News Kannada
Friday, September 30 2022

ಕರ್ನಾಟಕ

ಅಂಗಳದಲ್ಲಿ ಆಟವಾಡುತ್ತಿದ್ದ 4ವರ್ಷದ ಬಾಲಕಿ ಹೊಳೆಗೆ ಬಿದ್ದು ಸಾವು - 1 min read

Photo Credit :

ಅಂಗಳದಲ್ಲಿ ಆಟವಾಡುತ್ತಿದ್ದ 4ವರ್ಷದ ಬಾಲಕಿ ಹೊಳೆಗೆ ಬಿದ್ದು ಸಾವು

ಕಾಸರಗೋಡು: ಹೊಳೆಗೆ ಬಿದ್ದು ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ವಿದ್ಯಾನಗರ ಠಾಣಾ ವ್ಯಾಪ್ತಿಯ ಪಾಡಿ ಚೇಳಕ್ಕರ ದಲ್ಲಿ ನಡೆದಿದೆ.

ಮುನ್ನಾಡ್ ನ ಕಮಲಾಕ್ಷ ರವರ ಪುತ್ರಿ ಸ್ವಾತಿ ಮೃತಪಟ್ಟ ಬಾಲಕಿ. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಸಮೀಪದ ಹೊಳೆಬದಿಗೆ ತೆರಳಿದ್ದು ಈ ಸಂದರ್ಭದಲ್ಲಿ ದುರಂತ ನಡೆದಿದೆ. ಕ್ರಿಸ್ ಮಸ್ ರಜೆಯ ಹಿನ್ನೆಲೆ ಬಾಲಕಿ ಪಾಡಿಯಲ್ಲಿರುವ ಅಜ್ಜಿ ಮನೆಗೆ ಬಂದಿದ್ದಾಳೆ. ಮಕ್ಕಳ ಜೊತೆ ಆಟವಾಡುತ್ತಿದ್ದ ಸ್ವಾತಿ ಬಳಿಕ ಹೊಳೆ ಬದಿಗೆ ತೆರಳಿದ್ದಳು ಎನ್ನಲಾಗಿದೆ.

ಈಕೆ ಜೊತೆಗಿದ್ದ ಇತರ ಮಕ್ಕಳು ಬೊಬ್ಬೆ ಹಾಕಿದಾಗ ದಾವಿಸಿ ಬಂದ ಸ್ಥಳೀಯರು ಬಾಲಕಿಯನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದೆ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

See also  ರಾಜ್ಯ ಮಟ್ಟದ ಟೆಕ್ವಾಂಡೊದಲ್ಲಿ ಮಡಿಕೇರಿ ಜಿಲ್ಲೆಗೆ 2 ಚಿನ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು