News Kannada
Tuesday, September 27 2022

ಕರ್ನಾಟಕ

ಹಾಲಿನ ಟ್ಯಾಂಕರ್ ಪಲ್ಟಿ: ಮನೆಮನೆಯಲ್ಲಿ ಹಾಲಿನಾಭಿಷೇಕ! - 1 min read

Photo Credit :

ಹಾಲಿನ ಟ್ಯಾಂಕರ್ ಪಲ್ಟಿ: ಮನೆಮನೆಯಲ್ಲಿ ಹಾಲಿನಾಭಿಷೇಕ!

ಚಿಕ್ಕಬಳ್ಳಾಪುರ, ವಾಪಸಂಧ್ರ ಬ್ರಿಡ್ಜ್: ಚಿಕ್ಕಬಳ್ಳಾಪುರದಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾದ ಪರಿಣಾಮ ರಸ್ತೆ ಪಾಲಾಗುತ್ತಿದ್ದ ಹಾಲನ್ನು ಜನರು ತುಂಬಿಸಿಕೊಳ್ಳಲು ಮುಗಿಬಿದ್ದ ಘಟನೆ ನಡೆದಿದೆ.  ಸಾದಲಿ ಗ್ರಾಮದ ಹಾಲು ಶೀತಲೀಕರಣ ಕೇಂದ್ರದಿಂದ ಹಾಲನ್ನು ಯಲಹಂಕದ ಕೆಎಂಎಫ್ ನ ಮದರ್ ಡೈರಿಗೆ ಟ್ಯಾಂಕರ್ ಮೂಲಕ ಸಾಗಿಸಲಾಗುತ್ತಿತ್ತು.

ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ವಾಪಸಂದ್ರ ಸೇತುವೆ ಕೆಳಭಾಗದ ತಿರುವಿನಲ್ಲಿ ಉರುಳಿಬಿದ್ದಿದೆ. ಉರುಳಿ ಬಿದ್ದ ಟ್ಯಾಂಕರ್ ನಿಂದ ಹಾಲೆಲ್ಲಾ ರಸ್ತೆ ಪಾಲಾಗುತ್ತಿತ್ತು. ಈ ವೇಳೆ ಸ್ಥಳೀಯರು ಹಾಲು ತುಂಬಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ.

ಪೊಲೀಸರು ರಸ್ತೆ ಪಾಲಾಗುತ್ತಿದ್ದ ಹಾಲನ್ನು ಜನರು ತುಂಬಿಸಿಕೊಳ್ಳಲಿ ಎಂದು ಸ್ವಲ್ಪ ಹೊತ್ತು ಸಹಕಾರ ನೀಡಿದರು. ಆದರೆ ನಂತರ ಸ್ಥಳೀಯರು ಹಾಲು ತುಂಬಿಸಿಕೊಳ್ಳಲು ಮುಗಿ ಬಿದ್ದಾಗ ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

ಘಟನೆಯಲ್ಲಿ ಟ್ಯಾಂಕರ್ ನ ಚಾಲಕ ಕ್ಲೀನರ್ ಸೇರಿದಂತೆ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯಕ್ಕೆ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

See also  ಮಂಟಪದಲ್ಲೇ ಮದುಮಗಳಿಗೆ ಇರಿದ ಭಗ್ನಪ್ರೇಮಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು