News Kannada
Sunday, September 25 2022

ಕರ್ನಾಟಕ

ದುರ್ಗದಹಳ್ಳಿ ದೇವಸ್ಥಾನದ ವಿಗ್ರಹ ಚೋರರ ಸೆರೆ - 1 min read

Photo Credit :

ದುರ್ಗದಹಳ್ಳಿ ದೇವಸ್ಥಾನದ ವಿಗ್ರಹ ಚೋರರ ಸೆರೆ

ಬಣಕಲ್: ಕಳೆದ ಅಕ್ಟೋಬರ್ ನಲ್ಲಿ ಸುಂಕಸಾಲೆ ಬಳಿಯ ಐತಿಹಾಸಿಕ ದುರ್ಗದಹಳ್ಳಿ ಶ್ರೀಕಾಲಬೈರವೇಶ್ವರ ದೇವಸ್ಥಾನದಲ್ಲಿ ಎರಡು ಬಾರಿ ವಿವಿಧ ವಿಗ್ರಹಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮಂದಿ ವಿಗ್ರಹ ಚೋರರನ್ನು ಬಾಳೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಯುವಕರಾದ ನಾಗರಭಾವಿಯ ಮನೋಜ್ ಆಲಿಯಾಸ್ ಮನು, ಮಲ್ಲತಹಳ್ಳಿಯ ವೆಂಕಟಚಲ ಆಲಿಯಾಸ್ ವೆಂಕಟೇಶ್ ಹಾಗೂ ಮಾಗಡಿ ಸಮೀಪದ ದೊಡ್ಡ ಸೋಮನಹಳ್ಳಿಯ ಗಿರೀಶ್ ಆಲಿಯಾಸ್ ಗಿರಿ ಬಂಧಿತ ಆರೋಪಿಗಳು. ಅವರಿಂದ ಕಳವು ಮಾಡಿದ ವಿಗ್ರಹಗಳನ್ನು ಪೊಲೀಸರು ಬೆಂಗಳೂರಿಗೆ ಹೋಗಿ ವಶಪಡಿಸಿಕೊಂಡಿದ್ದಾರೆ. ದೇವಸ್ಥಾನದ ಕಳಶ ಮಾತ್ರ ಕಳ್ಳರು ಶ್ರೀರಂಗಪಟ್ಟಣ ಸಮೀಪದ ಕಾವೇರಿ ನದಿಗೆ ಎಸೆದಿದ್ದಾರೆ. ಅಲ್ಲಿ ಅದರ ಶೋಧ ಕಾರ್ಯವನ್ನು ಮಾಡಿದ್ದು ಕಳಶ ಪತ್ತೆಯಾಗಿಲ್ಲ. ಸ್ಥಳೀಯ ಪೊಲೀಸರ ಸಹಾಯ ಕೋರಿದ್ದು ಅದರ ಶೋಧಕಾರ್ಯ ನಡೆಯುತ್ತಿದೆ. 3 ಮಂದಿ ವಿಗ್ರಹ ಚೋರರನ್ನು ಬಂಧಿಸಿ ದೇವಸ್ಥಾನದ ಸ್ಥಳ ಮಹಜರು ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪುರಾತನ ಐತಿಹಾಸಿಕ ದುರ್ಗದಹಳ್ಳಿಯ ದೇವಸ್ಥಾನದಲ್ಲಿ ಗುರಾಣಿ, ಪಂಜುರ್ಲಿ ಮತ್ತು ದೇವರ ವಿಗ್ರಹವನ್ನು ಮೊದಲ ಬಾರಿಗೆ ಕಳವು ಮಾಡಿದ ಕಳ್ಳರು ಯಾವುದೇ ಸಾಕ್ಷ್ಯ ಬಿಡದೇ ಪರಾರಿಯಾಗಿದ್ದರು. ಬಾಳೂರು ಪೊಲೀಸರಿಗೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅದರ ನಂತರ ಕೆಲವೇ ದಿನಗಳಲ್ಲಿ ಎರಡನೇ ಬಾರಿಗೆ ದೇವಸ್ಥಾನದ ಕಳಶವನ್ನು ಕಳವು ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಬಾಳೂರು ಪೊಲೀಸರು 2ನೇ ಬಾರಿಯ ಕಳವು ಜಾಡನ್ನು ಹಿಡಿದು ದೇವಸ್ಥಾನದಲ್ಲಿ ತೀವ್ರ ಶೋಧ ನಡೆಸಿದಾಗ ವಾಹನದ ವೀಲ್ ಅಲೈಮೆಂಟ್ ಮಾಡಿದ್ದ ಬೆಂಗಳೂರಿನ ಗ್ಯಾರೇಜ್ ಒಂದರ ಚೀಟಿಯೊಂದು ಕಳ್ಳರು ದೇವಸ್ಥಾನದ ಮೇಲೇರುವಾಗ ಸಿಕ್ಕಿದ್ದು ಕಳ್ಳತನ ಮಾಡಿದ ಕದೀಮರನ್ನು ಸೆರೆ ಹಿಡಿಯಲು ಸಾಧ್ಯವಾಯಿತು.

See also  ಕ್ಷುಲ್ಲಕ ಕಾರಣಕ್ಕೆ ಮಳವಳ್ಳಿಯಲ್ಲಿ ಒಂದು ಹೆಣ ಬಿತ್ತು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

179
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು