News Kannada
Saturday, October 01 2022

ಕರ್ನಾಟಕ

ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಊರೊಮರ್ ಆಚರಣೆ - 1 min read

Photo Credit :

ಮಡಿಕೇರಿ ಕೊಡವ ಸಮಾಜದಿಂದ ಪುತ್ತರಿ ಊರೊಮರ್ ಆಚರಣೆ

ಮಡಿಕೇರಿ: ಕಾವೇರಿ ಮಾತೆಯನ್ನು ಕೊಡವ ಜನಾಂಗದವರು ಕುಲದೇವಿಯಾಗಿ ಆರಾಧಿಸಿಕೊಂಡು ಬರುತ್ತಿರುವುದು ಪರಂಪರಾಗತವಾಗಿದೆ. ತಲಕಾವೇರಿ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡವ ಜನಾಂಗದವರಿಗೆ ವಿಶೇಷ ಪ್ರಾತಿನಿಧ್ಯವಿದ್ದು, ಈ ಪರಂಪರೆಯನ್ನು ಮತ್ತೆ ಮುಂದುವರಿಸುವ ನಿಟ್ಟಿನಲ್ಲಿ ಮಡಿಕೇರಿ ಕೊಡವ ಸಮಾಜ ಚಿಂತನೆ ನಡೆಸಿದೆ ಎಂದು ಸಮಾಜದ ಅಧ್ಯಕ್ಷ ಕೊಂಗಂಡ ಎಸ್. ದೇವಯ್ಯ ಅವರು ಬಹಿರಂಗಪಡಿಸಿದರು.

ಮಡಿಕೇರಿ ಕೊಡವ ಸಮಾಜದ ವತಿಯಿಂದ ನಡೆದ ಪುತ್ತರಿ ಊರೊಮರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಮಂಡೀರ ಮಣವಟ್ಟಿರ ಹಾಗೂ ಪಟ್ಟಮಾಡ ಕುಟುಂಬಸ್ಥರೊಂದಿಗೆ ಈ ಬಗ್ಗೆ ಮಾತುಕತೆ ನಡಿದಿದೆ. ಪ್ರಸ್ತುತ ತಕ್ಕಾಮೆಯನ್ನು ಗೌಡ ಮನೆತನದವರು ನಿರ್ವಹಿಸಿಕೊಂಡು ಬರುತ್ತಿದ್ದು, ಈ ಬಗ್ಗೆ ಪ್ರಸ್ತಾಪಿಸುವುದಿಲ್ಲ. ಆದರೆ ತಲಕಾವೇರಿ-ಭಾಗಮಂಡಲದಲ್ಲಿ ಪರಂಪರಾಗತವಾಗಿ ಸೇವೆ ಸಲ್ಲಿಸುವ ಅವಕಾಶ ಹೊಂದಿರುವ ಈ ಮೂರು ಕುಟುಂಬದವರಿಗೆ ಕ್ಷೇತ್ರದಲ್ಲಿ ವಿಶೇಷ ಮನ್ನಣೆ ಸಿಗಬೇಕು ಎಂಬುದು ಸಮಾಜದ ನಿಲುವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದಾಗಿ ದೇವಯ್ಯ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ, ಆಂಧ್ರ, ಕೇರಳ, ತಮಿಳುನಾಡು ಸೇರಿದಂತೆ ವಿವಿಧೆಡೆಗಳ ಜನರು ಕೊಡಗಿನಲ್ಲಿ ಜಾಗ ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಇದು ಏಕೆ ಎಂಬುವುದನ್ನು ವಿಮರ್ಶಿಸುವುದರೊಂದಿಗೆ ಜಿಲ್ಲೆಯ ಜನರು ತಮ್ಮ ತಮ್ಮ ಭೂಮಿಯ ಪ್ರಾಮುಖ್ಯತೆಯನ್ನು ಅರಿತು ಉಳಿಸಿಕೊಳ್ಳಬೇಕೆಂದರು.

ಕೊಡವ ಸಮಾಜಗಳು ಕೇವಲ ಕಟ್ಟಡದ ಅಭಿವೃದ್ಧಿ, ವ್ಯವಹಾರಿಕ ಚಿಂತನೆಗಿಂತ ಜನಾಂಗಕ್ಕೆ ಪೂರಕವಾಗಿ ಅಗತ್ಯವಿರುವ ವಿಚಾರಗಳ ಬಗ್ಗೆ ಕಾರ್ಯಚಟುವಟಿಕೆ ಹಮ್ಮಿಕೊಳ್ಳಬೇಕಿದೆ. ಸಮಾಜ ಒಂದು ವಿಚಾರದ ಬಗ್ಗೆ ಧ್ವನಿ ಎತ್ತಿದರೆ ಅದಕ್ಕೆ ಮನ್ನಣೆ ಸಿಗಬೇಕು ಎಂಬಂತಹ ಉತ್ತಮ ಕಾರ್ಯ ಚಟುವಟಿಕೆ ಇಂದಿನ ಅಗತ್ಯವಾಗಿದೆ ಎಂದು ಹರೀಶ್ ಬೋಪಣ್ಣ ಸಲಹೆ ನೀಡಿದರು.

ತಲಕಾವೇರಿ-ಭಾಗಮಂಡಲ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹಲವಾರು ಪ್ರಮುಖರೊಂದಿಗೆ ಚರ್ಚಿಸಿ ಸ್ಪಷ್ಟ ನಿಲುವು ತೆಗೆದುಕೊಳ್ಳಲಾಗುವುದು. ಈಗಾಗಲೇ ಹಲವರ ಅಭಿಪ್ರಾಯ ಪಡೆಯಲಾಗಿದೆ. ಉಸ್ತುವಾರಿ ಸಚಿವ ಸೀತಾರಾಂ ಅವರೊಂದಿಗೆ ಚರ್ಚಿಸಿದ ಪರಿಣಾಮವಾಗಿ ಅವರು ವಿಶೇಷ ಆಸಕ್ತಿ ತೋರಿ ರೂ. 20 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಸ್ಪಲ್ಪ ಗೊಂದಲ ಸೃಷ್ಟಿಯಾಗಿದ್ದು, ತಲಕಾವೇರಿ ಕ್ಷೇತ್ರದ ಪಾವಿತ್ರ್ಯತೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಎಂದು ಹರೀಶ್ ಬೋಪಣ್ಣ ಸ್ಪಷ್ಟಪಡಿಸಿದರು.

ತಲಕಾವೇರಿಯಲ್ಲಿ ಅಗತ್ಯತೆ ಬಿಟ್ಟು ಯಾವುದೇ ಕಾಮಗಾರಿ ನಡೆಯದು. ಇದು ಪ್ರವಾಸಿ ಕೇಂದ್ರವೂ ಆಗದು. ಆದರೆ ಭಾಗಮಂಡಲದವರೆಗೆ ಉತ್ತಮ ರಸ್ತೆ, ಅಗತ್ಯ ಕಾಮಗಾರಿಗಳನ್ನು ಮಾತ್ರ ನಡೆಸಲಾಗುವುದು. ಈ ಬಗ್ಗೆ ಪ್ರಮುಖರ ಸಲಹೆಯನ್ನು ಪಡೆಯಲಾಗುವುದು ಎಂದರು.

ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಕೊಡವರ ನೈಜ ಇತಿಹಾಸವನ್ನು ಅರಿತು ಇದಕ್ಕೆ ಚ್ಯುತಿ ಬಾರದಂತೆ ಜನಾಂಗದವರು ಎಚ್ಚರ ವಹಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷರಾದ ಮಣವಟ್ಟಿರ ಚಿಣ್ಣಪ್ಪ, ಕಾರ್ಯದರ್ಶಿ ಅರೆಯಡ ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

See also  ಮಾರ್ಜಿನ್ ಫ್ರೀ ಮಾರ್ಕೆಟ್ ನಲ್ಲಿ ಕಳವು: ಮೂವರ ಬಂಧನ

ಕಾರ್ಯಕ್ರಮದ ಪ್ರಯುಕ್ತ ತಳಿಯತಕ್ಕೆ ಬೊಳಕ್, ದುಡಿಕೊಟ್ಟ್ ಪಾಟ್, ಒಡ್ಡೋಲಗ ಸಹಿತವಾಗಿ ನಗರದಲ್ಲಿರುವ ಮಂದ್ಗೆ ತೆರಳಲಾಯಿತು. ಅಲ್ಲಿ ಕೋಲಾಟ್, ಉಮ್ಮತ್ತಾಟ್, ಬೊಳಕಾಟ್ ನಂತಹ ಜನಪದ ನೃತ್ಯದ ಮೂಲಕ ಪುತ್ತರಿ ಊರೊಮರ್ ಗೆ ತೆರೆಬಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು