News Kannada
Tuesday, October 04 2022

ಕರ್ನಾಟಕ

ಮುಸಲ್ಮಾನರ ಹಿತ ಕಾಯಲು ವಕ್ಫ್ ಕೌನ್ಸಿಲ್ ಬದ್ಧ : ಷಂಶುದ್ದೀನ್ ಭರವಸೆ - 1 min read

Photo Credit :

ಮುಸಲ್ಮಾನರ ಹಿತ ಕಾಯಲು ವಕ್ಫ್ ಕೌನ್ಸಿಲ್ ಬದ್ಧ : ಷಂಶುದ್ದೀನ್ ಭರವಸೆ

ಮಡಿಕೇರಿ: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸ್ಥಾಪಿತಗೊಂಡಿರುವ ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಮುಸ್ಲಿಂ ಸಮುದಾಯದ ಹಿತ ಕಾಯಲು ಬದ್ಧವಾಗಿದೆ ಎಂದು ಕೌನ್ಸಿಲ್ ಸದಸ್ಯರಾದ ಸುಳ್ಯದ ಎಸ್.ಷಂಶುದ್ದೀನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ವಕ್ಫ್ ಕೌನ್ಸಿಲ್ ನ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಅನುಷ್ಠಾನ, ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಲು ದಕ್ಷಿಣ ಕನ್ನಡ ಜಿಲ್ಲೆ, ಕೊಡಗು, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳ ಉಸ್ತುವಾರಿಯಾಗಿ ನೇಮಿಸಿ ನನಗೆ ಹೆಚ್ಚಿನ ಜವಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಕೌನ್ಸಿಲ್ ಕೇಂದ್ರ ಸರಕಾರದ ವಕ್ಫ್ ಕೌನ್ಸಿಲ್ ಮಾದರಿಯಲ್ಲಿ 1992 ರಲ್ಲಿ ಸ್ಥಾಪಿತಗೊಂಡಿದ್ದು, ಕರ್ನಾಟಕ ರಾಜ್ಯದಲ್ಲಿ ಬಿಟ್ಟರೆ ಉಳಿದ ಯಾವುದೇ ರಾಜ್ಯಗಳಲ್ಲೂ ವಕ್ಫ್ ಕೌನ್ಸಿಲ್ ರಚನೆಯಾಗಿಲ್ಲ. 13 ಸದಸ್ಯರುಗಳ ವಕ್ಫ್ ಪರಿಷತ್ತನ್ನು ರಚಿಸಲಾಗಿದ್ದು, ಕೌನ್ಸಿಲ್ ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮತ್ತು ವಕ್ಫ್ ಸಚಿವರಾದ ತನ್ವೀರ್ ಸೇಠ್ ಅವರು ಅಧ್ಯಕ್ಷರಾಗಿದ್ದಾರೆ. ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರನ್ನು ಜಿಲ್ಲಾ ವಕ್ಫ್ ಸಮಿತಿಗೆ ಖಾಯಂ ಆಹ್ವಾನಿತರನ್ನಾಗಿ ಮಾಡಲಾಗಿದೆ ಎಂದರು.
ವಕ್ಫ್ ಬೋರ್ಡ್ ಮೂಲಕ ವಕ್ಫ್ ನಲ್ಲಿ ನೋಂದಾವಣಿಗೊಂಡ ಮಸೀದಿ, ಮದರಸ, ದಫನ ಭೂಮಿ ಹಾಗೂ ದರ್ಗಾಗಳ ಸಂರಕ್ಷಣೆಗೆ ವಕ್ಫ್ ನಿಂದ ಅನುದಾನ ನೀಡಲಾಗುತ್ತದೆ. ನಿಗದಿತ ಅರ್ಜಿ ನಮೂನೆಯಲ್ಲಿ ದಾಖಲೆಗಳೊಂದಿಗೆ ಜಿಲ್ಲಾ ವಕ್ಫ್ ಬೋರ್ಡಿನ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ಷಂಶುದ್ದೀನ್ ತಿಳಿಸಿದರು.

ಪ್ರಸ್ತುತ ವರ್ಷ ದಾಖಲೆ ಪ್ರಮಾಣದ ಅನುದಾನ ಮಂಜೂರಾಗಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿರುವ 1114 ವಕ್ಫ್ ಸಂಸ್ಥೆಗಳ ಮಸೀದಿ, ಮದರಸ ಹಾಗೂ ದರ್ಗಾಗಳ ದುರಸ್ತಿ ಮತ್ತು ಜೀರ್ಣೋದ್ಧಾರಕ್ಕಾಗಿ 22.17 ಕೋಟಿ ರೂ. ಅನುದಾನ ಬೀಡುಗಡೆಯಾಗಿದೆ. ಕೊಡಗು ಜಿಲ್ಲೆಯ 5 ಸಂಸ್ಥೆಗಳಿಗೆ ತಲಾ 2 ಲಕ್ಷ ರೂ. ಗಳಂತೆ ಒಟ್ಟು 10 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.

ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆಗಳು ನಿರ್ಮಿಸುವ ವಾಣಿಜ್ಯ ಸಂಕಿರ್ಣ, ಶಾದಿಮಹಲ್, ಹಾಸ್ಟೆಲ್ ಕಟ್ಟಡ, ಶಿಕ್ಷಣ ಸಂಸ್ಥೆಗಳ ಕಟ್ಟಡ ನಿರ್ಮಿಸಲು ರೂ. 1 ಕೋಟಿಯವರೆಗೆ ಸಾಲ ನೀಡಲಾಗುತ್ತದೆ. ಅಲ್ಲದೆ ಬೃಹತ್ ಯೋಜನೆಗಳಿಗೆ ವರಮಾನದ ವರದಿಯನ್ನು ನೋಡಿಕೊಂಡು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೌನ್ಸಿಲ್ಸ್ ಸದಸ್ಯರ ಪರಿಶೀಲನಾ ವರದಿ ಮತ್ತು ಶಿಫಾರಸ್ಸಿನ ಮೇರೆಗೆ 2 ಕೋಟಿಯವರೇಗೆ ಸಾಲವನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ನ ನಗರಾಧ್ಯಕ್ಷರಾದ ಕೆ.ಯು. ಅಬ್ದುಲ್ ರಜಾಕ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಕೆ.ಎ. ಯಾಕುಬ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹನೀಪ್ ಸಂಪಾಜೆ ಹಾಗೂ ಮೂಡಾ ಮಾಜಿ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್ ಉಪಸ್ಥಿತರಿದ್ದರು.

 

 

See also  ಚಾಮರಾಜನಗರ ಎಸ್‌ಪಿಗೆ ಹೋಂ ಕ್ವಾರಂಟೈನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು