News Kannada
Wednesday, September 28 2022

ಕರ್ನಾಟಕ

ಅಂಗನವಾಡಿಯಲ್ಲಿ ಮಗುವಿಗೆ ವಿಷಕಾರಿ ಜಂತು ಹುಳು ಕಚ್ಚಿ ಸಾವು - 1 min read

Photo Credit :

ಅಂಗನವಾಡಿಯಲ್ಲಿ ಮಗುವಿಗೆ ವಿಷಕಾರಿ ಜಂತು ಹುಳು ಕಚ್ಚಿ ಸಾವು

ಮೂಡಿಗೆರೆ: ಅಂಗನವಾಡಿಯಲ್ಲಿದ್ದ ಮಗುವಿಗೆ ಚೇಳಿನಂತಹ ವಿಷಪೂರಿತ ಜಂತು ಹುಳುವೊಂದು ಕಚ್ಚಿದ್ದರಿಂದ ಮಗು ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಿಳಗುಳ ಗ್ರಾಮದಲ್ಲಿ ನಡೆದಿದೆ.

ಬಿಳಗುಳ ನಿವಾಸಿ ಜಗದೀಶ್ ಹಾಗೂ ಸವಿತಾ ದಂಪತಿ 5 ವರ್ಷದ ಹೆಣ್ಣು ಮಗು ಧನ್ಯಶ್ರಿ ಬಿಳಗುಳದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ತೆರಳಿದೆ. ಮಧ್ಯಾಹ್ನ 12.30ರ ವೇಳೆ ಇತರ ಮಕ್ಕಳಂತೆ ಆಡುತ್ತಾ ಶಿಕ್ಷಕಿಯ ಪಾಠ ಕೇಳುತ್ತಿದ್ದ. ಮಗುವಿಗೆ ಇದ್ದಕ್ಕಿದಂತೆ ಅಂಗನವಾಡಿ ಕಟ್ಟಡದ ಗೋಡೆಯ ರಂಧ್ರದಿಂದ ನುಸುಳಿ ಬಂದ ಜಂತು ಹುಳುವೊಂದು ಮಗುವಿನ ಬಲಗೈಗೆ ಕಚ್ಚಿದೆ. ಕೂಡಲೇ ಮಗು ಕಿರುಚಾಡಿದಾಗ ಅಲ್ಲೇ ಪಾಠ ಮಾಡುತ್ತಿದ್ದ ಅಂಗನವಾಡಿ ಶಿಕ್ಷಕಿ ಹೂವಮ್ಮ ಅವರು ಮಗುವಿಗೆ ಕಚ್ಚಿದ ಹುಳುವನ್ನು ದೂರ ಸರಿಸಿ ಗಾಯವಾದ ಕೈಗೆ ಹರಿಸಿಣ ಪುಡಿ ಹಚ್ಚಿದ್ದಾರೆ.

ಕ್ಷಣ ಮಾತ್ರದಲ್ಲಿ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿದ ಶಿಕ್ಷಕಿ ಹೂವಮ್ಮ ಮಗುವನ್ನು ಕೂಡಲೇ ಸರಕಾರಿ ಎಂಜಿಎಂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕೂಡಲೇ ಕರೆದೊಯ್ಯವಂತೆ ತಿಳಿಸಿದ್ದಾರೆ. ನಂತರ ಮಗುವನ್ನು ಪಟ್ಟಣದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಯ ವೈದ್ಯರು ಬೇರೆಡೆ ಕರೆದೊಯ್ಯವಂತೆ ತಿಳಿಸಿದಾಗ, ಆಂಬುಲೆನ್ಸ್ ನಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ.

See also  ಸಾಲ ವಿತರಣೆ ಗೊಂದಲ ನಿವಾರಣೆಗೆ ಕೊಡುಗು ಜಿಲ್ಲಾಧಿಕಾರಿ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

179
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು