News Kannada
Wednesday, October 05 2022

ಕರ್ನಾಟಕ

ಕಾಸರಗೋಡಿನಲ್ಲಿ ಸಂಭ್ರಮದ ಕ್ರಿಸ್ಮಸ್ - 1 min read

Photo Credit :

ಕಾಸರಗೋಡಿನಲ್ಲಿ ಸಂಭ್ರಮದ ಕ್ರಿಸ್ಮಸ್

ಕಾಸರಗೋಡು: ಯೇಸು ಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ನ್ನು ನಾಡಿನಾದ್ಯಂತ ಕ್ರೈಸ್ತ ಬಾಂಧವರು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಹಬ್ಬದ ಅಂಗವಾಗಿ ಆದಿತ್ಯವಾರ ರಾತ್ರಿ ಕ್ರೈಸ್ತ ದೇವಾಲಯಗಳಲ್ಲಿ ಬಲಿ ಪೂಜೆ ನೆರವೇರಿತು. ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ನಡೆದ ಬಲಿಪೂಜೆಯನ್ನು ರಾಂಚಿ ಸೆಮಿನರಿಯ ಆಡಳಿತ ಮುಖ್ಯಸ್ಥ ವಂದನೀಯ ಜೋನ್ ಕ್ರಾಸ್ತ ನೆರವೇರಿಸಿದರು. ಕಯ್ಯಾರು ಇಗರ್ಜಿಯ ಧರ್ಮಗುರು ವಂದನೀಯ ವಿಕ್ಟರ್ ಡಿ ಸೋಜ , ವಂದನೀಯ ಬೆಂಜಮಿನ್ ಡಿ ಸೋಜ ನೇತೃತ್ವ ನೀಡಿದರು. ಹಬ್ಬದ ಅಂಗವಾಗಿ ಕ್ರಿಸ್ತನ ಜನನದ ಸಂದೇಶ ಸಾರುವ ಕ್ಯಾರಲ್ಸ್ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಕ್ರೈಸ್ತರ ಮನೆಗಳು, ಕಚೇರಿಗಳು, ದೇವಾಲಯಗಳು ವಿದ್ಯುತ್ದೀಪದ ಅಲಂಕಾರಗಳು, ನಕ್ಷತ್ರ ತೋರಣಗಳು, ಗೋದಲಿ, ಕ್ರಿಸ್ಮಸ್ ಟ್ರೀಗಳಿಂದ ಕಂಗೋಳಿಸುತ್ತಿವೆ. ಕ್ರಿಸ್ಮಸ್ ಹಬ್ಬದಂದು ಕ್ರಿಸ್ತನ ಸಂದೇಶದೊಂದಿಗೆ ಮನೆ ಮನೆಗೆ ತೆರಳಿ ಕ್ರಿಸ್ಮಸ್ ಉಡುಗೊರೆ ನೀಡುತ್ತಿದ್ದ ಸಾಂತಾ ನಿಕೋಲಸ್ ನೆನಪಿಗೆ ಸಾಂತಾ ಕ್ಲಾಸ್ ವೇಷಧಾರಿಯಾದ ಕ್ರಿಸ್ಮಸ್ ತಾತಾ ಹಬ್ಬದ ವಿಶೇಷ ಆಕರ್ಷಣೆಯಾಗಿತ್ತು. ಬಾಲಯೇಸುವಿಗೆ ನಮಸ್ಕರಿಸಿ ಕಾಣಿಕೆಗಳನ್ನು ಅರ್ಪಿಸಿ ಕ್ರೈಸ್ತರು ಕ್ರಿಸ್ಮಸ್ ಸಂಭ್ರಮದ ಬಲಿಪೂಜೆಯಲ್ಲಿ ಪಾಲ್ಗೊಂಡರು.

ಸೈಂಟ್ ಲಾರೆನ್ಸ್ ಚಾಪೆಲ್ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕ್ರಿಸ್ಮಸ್ ಆಚರಿಸಲಾಯಿತು. ಚಾಪೆಲ್ ಪರಿಸರದಲ್ಲಿ ಆಕರ್ಷಕ ಗೋದಲಿ ತಯಾರಿಸಿದ್ದು, ಜಾತಿ-ಮತ ಬೇಧವಿಲ್ಲದೆ ಎಲ್ಲ ಸಮುದಾಯದವರು ಗೋದಲಿಯನ್ನು ಸಂದರ್ಶಿಸಿ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗಿಯಾದರು. ಭಾನುವಾರ ರಾತ್ರಿ ದಿವ್ಯ ಬಲಿಪೂಜೆ ನಡೆಯಿತು.

ಚಾಪೆಲ್ನ ನಿರ್ದೇಶಕ ಫಾ. ಮೆಲ್ವಿನ್ ಫೆರ್ನಾಂಡೀಸ್ ನೇತೃತ್ವ ನೀಡಿದರು. ದಿವ್ಯಬಲಿಪೂಜೆಯ ಮುನ್ನ ಕ್ರಿಸ್ಮಸ್ ಸಂದೇಶ ನೀಡುವ ವಿವಿಧ ಭಾಷೆಗಳ ಕ್ಯಾರಲ್ಸ್ ಹಾಡುಗಳು ಹಬ್ಬಕ್ಕೆ ಮೆರುಗು ನೀಡಿದವು. ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಬೇಳ ಶೋಕಮಾತಾ ದೇವಾಲಯ, ಕುಂಬಳೆ ಸಂತ ಮೋನಿಕಾ ದೇವಾಲಯ, ಕಾಸರಗೋಡು ಶೋಕಮಾತಾ ದೇವಾಲಯ,ಉಕ್ಕಿನಡ್ಕ ಸೆಕ್ರೇಡ್ ಹಾರ್ಟ್ ಆಫ್ ಜೀಸಸ್ ಇಗರ್ಜಿ,ಮಂಜೇಶ್ವರ ಅವರ್ ಲೇಡಿ ಆಫ್ ಮೆರ್ಸಿ, ನಾರಂಪಾಡಿ ಜೋನ್ ದಿ ಬ್ರಿಟ್ಟೋ, ಕೊಲ್ಲಂಗಾನ,. ವರ್ಕಾಡಿ ಇಗರ್ಜಿಯಲ್ಲಿ ಬಲಿಪೂಜೆ ಹಾಗೂ ಕ್ಯಾರಲ್ಸ್ , ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು.

 

See also  ಗಂಜಿಗಟ್ಟಿ ಗ್ರಾಮದ ಮೃತ ಬಾಲಕಿ ಶ್ರೀದೇವಿ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು