ನೀಡಿದ್ದೆ ಎಂದರು.

ಹಳದಿ ಟೀ ಶರ್ಟ್ ಹಾಕಿರುವ ಯುವಕನೊಬ್ಬ ಶವ ಶೆಟ್ಟಿಕೆರೆ ಹತ್ತಿರ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು. ನಮ್ಮ ಸಮಾಜದವರೆಲ್ಲ ಬೋಟು ತಗೊಂಡು ಎಲ್ಲಾ ಹುಡುಕಿದ್ವು. ದಡಕ್ಕೆ ಶವ ತಂದು ನೋಡಿದಾಗ ಪರೇಶ ಎಂದು ತಿಳಿತು. ಮರಣೋತ್ತರ ಪರೀಕ್ಷೆ ಗೆ ಕೊಂಡೋಯ್ಯುವಾಗ ಪರೇಶನ ದೇಹವೆಲ್ಲ ಕಪ್ಪಾಗಿತ್ತು.

ಮೀನುಗಾರನಾಗಿದ್ದ ಅವನಿಗೆ ಚೆನ್ನಾಗಿ ಈಜಲು ಬರುತ್ತಿತ್ತು. ಅಂಥ ವ್ಯಕ್ತಿ ಈಜು ಬರದೆ ಕೆರೆಯಲ್ಲಿ ಮುಳುಗಿ ಸತ್ತ ಎಂದರೆ ನಂಬಲು ಆಗುತ್ತಿಲ್ಲ. ಸಚಿವ ಆರ್. ವಿ. ದೇಶಪಾಂಡೆ ಅವರು ಪರಿಹಾರವಾಗಿ ನೀಡಿದ 1 ಲಕ್ಷ ರು ನಮಗೆ ಬೇಡ ಎಂದು ಕಮಲಾಕರ್ ಹೇಳಿದ್ದು, ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.

 

See also  ರಾಜ್ಯದಲ್ಲಿ ಪ್ರಚಂಡ ಬಹುಮತದೊಂದಿಗೆ ಬಿಜೆಪಿ ಜಯ: ಅಮಿತ್ ಶಾ ವಿಶ್ವಾಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು